More

    ಕ್ರಿಸ್​ಮಸ್​ಗಿಲ್ಲ ಬಚ್ಚನ್ ಪಾಂಡೆ

    ನಟ ಅಕ್ಷಯ್ ಕುಮಾರ್ ಅಭಿನಯದ ‘ಗುಡ್​ನ್ಯೂಸ್’ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹೊತ್ತಲ್ಲೇ ಅಭಿಮಾನಿಗಳಿಗೆ ಅಕ್ಷಯ್ ಮತ್ತೊಂದು ಗುಡ್​ನ್ಯೂಸ್ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ‘ಬಚ್ಚನ್ ಪಾಂಡೆ’ ನ್ಯೂ ಲುಕ್ ಹಂಚಿಕೊಂಡು, ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿಸಿದ್ದಾರೆ. ಅಲ್ಲದೆ, 2021ರ ಜ.22ರಂದು ಚಿತ್ರ ತೆರೆಕಾಣಲಿದೆ ಎಂದು ತಿಳಿಸಿದ್ದಾರೆ. ಕ್ರಿಸ್​ವುಸ್​ಗೆ ‘ಬಚ್ಚನ್ ಪಾಂಡೆ’ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿತ್ತು.

    ‘‘ಲಾಲ್​ಸಿಂಗ್ ಛಡ್ಡಾ’ ಚಿತ್ರ ಕೂಡ ಕ್ರಿಸ್​ವುಸ್​ಗೆ ತೆರೆ ಕಾಣುತ್ತಿದೆ. ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆ ಆದರೆ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಹೀಗಾಗಿ ‘ಬಚ್ಚನ್ ಪಾಂಡೆ’ ಬಿಡುಗಡೆ ದಿನ ಮುಂದೂಡಿ’ ಎಂದು ಅಕ್ಷಯ್ ಬಳಿ ನಟ ಆಮೀರ್ ಖಾನ್ ಮನವಿ ಮಾಡಿದ್ದರು.

    ಇದಕ್ಕೆ ಸ್ಪಂದಿಸಿರುವ ಅಕ್ಷಯ್, ‘ನಾನು-ಆಮೀರ್ ಒಳ್ಳೆಯ ಸ್ನೇಹಿತರು. ಅವರ ಮನವಿಯಂತೆ ‘ಬಚ್ಚನ್ ಪಾಂಡೆ’ ಚಿತ್ರ ಕ್ರಿಸ್​ವುಸ್​ಗೆ ಬದಲಾಗಿ 2021ರ ಜ.22ಕ್ಕೆ ಬಿಡುಗಡೆ ಮಾಡಲಿದ್ದೇವೆ’ ಎಂದು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆಮೀರ್ ಖಾನ್ ಇದಕ್ಕೆ ಧನ್ಯವಾದ ತಿಳಿಸಿ, ‘ಬಚ್ಚನ್ ಪಾಂಡೆ’ ಚಿತ್ರತಂಡಕ್ಕೆ ಶುಭ ಹಾರೈಸಿದ್ದು, ‘ಸಿನಿಮಾ ನೋಡಲು ಕಾಯುತ್ತಿದ್ದೇನೆ’ ಎಂದಿದ್ದಾರೆ. ಸಾಜೀದ್ ನಾಡಿಯಡ್​ವಾಲಾ ಬಂಡವಾಳ ಹೂಡಿರುವ ‘ಬಚ್ಚನ್ ಪಾಂಡೆ’ ಚಿತ್ರಕ್ಕೆ ಫರ್ಹಾದ್ ಆಕ್ಷನ್-ಕಟ್ ಹೇಳಿದ್ದು, ಅಕ್ಷಯ್ಗೆ ಜತೆಯಾಗಿ ಕೃತಿ ಸನೊನ್ ಕಾಣಿಸಿಕೊಂಡಿದ್ದಾರೆ. ಸದ್ಯ ಅಕ್ಷಯ್ ‘ಸೂರ್ಯವಂಶಿ’, ‘ಲಕ್ಷ್ಮೀ ಬಾಂಬ್’, ‘ಪೃಥ್ವಿರಾಜ್’ ಸಿನಿಮಾಗಳಲ್ಲಿ ಬಿಜಿ ಆಗಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts