ಕುಮಾರ ಶ್ರೀಗಳ ಅದ್ದೂರಿ ರಥೋತ್ಸವ

ಬಾದಾಮಿ: ಸಮೀಪದ ಮಲಪ್ರಭಾ ನದಿ ತಟದಲ್ಲಿರುವ ಸುಕ್ಷೇತ್ರ ಮದ್ವೀರೇಶ್ವರ ಶಿವಯೋಗ ಮಂದಿರದಲ್ಲಿ 109ನೇ ಜಾತ್ರೋತ್ಸವದ ಅಂಗವಾಗಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ರಥೋತ್ಸವ ಸಕಲ ವಾದ್ಯಮೇಳದೊಂದಿಗೆ ಶ್ರದ್ಧಾ, ಭಕ್ತಿಯಿಂದ ಜರುಗಿತು.

ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ (65 ಅಡಿ) ರಥವೆಂದು ಖ್ಯಾತಿ ಪಡೆದಿರುವ ಹಾನಗಲ್ಲ ಕುಮಾರ ಶ್ರೀಗಳ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ನೆರೆದಿದ್ದರು.

ಬೆಳಗ್ಗೆಯಿಂದಲೇ ಹಾನಗಲ್ಲ ಗುರು ಕುಮಾರೇಶ್ವರರ ಕರ್ತೃ ಗದ್ದುಗೆ ಹಾಗೂ ಸದಾಶಿವ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಅಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಜರುಗಿದವು. ಭಕ್ತರು ಹೂ ಹಣ್ಣು ಸಮರ್ಪಿಸಿದರು. ಗದ್ದುಗೆ ಮಂಟಪಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು.

ಸಂಸ್ಥೆ ಅಧ್ಯಕ್ಷ ಸಂಗನಬಸವ ಶ್ರೀಗಳು, ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿರಾಜೇಂದ್ರ ಶ್ರೀಗಳು, ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ, ಮುಂಡರಗಿ ಜಗದ್ಗುರು ಅನ್ನದಾನ ಮಹಾಶಿವಯೋಗಿಗಳು, ಸುವರ್ಣಗಿರಿ ವಿರಕ್ತಮಠ ಸಿದ್ದಲಿಂಗ ಸ್ವಾಮೀಜಿ, ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಲಸೂರ ಶಿವಾನಂದ ಸ್ವಾಮೀಜಿ, ಶಿವಬಸವ ಶ್ರೀಗಳು, ಶಿವಯೋಗಿ ಶ್ರೀಗಳು, ಶಿವಾನಂದ ಶ್ರೀಗಳು, ಚನ್ನಬಸವ ಶ್ರೀಗಳು, ಸಿದ್ದಲಿಂಗ ಶ್ರೀಗಳು, ಮಹಾಂತಲಿಂಗ ಶಿವಾಚಾರ್ಯರು, ಚನ್ನಮಲ್ಲ ಶ್ರೀಗಳು, ಗುರುಸಿದ್ದ ಶ್ರೀಗಳು, ಪಂಚಾಕ್ಷರಿ ಶಿವಾಚಾರ್ಯ, ಸಿದ್ದರಾಮ ದೇವರು, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಶಾಸಕ ಜಿ.ಎಸ್. ಪಾಟೀಲ, ಕುಮಾರಗೌಡ ಜನಾಲಿ, ಎಂ.ಬಿ. ಹಂಗರಗಿ, ಎಂ.ಡಿ. ಯಲಿಗಾರ, ಮುಕ್ಕಣ್ಣ ಜನಾಲಿ, ಡಾ.ಆರ್.ಸಿ. ಭಂಡಾರಿ ಇತರರಿದ್ದರು.