ವಸ್ತು ಸಂಗ್ರಹಾಲಯಗಳು ಜ್ಞಾನ ಖಣಜ

ಬಾದಾಮಿ: ಚಾಲುಕ್ಯರ ಕಾಲದ ಗತವೈಭವ ಸಂಗ್ರಹಿಸಿರುವ ವಸ್ತು ಸಂಗ್ರಹಾಲಯದಲ್ಲಿನ ಜ್ಞಾನ ಅಭ್ಯಸಿಸಿ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕೆಂದು ಹಂಪಿ ಕವಿವಿ ಬನಶಂಕರಿ ಶಾಖೆ ಆಡಳಿತಾಧಿಕಾರಿ ಡಾ.ಕೆ.ಎಚ್. ಕಟ್ಟಿ ಹೇಳಿದರು.

ನಗರದ ಭಾರತೀಯ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬಾದಾಮಿಯ ವಸ್ತು ಸಂಗ್ರಹಾಲಯ ದೇಶದ ಉನ್ನತ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. ವಸ್ತು ಸಂಗ್ರಹಾಲಯಗಳನ್ನು ರಾಮಾಯಣ ಕಾಲದಲ್ಲಿ ಪ್ರತಿಮಾಗೃಹ ಎಂದು ಕರೆಯಲಾಗುತ್ತಿತ್ತು ಎಂದು ಹೇಳಿದರು.

ಇಲಾಖೆ ಅಧಿಕಾರಿ ರೇಷ್ಮಾ ಸಾವಂತ, ಕಸಾಪ ತಾಲೂಕಾಧ್ಯಕ್ಷ ರವಿ ಕಂಗಳ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನಿಪ ಸಂಘದ ಉಪಾಧ್ಯಕ್ಷ ಅಡವೀಂದ್ರ ಇನಾಮದಾರ ಮಾತನಾಡಿದರು. ಆರ್. ಮೋಹಿಂದ್ರನ್, ಅಜಯ ಜನಾರ್ದನ್.

ದಿನಾಚರಣೆ ಅಂಗವಾಗಿ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಚಿತ್ರಕಲೆ, ಸಂಗೀತ ಹಾಗೂ ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.