ರಾಮ ಮಂದಿರ ನಿರ್ಮಿಸಲು ಸುಗ್ರೀವಾಜ್ಞೆ ತಂದರೆ ನಮ್ಮದೇನೂ ಅಭ್ಯಂತರವಿಲ್ಲ: ಬಾಬ್ರಿ ಮಸೀದಿ ಕಕ್ಷಿದಾರ ಇಕ್ಬಾಲ್​ ಅನ್ಸಾರಿ

ಅಯೋಧ್ಯೆ: “ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸುಗ್ರೀವಾಜ್ಞೆ ಜಾರಿಗೆ ತಂದರೆ ತಮ್ಮದೇನೂ ಅಭ್ಯಂತರವಿಲ್ಲ,” ಎಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಕಕ್ಷಿದಾರ ಇಕ್ಬಾಲ್​ ಅನ್ಸಾರಿ ಅವರು ಮಂಗಳವಾರ ತಿಳಿಸಿದ್ದಾರೆ. ಇಕ್ಬಾಲ್​ ಅನ್ಸಾರಿ ಅವರ ಹೇಳಿಕೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

“ರಾಮ ಮಂದಿರ ನಿರ್ಮಿಸಲು ಒಂದು ವೇಳೆ ಸುಗ್ರೀವಾಜ್ಞೆ ಜಾರಿಗೆ ತಂದರೆ ನಮ್ಮದೇನೂ ಆಕ್ಷೇಪವಿಲ್ಲ. ಸುಗ್ರೀವಾಜ್ಞೆಯಿಂದ ದೇಶಕ್ಕೆ ಒಳಿತಾಗುತ್ತದೆ ಎಂದರೆ ಜಾರಿಗೆ ತನ್ನಿ. ನಾವು ಕಾನೂನನ್ನು ಪಾಲಿಸುವ ಜನತೆ. ಕಾನೂನಿಗೆ ನಾವು ತಲೆಬಾಗುತ್ತೇವೆ,” ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆ ವಿವಾದದ ತೀರ್ಪನ್ನು ಅತಿ ಶೀಘ್ರದಲ್ಲೇ ಪ್ರಕಟಿಸಬೇಕು ಅಥವಾ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂಬ ಕೂಗು ದೇಶಾದ್ಯಂತ ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅನ್ಸಾರಿ ಅವರ ಈ ಹೇಳಿಕೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.

ಅಯೋಧ್ಯೆ ವಿವಾದದ ಅರ್ಜಿಗಳ ವಿಚಾರಣೆಯನ್ನು ಮುಂದಿನ ಜನವರಿಯಿಂದ ವಿವಾರಣೆ ನಡೆಸುವುದಾಗಿ ಹೇಳಿರುವ ಸುಪ್ರೀಂ ಕೋರ್ಟ್​, ವಿಚಾರಣೆಯನ್ನು ದೀರ್ಘಾವಧಿಗೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿಗೆ ತಂದು ಮಂದಿರ ನಿರ್ಮಿಸಬೇಕು ಎಂಬ ಕೂಗು ದೇಶಾದ್ಯಂತ ಜೋರಾಗಿದೆ.

ರಾಮಮಂದಿರಕ್ಕಾಗಿ ಉಪವಾಸ

ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಬೇಕು: ಪೇಜಾವರ ಶ್ರೀ

ರಾಮಮಂದಿರ ವಿವಾದ ಪ್ರಕರಣ: ಶೀಘ್ರ ತೀರ್ಪು ಅಥವಾ ಕಾನೂನಿಗೆ ಆರ್​ಎಸ್ಎಸ್​ ಆಗ್ರಹ

ರಾಮಮಂದಿರಕ್ಕೆ ಆರೆಸ್ಸೆಸ್ ಗಡುವು

ರಾಮಮಂದಿರ ನಿರ್ಮಾಣಕ್ಕಿದು ಪ್ರಶಸ್ತ ಕಾಲ