
ಯಾದಗಿರಿ : ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗುವ ಲಿಂಗ ನಿರ್ಧರಣೆಯ ದುರ್ಬಳಕೆಯನ್ನು ತಡೆಗಟ್ಟುತ್ತದೆ. ಇತ್ತೀಚಿನ ದಿನಗಳಲ್ಲಿ ಲಿಂಗ ನಿರ್ಧರಣೆಯ ಮಾಡುವ (ಗರ್ಭಪೂರ್ವ ಮತ್ತು ನಂತರದಲ್ಲಿ) ತಂತ್ರಜ್ಞಾನವು ಸಾಕಷ್ಟು ಮುಂದುವರಿದಿರುವ ಕಾರಣದಿಂದ ಪರಿಣಾಮಕಾರಿ ಅನುಷ್ಟಾನಕ್ಕೆ ತೊಡಕಾಗುತ್ತಿದ್ದ ಕಾರಣದಿಂದ ಮೂಲ ಕಾಯ್ದೆ ಮತ್ತು ನಿಯಮಾವಳಿಗಳಿಗೆ ತಿದ್ದುಪಡಿ ತಂದು ಪ್ರಸ್ತುತ ಈ ಕಾಯ್ದೆಯನ್ನು “ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ಮಾಡುವತಂತ್ರ ದುರ್ಬಳಕೆ ತಡೆಕಾಯ್ದೆ” ಕುರಿತು ಗೌರವಾನ್ವಿತ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.
ಯಾದಗಿರಿ ನಗರದ ಸರಕಾರಿ ಪ್ರೌಢ ಶಾಲೆ ಸ್ಟೇಷನ್ ಬಜಾರ ಇಂದು ಶಾಲಾ ಮಕ್ಕಳಿಗೆ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳಿಗೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರ ಕುರಿತು, ಮಕ್ಕಳಿಗೆ ಕಾನೂನಿನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲನ್ಯಾಯ ಕಾಯ್ದೆ-2015 (ಮಕ್ಕಳ ರಕ್ಷಣೆ ಮತ್ತು ಪಾಲನೆ) ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಮತ್ತು ಪೋಕ್ಸೋ-2012ರ ಕಾಯ್ದೆಯ ತಿದ್ದುಪಡಿ ಕಾಯ್ದೆಯ ಪರಿಚಯ. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989 ಬಗ್ಗೆ, ಮಕ್ಕಳ ಹಕ್ಕುಗಳು ಬಾಲನ್ಯಾಯ ಕಾಯ್ದೆಯ ಹಿನ್ನಲ್ಲೆ, ಸರ್ಕಾರದ ಅನುಮೋದನೆ, ಉದ್ದೇಶಗಳು, ಕಾಯಿದೆಯ ರಚನೆ, ಬಾಲ ನ್ಯಾಯ ಮಂಡಳಿ ಪ್ರಮುಖ ಅಂಶಗಳು, ಬಾಲ ನ್ಯಾಯಮಂಡಳಿಗೆ ಇರುವ ಅಧಿಕಾರ ಮತ್ತು ಆದೇಶ ಬಗ್ಗೆ, ವಿಶೇಷ ಬಾಲ ಪೊಲೀಸ್ ಘಟಕ ಎಸ್.ಜೆ.ಪಿ.ಯು ಬಗ್ಗೆ, ಮಕ್ಕಳಿಗಿರುವ ಪುನರ್ವಸತಿ ಕೇಂದ್ರಗಳ ಬಗ್ಗೆ, ಮಕ್ಕಳ ಕಲ್ಯಾಣ ಸಮಿತಿಗಳು ಎಲ್ಲಿ, ಯಾವಾಗ, ಹೇಗೆ ಕಾರ್ಯನಿರ್ವಹಿಸುತ್ತವೆ, ಮಕ್ಕಳ ಕಲ್ಯಾಣ ಸಮಿತಿಯನ್ನು ಹಾಗೂ ಮಕ್ಕಳ ಸಹಾಯವಾಣಿ-1098ನ್ನು ಸಂಪರ್ಕಿಸುವಲ್ಲಿ ಸಾರ್ವಜನಿಕರು ತಿಳಿದಿರಬೇಕಾದ, ಅನುಸರಿಸಬೇಕಾದ ಅಂಶಗಳ ಬಗ್ಗೆ ತಿಳಿಸಿದರು.
ಮಕ್ಕಳ ಪ್ರಮುಖ ಹಕ್ಕುಗಳ ಸಮೋಹಗಳಾದ : ಜೀವಿಸುವ ಹಕ್ಕು, ರಕ್ಷಣೆ ಹೊಂದುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಭಾಗವಹಿಸುವ ಹಕ್ಕು, ಕುರಿತು ತರಬೇತಿ ಶಿಬಿರಾರ್ಥಿಗಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ವಿವರ ನೀಡಿದರು.
ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯ ಕುರಿತು : ಈ ಕಾಯ್ದೆಯು ಗರ್ಭ ಪೂರ್ವ ಮತ್ತು ಪ್ರಸವ ಪೂರ್ವದಲ್ಲಿ ಲಿಂಗಪತ್ತೆ ಮಾಡುವುದನ್ನು ನಿಷೇಧಿಸುತ್ತದೆ. ಪ್ರಸವ ಪೂರ್ವದಲ್ಲಿ ಆರೋಗ್ಯದ ಕಾರಣಗಳಿಗೆ ಅಂದರೆ ವರ್ಣತಂತುಗಳ ವೈಪರಿತ್ಯಗಳು ಅಥವಾ ಇನ್ನಿತರ ಆರೋಗ್ಯ ಸಂಬAಧಿ ವೈಪರಿತ್ಯಗಳು ಅಥವಾ ಮೆಟಾಬಾಲಿಕ್
ಡಿಸಾರ್ಡರ್ ಅಥವಾ ಕೆಲವು ಅಜನ್ಮ ವಿಕೃತತೆ ಅಥವಾ ಲಿಂಗ ಸಂಬAಧಿ ವೈಪರೀತ್ಯಗಳಿಗಾಗಿ ಈ ಪರೀಕ್ಷೆಯನ್ನು ಸಿಂಧುಗೊಳಿಸುತ್ತದೆ ಮತ್ತು ಹೆಣ್ಣು ಭ್ರೂಣ ಹತ್ಯೆಗೆಕಾರಣವಾಗುವ ಲಿಂಗ ನಿರ್ಧರಣೆಯ ದುರ್ಬಳಕೆಯನ್ನು ತಡೆಗಟ್ಟುತ್ತದೆ. ಇತ್ತೀಚಿನ ದಿನಗಳಲ್ಲಿ ಲಿಂಗ ನಿರ್ಧರಣೆಯ ಮಾಡುವ (ಗರ್ಭಪೂರ್ವ ಮತ್ತು ನಂತರದಲ್ಲಿ) ತಂತ್ರಜ್ಞಾನವು ಸಾಕಷ್ಟು ಮುಂದುವರಿದಿರುವ ಕಾರಣದಿಂದ ಪರಿಣಾಮಕಾರಿ ಅನುಷ್ಟಾನಕ್ಕೆ ತೊಡಕಾಗುತ್ತಿದ್ದ ಕಾರಣದಿಂದ ಮೂಲ ಕಾಯ್ದೆ ಮತ್ತು ನಿಯಮಾವಳಿಗಳಿಗೆ ತಿದ್ದುಪಡಿ ತಂದು ಪ್ರಸ್ತುತ ಈ ಕಾಯ್ದೆಯನ್ನು “ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ಮಾಡುವತಂತ್ರ ದುರ್ಬಳಕೆ ತಡೆಕಾಯ್ದೆ” ಎಂದು ಕರೆಯಲಾಯಿತು ಎಂದು ಹೇಳಿದರು.