15ರಂದು ವಿಕ್ರಮ ಪ್ರತಿಷ್ಠಾನದ ದಶಮಾನೋತ್ಸವ

ಬಾದಾಮಿ: ನಗರದ ವಿಕ್ರಮ ಪೈಲ ಪ್ರತಿಷ್ಠಾನದ ದಶಮಾನೋತ್ಸವ ನಿಮಿತ್ತ ಜೂ.15ರಂದು ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಕೃತಿ ಬಿಡುಗಡೆ ಸಮಾರಂಭ ಜರುಗಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಡಿ.ಎಂ. ಪೈಲ ಹೇಳಿದರು.

ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ, ಡಿ.ಎಂ. ಪೈಲ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಸಿ. ಗದ್ದಿಗೌಡರ ಅವರು, ಸಾಹಿತಿ ಚಂದ್ರಕಾಂತ ತಾಳಿಕೋಟಿ ಅವರ ಕಪ್ಪು ಡೈರಿ (ಪತ್ತೆದಾರಿ ಕಾದಂಬರಿ) ಬಿಡುಗಡೆಗೊಳಿಸುವರು. ಸಾಹಿತಿ ಬಿ.ಪಿ. ಹಿರೇಸೋಮಣ್ಣವರ ಅವಲೋಕನ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಂಗಪ್ಪ ಆಲೂರ, ಆರ್.ಎಂ. ಪಾಟೀಲ, ನಾಮದೇವ ತುಳಸಿಗೇರಿ, ಶ್ರೀಕಾಂತ ಗೌಡರ ಅವರಿಗೆ ತತ್ವಜ್ಞಾನಿ ಮಹಾಯೋಗಿ ವೇಮನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ತಾಲೂಕಿನ ದೀಪಿಕಾ ಹೊಸಮನಿ, ಸ್ವಾತಿ ಪತ್ತಾರ, ವಿಜಯಲಕ್ಷ್ಮೀ ಕವಿಶೆಟ್ಟಿ, ಇಂದಿರಾ ಸೂಳಿಕೇರಿ, ಪ್ರತಿಭಾ ಗದ್ದನಕೇರಿ, ಪಿಯುಸಿ ವಿಭಾಗದ ಶಂಕ್ರವ್ವ ಗೌಡರ, ಗಿರೀಶ ಮ್ಯಾಗೇರಿ, ದೀಪಾ ಪರಣ್ಣವರ, ಪೂಜಾ ಹನುಮಸಾಗರ, ಪ್ರಮೋದ ಮುಂಡರಗಿ, ಮಹೇಶ ಲಮಾಣಿ ಅವರಿಗೆ ಪುರಸ್ಕಾರ ನಡೆಯಲಿದೆ ಎಂದು ಹೇಳಿದರು.

ವಿಜಯಕುಮಾರ ದೇಸಾಯಿ, ಎಸ್.ಕೆ. ಪಾಟೀಲ, ಚಂದ್ರಕಾಂತ ತಾಳಿಕೋಟಿ, ಸಿ.ವಿ. ಚನ್ನವೀರಗೌಡರ, ಬಿ.ಜಿ. ಸಂಗನಗೌಡ, ವಿಜಯರಾವ್ ಕುಲಕರ್ಣಿ, ರವಿ ಯಡ್ರಾಮಿ, ರಾಘು ರಾವಳ, ವಿಜಯ ಪೈಲ, ಅಶೋಕ ಭಾವಿ, ಬಸವರಾಜ ಕರಡಿ ಇತರರಿದ್ದರು.

Leave a Reply

Your email address will not be published. Required fields are marked *