More

    ರೈತರ ಬದುಕು ಬಂಗಾರವಾಗಲಿ

    ವಿಜಯಪುರ: ಈ ಭಾಗದಲ್ಲಿ ನೀರು ಸದಾ ಹರಿಯಬೇಕು. ಅಮೂಲ್ಯವಾದ ಜಲವನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಶ್ರೀಮಂತರಾಗಬೇಕು ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ನುಡಿದರು.
    ಬಬಲೇಶ್ವರ ತಾಲೂಕಿನ ಬಿಜ್ಜರಗಿಯಲ್ಲಿ ಶುಕ್ರವಾರ ನಡೆದ ಕೆರೆಗೆ ಬಾಗಿನ ಅರ್ಪಣೆ ಹಾಗೂ ಗಂಗಾಪೂಜೆ, ಆರೋಗ್ಯ ವಿಸ್ತರಣಾ ಕೇಂದ್ರ ಹಾಗೂ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು.
    ಜಗತ್ತು ಭಗವಂತನ ಸುಂದರವಾದ ರೂಪ, ಈ ಸಮಾಜದಲ್ಲಿ ಎಲ್ಲರೂ ಚೆನ್ನಾಗಿ ಬದುಕಬೇಕು. ಭೂ ಮಂಡಲವನ್ನು ಹಚ್ಚ ಹಸಿರಾಗ ಮಾಡಬೇಕು. ಜಗತ್ತಿನಲ್ಲಿ ಯಾವುದು ಶಾಶ್ವತ ಅಲ್ಲ, ಸೇವೆ, ದಯೆಗೆ ಮಹತ್ವ ನೀಡಬೇಕು. ಜೀವನದಲ್ಲಿ ಹೂವಿನಂತೆ ಬದುಕಬೇಕು. ಆ ಮೂಲಕ ಸಮಾಜದಲ್ಲಿ ಉತ್ತಮ ವಿಚಾರಗಳನ್ನು ಸುಗಂಧ ರೀತಿ ಹರಡಬೇಕು ಎಂದರು.
    ಸಂತೋಷದಿಂದ ಬದುಕುವುದೇ ಜೀವನ. ಮಧುರ ಭಾವನೆಗಳು ಹೃದಯದಲ್ಲಿ ಸದಾ ಬೆಳೆಯುತ್ತಿರಬೇಕು. ಮನಸ್ಸಿನಲ್ಲಿ ಸದ್ಭಾವನೆ ಅರಳುತ್ತಲೇ ಇರಬೇಕು. ಹೀಗೆ ಸದ್ಭಾವನೆ ತುಂಬಿ ಹರಿಯಲಿ, ನಿಮ್ಮ ಬಾಳು ಬಂಗಾರವಾಗಲಿದೆ ಎಂದು ಹಾರೈಸಿದರು.
    ಮೈಸೂರಿನ ಸುತ್ತೂರ ಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀವರ್ಚನ ನೀಡಿ, ನಾಡಿಗೆ ನೀರು ಕೊಡುವ ಕಾರ್ಯವನ್ನು ಈ ಭಾಗದ ಜನಪ್ರತಿನಿಧಿಗಳು ಮಾಡಿದ್ದಾರೆ. ಮನುಷ್ಯನ ಬದುಕು ಯಾವತ್ತೂ ಶಾಶ್ವತ ಅಲ್ಲ. ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು. ಎಲ್ಲರನ್ನೂ ಗೌರವಿಸುತ್ತ ಬದುಕಬೇಕು. ಹೀಗಾಗಿ ನಾವು ಸುಖ ಸಂತೋಷವಾಗಿ ಜೀವನ ಕಳೆಯಬೇಕು ಎಂದರು.
    ಶಾಸಕ ಎಂ.ಬಿ.ಪಾಟೀಲ, ಜತ್ತ ಶಾಸಕ ವಿಕ್ರಂ ಸಾವಂತ, ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts