ಸಮಸ್ಯೆಗೆ ಸ್ಪಂದಿಸುವಂತೆ ತಾಕೀತು

ಬಾದಾಮಿ: ತಾಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿ ಬಾದಾಮಿಗೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಲೋಕೋಪಯೋಗಿ ಇಲಾಖೆಯಲ್ಲಿ ಅಕಾರಿಗಳ ಸಭೆ ನಡೆಸಿ ಕುಡಿಯುವ ನೀರು, ಮೇವು ಸಂಗ್ರಹ, ಗೋ ಶಾಲೆ ಸೇರಿ ಇನ್ನಿತರ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ 165 ಗ್ರಾಮಗಳಲ್ಲಿ 37 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ 43 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಮುಖಾಂತರ ನೀರು ಪಡೆದು ಪೂರೈಸಲಾಗುತ್ತಿದೆ. ಅಗತ್ಯವಾದಷ್ಟು ಮೇವು ಸಂಗ್ರಹವಿದೆ ಮತ್ತು ಗೋಶಾಲೆ ತೆರೆದಿದಿಲ್ಲ ಎಂದು ಉಪ ವಿಭಾಗಾಕಾರಿ ಎಚ್. ಜಯಾ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ ಯೋಜನೆಯ ಮೊದಲ ಕಂತು ಎಷ್ಟು ರೈತರಿಗೆ ತಲುಪಿದೆ ಎಂಬುದರ ಅಂಕಿ-ಅಂಶ ನೀಡುವಂತೆ ಬಿಎಸ್‌ವೈ ಅಕಾರಿಗಳನ್ನು ಕೇಳಿದಾಗ, ಜಿಲ್ಲೆಯಲ್ಲಿ 19,990 ಫಲಾನುಭವಿಗಳಿದ್ದು, 18 ಸಾವಿರ ಫಲಾನುಭವಿಗಳ ದಾಖಲಾತಿ ನೀಡಲಾಗಿದೆ ಎಂದು ಎಸಿ ಜಯಾ ತಿಳಿಸಿದರು. 27.78 ಕೋಟಿ ರೂ. ನೇರವಾಗಿ ರೈತರ ಖಾತೆಗೆ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.

ಬರ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಅಕಾರಿಗಳು ವಿಫಲವಾಗಿದ್ದೀರಿ ಎಂದು ತರಾಟೆಗೆ ಯಡಿಯೂರಪ್ಪ ತೆಗೆದುಕೊಂಡರು. ಇದು ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಇರುವುದರಿಂದ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಇಲ್ಲಿನ ಜನ ಜಾನುವಾರುಗಳಿಗೆ ಕುಡಿಯುವ ನೀರು, ದುಡಿಯುವ ಕೈಗಳಿಗೆ ಕೆಲಸ ಕೊಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಅಕಾರಿಗಳಿಗೆ ಕಿವಿಮಾತು ಹೇಳಿದರು.

ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಗೋವಿಂದ ಕಾರಜೋಳ, ವಿ.ಪ. ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಲಕ್ಷ್ಮಣ ಸವದಿ, ನಾರಾಯಣಸಾ ಭಾಂಡಗೆ, ಮಹಾಂತೇಶ ಮಮದಾಪುರ, ಅಶೋಕ ಕಟ್ಟಿಮನಿ, ಬಿ.ಪಿ. ಹಳ್ಳೂರ, ಶಾಂತಗೌಡ ಪಾಟೀಲ, ನಾಗರಾಜ ಕಾಚಟ್ಟಿ, ಬಸವರಾಜ ಪಾಟೀಲ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಕಾರಿಗಳು ಭಾಗವಹಿಸಿದ್ದರು.

ಬಹುತೇಕ ಕಡೆ ನೀರಿನ ಘಟಕ ಸ್ಥಗಿತ
ತಾಲೂಕಿನ 33 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಸಮಸ್ಯೆಗೆ ಅಕಾರಿಗಳು ಸ್ಪಂದಿಸುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ತಾಲೂಕಿನ ಬಹುತೇಕ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಅಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಮುರುಗೇಶ ನಿರಾಣಿ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Leave a Reply

Your email address will not be published. Required fields are marked *