ಮುದ್ದಾದ ಮಗುವಿಗೆ ಜನ್ಮ ನೀಡಿದ ಸಾನಿಯಾ, ಚಂದ್ರನ ಮೇಲಿದ್ದಾರಂತೆ ಮಲ್ಲಿಕ್​

ನವದೆಹಲಿ: ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್​ಪಟು ಶೋಯೆಬ್​ ಮಲ್ಲಿಕ್​ಗೆ ಗಂಡು ಮಗುವಾಗಿದೆ.

ಹೌದು, ಈ ವಿಷಯವನ್ನು ಶೋಯೆಬ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, “ನಮಗೆ ಗಂಡು ಮಗುವಾಗಿದೆ ಎಂದು ಹೇಳಿಕೊಳ್ಳಲು ಉತ್ಸುಕನಾಗಿದ್ದೇನೆ. ನನ್ನ ಹುಡುಗಿಯೂ ಎಂದಿನಂತೆ ಆರೋಗ್ಯವಾಗಿದ್ದಾಳೆ. ನಿಮ್ಮ ಶುಭ ಹಾರೈಕೆ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು #BabyMirzaMalik” ಎಂದು ಹೇಳಿದ್ದಾರೆ.

ಇನ್ನು ಶೋಯೆಬ್​ ಮಲ್ಲಿಕ್​ ಮ್ಯಾನೇಜರ್​ ಅಮೀಮ್​ ಹಕ್​ ಕೂಡ ಸಾನಿಯಾ ದಂಪತಿಗೆ ಮಗುವಾಗಿರುವ ವಿಷಯವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯ ಬಂದಾಗಿನಿಂದಲೂ ಶೋಯೆಬ್​ ಚಂದ್ರನ ಮೇಲಿದ್ದಾರೆ. ಮಗು ಮತ್ತು ತಾಯಿ ಖುಷಿಯಿಂದಿದ್ದಾರೆ ಎಂದು ಅಮೀಮ್​ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಈ ವಿಷಯವನ್ನು ಬಾಲಿವುಡ್​ ನಿರ್ದೇಶಕಿ ಫರಾಹ್​ ಖಾನ್​ ಮೊದಲು ಇನ್​ಸ್ಟಾಗ್ರಾಂನಲ್ಲಿ ಬ್ರೇಕ್​ ಮಾಡಿದ್ದು, ಹಲವು ಸಮಯದ ನಂತ ಒಳ್ಳೆಯ ಸುದ್ದಿ ಕೇಳುತ್ತಿದ್ದಾನೆ ಎಂದು ಸಾನಿಯಾ ಹಾಗೂ ಮಲಿಕ್​ಗೆ ಶುಭ ಕೋರಿದ್ದಾರೆ.

https://www.instagram.com/p/BpifBBdgUTg/?utm_source=ig_embed

2010ರಲ್ಲಿ ಸಾನಿಯಾ, ಮಲ್ಲಿಕ್​ ಮದುವೆಯಾಗಿದ್ದು, ಏಪ್ರಿಲ್​ನಲ್ಲಿ ಸಾನಿಯಾ ಗರ್ಭಿಣಿಯಾಗಿರುವ ವಿಚಾರವನ್ನು ಹೇಳಿಕೊಂಡಿದ್ದರು. ಇನ್ನೂ ಸದ್ಯ ಟೆನ್ನಿಸ್​ನಿಂದ ದೂರ ಉಳೀದಿರುವ ಸಾನಿಯಾ ಮಗುವಿನ ಆರೈಕೆ ನಂತರ 2020 ಟೋಕಿಯೊ ಒಲಂಪಿಕ್​ನಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)