ಮಗು ಮರೆತ ತಾಯಿಗಾಗಿ ಏರ್​ಪೋರ್ಟ್​ಗೆ ಮರಳಿದ ವಿಮಾನ

ಜೆಡ್ಡಾ: ಪ್ರಯಾಣಿಕರು ಬ್ಯಾಗ್ ಅಥವಾ ಅಮೂಲ್ಯ ವಸ್ತುಗಳನ್ನು ಮರೆತು ವಿಮಾನ ಹತ್ತಿ ರಂಪಾಟ ಮಾಡುವುದು ಸಾಮಾನ್ಯ. ಆದರೆ ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನೇ ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ

ಬಿಟ್ಟು ವಿಮಾನವೇರಿದ ಅಪರೂಪದ ಘಟನೆ ನಡೆದಿದೆ. ಆಕೆಗೆ ವಿಮಾನವೇರಿದ ಸ್ವಲ್ಪ ಸಮಯದ ಬಳಿಕ ಮಗುವಿನ ನೆನಪಾಗಿದೆ. ಆಗ ವಿಮಾನದ ಸಿಬ್ಬಂದಿಗೆ ಆಕೆ ವಿಷಯ ತಿಳಿಸಿ ಆತಂಕ ವ್ಯಕ್ತಪಡಿಸಿದ್ದಾಳೆ. ವಿಮಾನದ ಸಿಬ್ಬಂದಿ ಹಾಗೂ ಪೈಲಟ್ ಕೂಡಲೇ ಏರ್ ಟ್ರಾಫಿಕ್ ಕಂಟ್ರೋಲ್​ಗೆ (ಎಟಿಸಿ) ಮಾಹಿತಿ ನೀಡಿದ್ದಾರೆ.

ತಾಯಿ ಹಾಗೂ ಮಗುವಿನ ವಿಚಾರವಾದ ಹಿನ್ನೆಲೆಯಲ್ಲಿ ವಿಮಾನವನ್ನು ಮತ್ತೆ ಜೆಡ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಗಿದೆ. ಮಗುವಿನ ಜತೆ ತಾಯಿ ಮತ್ತೆ ಪ್ರಯಾಣ ಮುಂದುವರಿಸಿದ್ದಾರೆ.(ಏಜೆನ್ಸೀಸ್​)