ಬಜೆಟ್ ವಿರೋಧಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಬಾದಾಮಿ: ರಾಜ್ಯ ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಸರ್ಕಾರದ ಬಜೆಟ್​ನಲ್ಲಿ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟಿಸಿ ಉಪತಹಸೀಲ್ದಾರ್ ಮೂಲಕ ರಚಾಜ್ಯಪಾಲರಿಗೆ ಮನವಿ ಮಾಡಿದರು.

ಸ್ಥಳೀಯ ವೀರಪುಲಿಕೇಶಿ ವಿದ್ಯಾಸಂಸ್ಥೆ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ರಾಮ ದುರ್ಗ ಕ್ರಾಸ್, ಟಾಂಗಾ ಕೂಟ, ಹಳೇ ತಹಸೀಲ್ದಾರ್ ಕಚೇರಿ, ಬಸ್ ನಿಲ್ದಾಣ ವರೆಗೆ ಸಂಚರಿಸಿ ಸರ್ಕಾರ ಶೈಕ್ಷಣಿಕ ಕ್ಷೇತ್ರ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ರವಿ ವಡ್ಡರ ಮಾತನಾಡಿ, ವಿದ್ಯಾರ್ಥಿಗಳಿಗೆ ಕೂಡಲೇ ಉಚಿತ ಬಸ್ ಪಾಸ್ ವಿತರಿಸಬೇಕು, ಎಸ್​ಸಿ, ಎಸ್​ಟಿ, ಒಬಿಸಿ ಸರ್ಕಾರಿ ಹಾಸ್ಟೆಲ್​ಗಳ ಉನ್ನತೀಕರಣ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಸೇರಿ ಶಿಕ್ಷಣ ಕ್ಷೇತ್ರದ ಅವಶ್ಯಕತೆ ಪೂರೈಸುವಲ್ಲಿ ರಾಜ್ಯ ಸರ್ಕಾರದ ಬಜೆಟ್ ವಿಫಲವಾಗಿದೆ ಎಂದು ಆರೋಪಿಸಿದರು.

ತಾಲೂಕು ಸಂಚಾಲಕ ರಿಯಾಜ್ ಹೊಂಡದಕಟ್ಟಿ, ಅಕ್ಷಯ ಮಾಳಗಿ, ಮೌನೇಶ ಬಡಿಗೇರ, ಸಿದ್ದು ಪಟ್ಟಣಶೆಟ್ಟಿ, ಪ್ರಕಾಶ ಅಮರಗೋಳ, ಉಮೇಶ ಸುಳಿಕಲ್, ಅನೀಲ ಹಿರೇಮಠ, ಮಲ್ಲಿಕಾರ್ಜುನ ವಡ್ಡರ, ಚಂದ್ರು ಕೋಣನ್ನವರ, ಬಸವರಾಜ ಧನ್ನೂರ, ಮಂಜು ಹಡಪದ, ವಿಠ್ಠಲ ಮುಷ್ಟಿಗೇರಿ, ಅಭಿಷೇಕ ಅಂಬಿಗೇರ, ಗುರುರಾಜ ಕಟ್ಟಿಮನಿ, ಪ್ರಕಾಶ ಅರಗಿನಶೆಟ್ಟಿ ಸೇರಿದಂತೆ ಎಬಿವಿಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.