More

  ಬಾಬಾ ಕಾ ಡಾಬಾ ಈಗ ಸಣ್ಣ ಅಂಗಡಿಯಲ್ಲ, ದೊಡ್ಡ ರೆಸ್ಟೋರೆಂಟ್​! ಇವೆಲ್ಲ ಸೋಶಿಯಲ್​ ಮೀಡಿಯಾ ಎಫೆಕ್ಟ್​!

  ನವದೆಹಲಿ: ಎರಡು ತಿಂಗಳ ಹಿಂದೆ ಬಾಬಾ ಕಾ ಡಾಬಾ ಹೆಸರಿನ ಸಣ್ಣ ಅಂಗಡಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿತ್ತು. 80 ವರ್ಷದ ಬಡ ವೃದ್ಧನೊಬ್ಬ ತನ್ನ ಪತ್ನಿಯೊಂದಿಗೆ ಸಣ್ಣ ಹೋಟೆಲ್​ ರೀತಿಯ ಅಂಗಡಿ ನಡೆಸುತ್ತಿದ್ದು, ಲಾಕ್​ಡೌನ್​ನಲ್ಲಿ ಜನರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿಕೊಂಡಿದ್ದ ಆ ವಿಡಿಯೋಕ್ಕೆ ನೆಟ್ಟಿಗರ ಮನಸ್ಸು ಕರಗಿತ್ತು. ವಿಡಿಯೋ ಅಪ್​ಲೋಡ್​ ಆಗಿ 24 ಗಂಟೆಗಳಲ್ಲೇ ಬಾಬಾ ಕಾ ಡಾಬಾದ ಮುಂದೆ ಜನ ಕ್ಯೂ ನಿಂತು ಊಟ ಖರೀದಿಸಿದ್ದರು. ಈ ರೀತಿ ರಾತ್ರೋರಾತ್ರಿ ಫೇಮಸ್​ ಆದ ಬಾಬಾ ಕಾ ಡಾಬಾ ಈಗ ಹೇಗಿದೆ ಎಂದು ಗೊತ್ತಾದರೆ ನೀವು ಶಾಕ್​ ಆಗ್ತೀರ.

  ಇದನ್ನೂ ಓದಿ: ಕರೊನಾ ಲಸಿಕೆ ವಿಜ್ಞಾನಿಯ ದುರಂತ ಅಂತ್ಯ! 14ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟರಾ ವಿಜ್ಞಾನಿ?

  ದೆಹಲಿಯ ಮಾಲ್ವಿಯಾ ನಗರದ ಬಾಬಾ ಕಾ ಡಾಬಾದ ಸಣ್ಣ ಅಂಗಡಿ ಈಗ ಅಲ್ಲಿಲ್ಲ. ಬದಲಾಗಿ ಅದೇ ಏರಿಯಾದಲ್ಲಿ ಬಾಬಾ ದಾ ಡಾಬಾ ಹೆಸರಿನ ದೊಡ್ಡ ರೆಸ್ಟೋರೆಂಟ್​ ಒಂದು ಆರಂಭವಾಗಿದೆ. ಅಂದ ಹಾಗೆ ಈ ರೆಸ್ಟೋರೆಂಟ್​ನ ಮಾಲೀಕರು ಕೂಡ ಅದೇ ಬಾಬಾ ಕಾ ಡಾಬಾದ ವೃದ್ಧ ದಂಪತಿ ಕಾಂತಾ ಪ್ರಸಾದ್​ ಮತ್ತು ಬಾದಮಾ ದೇವಿ.

  ಇದನ್ನೂ ಓದಿ: ಹೊಸ ಪಕ್ಷ ಸ್ಥಾಪಿಸಲು ಹೊರಟ ರಜನಿಕಾಂತ್​ಗೆ ಸಮನ್ಸ್​! ಕಾರಣವೇನು ಗೊತ್ತಾ?

  ವಿಡಿಯೋ ನೋಡಿದ್ದ ಜನರು ಬಾಬಾ ಕಾ ಡಾಬಾಕ್ಕೆ ಬಂದು ಸಾಲುಗಟ್ಟಿ ನಿಂತು ವ್ಯಾಪಾರ ಮಾಡಿದ್ದರು. ಅನೇಕ ದಾನಿಗಳು ಬಂದು ದಂಪತಿಗೆ ಸಹಾಯ ಮಾಡಿ ಹೋಗಿದ್ದರು. ಆ ಎಲ್ಲ ಹಣವನ್ನು ಉಳಿಸಿಕೊಂಡ ದಂಪತಿ ಈಗ ಅದೇ ಹಣದಲ್ಲಿ ರೆಸ್ಟೋರೆಂಟ್​ ತೆರೆದಿದ್ದಾರೆ. ದೇವರ ದಯೆಯಿಂದ ನಾವು ಇಂದು ಯಾವುದೇ ಕಷ್ಟವಿಲ್ಲದೆ ನೆಮ್ಮದಿಯಿಂದ ಇದ್ದೇವೆ ಎನ್ನುತ್ತಾರೆ ಕಾಂತಾ ಪ್ರಸಾದ್​ ಅವರು. (ಏಜೆನ್ಸೀಸ್​)

  ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!

  ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts