ಟಾಪ್ ಸ್ಕೂಲ್ ಆಪ್ ಇಂಡಿಯಾ ಪ್ರಶಸ್ತಿ

ಬಾದಾಮಿ: ದೆಹಲಿಯ ಎಲೈಟ್ ಗ್ರುಪ್ಸ್ ಹಾಗೂ ಡಿಜಿಟಲ್ ಲರ್ನಿಂಗ್ ಪಬ್ಲಿಕೇಷನ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತಾಲೂಕಿನ ಚೊಳಚಗುಡ್ಡ ಗ್ರಾಮದ ನವಚೇತನ ಎಜುಕೇಷನ್ ಸೊಸೈಟಿಯ ನವಚೇತನ ಹಿರಿಯ ಪ್ರಾಥಮಿಕ ಶಾಲೆಗೆ ಟಾಪ್ ಸ್ಕೂಲ್ ಆಪ್ ಇಂಡಿಯಾ ಪ್ರಶಸ್ತಿ ಲಭಿಸಿದೆ.

ಮಕ್ಕಳ ಶೈಕ್ಷಣಿಕ ಪ್ರಗತಿ, ಸುಸಜ್ಜಿತ ಕಟ್ಟಡ, ಬೋಧಕ ಸಿಬ್ಬಂದಿ, ಮಕ್ಕಳ ಸಂಖ್ಯೆ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿ ಗುರುತಿಸಿ ದಕ್ಷಿಣ ಭಾರತದದ ಗ್ರಾಮೀಣ ಪ್ರದೇಶದಲ್ಲಿ ಶೀಘ್ರ ಅಭಿವೃದ್ಧಿ ಹೊಂದಿದ ಶಾಲೆ ಎಂದು ಗುರುತಿಸಿ ಪ್ರಶಸ್ತಿ ನಿಡಿರುವುದು ತಾಲೂಕಿಗೆ ಮತ್ತು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ನಿರ್ದೇಶಕ ಡಾ. ಗಿರೀಶ ದಾನಪ್ಪಗೌಡರ ತಿಳಿಸಿದರು.

ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಿಂದ 2 ಸಾವಿರ ಶಾಲೆಗಳು, ರಾಜ್ಯದ 300 ಶಾಲೆಗಳು ಭಾಗವಹಿಸಿದ್ದವು. ರಾಜ್ಯದ ಗ್ರಾಮೀಣ ಬಾಗದಿಂದ ಟಾಪ್ ಟೆನ್ ಬಳಗದಲ್ಲಿ ಚೊಳಚಗುಡ್ಡ ಗ್ರಾಮದ ನವಚೇತನ ಹಿರಿಯ ಪ್ರಾಥಮಿಕ ಶಾಲೆ ಸ್ಥಾನ ಪಡೆದುಕೊಂಡಿದ್ದು ಸಂತಸ ತಂದಿದೆ ಎಂದರು. ಮುಖ್ಯ ಶಿಕ್ಷಕ ಚೇತನ ಅನವಾಡೆ, ಪ್ರಶಾಂತ ಪಡಿಯಪ್ಪನವರ ಇದ್ದರು.