ಮಹಿಳೆ ಮೇಲೆ ಹಲ್ಲೆ ಆರೋಪ

ಬಾದಾಮಿ: ಮಾನಭಂಗ, ದೌರ್ಜನ್ಯ ಮತ್ತು ಮಹಿಳೆ ಮೇಲೆ ತೀವ್ರ ಹಲ್ಲೆ ನಡೆಸಿದ್ದಾಗಿ ಅದೇ ಸಂಘಟನೆ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ನೀಡಿದ ದೂರಿನನ್ವಯ ಸಂಘಟನೆಯೊಂದರ ರಾಜ್ಯ ಕಾರ್ಯರ್ದ ರಮೇಶ ಬೀಳಗಿ ಎಂಬುವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪಿಎಸ್​ಐ ಎಚ್. ಎಸ್. ನಡಗಡ್ಡಿ ತಿಳಿಸಿದ್ದಾರೆ. ಆರೋಪಿ ರಮೇಶ ಬೀಳಗಿ ಮಹಿಳೆ ಮತ್ತು ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮಾನಭಂಗಕ್ಕೆ ಪ್ರಯತ್ನಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಮೇಲೆ ಕಲಂ ನಂ. 308, 323, 324, 354, ಹಾಗೂ 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾದಾಮಿ, ಮಾನಭಂಗ, ದೌರ್ಜನ್ಯ, ಸಂಘಟನೆ, ಮಾರಣಾಂತಿಕ ಹಲ್ಲೆ, ಆರೋಪಿ, ಪ್ರಕರಣ, Badami, Rape, Violence, Organisation, Deadly attack, Allegation, Case, IN