ಕಾರ್ಮಿಕರ ಸನ್ಮಾನ ಕಾರ್ಯ ಶ್ಲಾಘನೀಯ

ಬಾದಾಮಿ: ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಹಲವಾರು ವರ್ಷಗಳಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿ ಮಾಲೀಕರು ಹಾಗೂ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿರುವ ಕಾರ್ಮಿಕರನ್ನು ಗುರುತಿಸಿ ವಿಶ್ವಚೇತನ ಸಂಸ್ಥೆ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಎಸ್.ಎಸ್. ಇಂಗಳೆ ಹೇಳಿದರು.

ನಗರದ ಮಾಹಾಕೂಟೇಶ್ವರ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ವಿಶ್ವಚೇತನ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಮಿಕರಿಗೆ ಸನ್ಮಾನ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಮಿಕರಾದ ಶಾಂತವ್ವ ಬಳಗಾರ, ಶಿವಪ್ಪ ಹರನಟ್ಟಿ, ಖಾಜಾಮೈನುದ್ದೀನ್ ಬಾಣದಾರ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಆಟ-ಮಾಟ ಧಾರವಾಡ ಅರ್ಪಿಸುವ ಮಹದೇವ ಹಡಪದ ನಿರ್ದೇಶನದ ಮತ್ತೊಬ್ಬ ಮಾಯಿ ನಾಟಕ ಪ್ರದರ್ಶನಗೊಂಡಿತು. ಸಂಸ್ಥೆ ಕಾರ್ಯದರ್ಶಿ ಇಷ್ಟಲಿಂಗ ಶಿರಸಿ ನಿರೂಪಿಸಿದರು. ಉಜ್ವಲ ಬಸರಿ ವಂದಿಸಿದರು.

Leave a Reply

Your email address will not be published. Required fields are marked *