ಬೆಂಗಳೂರು: ಕರೊನಾ ಮೊದಲನೇ ಅಲೆಯಲ್ಲಿ ‘ಗೋ ಕರೊನಾ ಗೋ’ ಫೇಮಸ್ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿ ಕರೊನಾ ಎರಡನೇ ಅಲೆಯಲ್ಲೂ ಜನರು ವಿಚಿತ್ರ ವಿಚಿತ್ರ ಘೋಷಣೆಗಳನ್ನು ಹುಟ್ಟುಹಾಕಲಾರಂಭಿಸಿದ್ದಾರೆ. ಈ ಬಾರಿ ‘ಓಂ ಕರೊನಾ ಭಾಗ್ ಸ್ವಾಹ’ ವಿಶೇಷವಾಗಿ ವೈರಲ್ ಆಗಿದೆ.
ಮಂತ್ರವಾದಿಯ ರೀತಿಯಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯೊಬ್ಬ ಹೋಮ ಹಾಕಿಕೊಂಡು ಕುಳಿತಿದ್ದಾನೆ. ಆತ ಏನೇನೋ ಮಂತ್ರಗಳನ್ನು ಹೇಳುತ್ತಿದ್ದಾನೆ. ಆತ ಎದುರಿನಲ್ಲಿ ಕುಳಿತಿರುವ ಜನರು ಓಂ ಕರೊನಾ ಬಾಗ್ ಸ್ವಾಹ… ಎಂದು ಜಪಿಸುತ್ತಿದ್ದಾರೆ. ಇಂತದ್ದೊಂದು ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಎರಡೇ ಅಸ್ತ್ರ ಇರುವುದು. ಜನರು ಮನೆಯಿಂದ ಹೊರಬಾರದೆ ಕರೊನಾ ನಿಯಮಗಳನ್ನು ಪರಿಪಾಲಿಸಿದರೆ ಸೋಂಕು ನಿಯಂತ್ರಣ ಸಾಧ್ಯವೆನ್ನುತ್ತಾರೆ ವೈದ್ಯಕೀಯ ವಲಯದವರು. (ಏಜೆನ್ಸೀಸ್)
94 ದಿನ ಮುಗಿಸಿದ್ದ ಬಿಗ್ಬಾಸ್ಗೆ ಸಡನ್ ಬ್ರೇಕ್! ಅಧಿಕಾರಿಗಳೇ ಬಂದು ಸೀಲ್ ಮಾಡಿಬಿಟ್ಟರು!
ನಿಂತಿದ್ದ ಆ್ಯಂಬುಲೆನ್ಸ್ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!
ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ