ಬೆಂಗಳೂರು: ಹಲವು ವರ್ಷಗಳ ಹಿಂದೆ ‘ಬಾ ನಲ್ಲೆ ಮಧುಚಂದ್ರಕೆ’ ಎಂಬ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿದ್ದು ನೆನಪಿರಬಹುದು. ಈಗ ಕನ್ನಡದಲ್ಲಿ ಸದ್ದಿಲ್ಲದೆ ‘ಬಾ ನಲ್ಲೆ ಮದುವೆಗೆ’ ಎಂಬ ಇನ್ನೊಂದು ಚಿತ್ರ ತಯಾರಾಗಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಕೊನೆಗೂ Instagram ಖಾತೆ ತೆರೆದ ವಿಜಯ್: 1 ದಿನದಲ್ಲಿ ಗಳಿಸಿದ ಫಾಲೋವರ್ಸ್ ಸಂಖ್ಯೆ ಹುಬ್ಬೇರಿಸುವಂತಿದೆ!
ಹೊಸಬರೇ ಸೇರಿ ರೂಪಿಸಿರುವ ‘ಬಾ ನಲ್ಲೆ ಮದುವೆಗೆ’ ಚಿತ್ರದ ಟೀಸರ್ ಮತ್ತು ಐದು ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಚಾಮರಾಜನಗರದ ಎಂ.ಯೋಗೇಶ್ ನಂದನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ರಚಿಸಿ ನಿರ್ದೇಶನ ಮಾಡುವುದರ ಜತೆಗೆ ಉರುಕಾತೇಶ್ವರಿ ಮೂವೀಸ್ನಡಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ.
‘ಬಾ ನಲ್ಲೆ ಮದುವೆ’ ಚಿತ್ರಕ್ಕೆ ’ಹುಡುಗಿ ನೋಡಿ ಹುಚ್ಚರಾಗಬೇಡಿ’ ಎಂಬ ಅಡಿಬರಹವೂ ಇದೆ. ಅದರಂತೆ. ಅತಿಯಾದ ಪ್ರೀತಿಯಿಂದ ಏನೇನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ತುಂಬಾ ಇಷ್ಟಪಡುವುದು ಸಹ ಒಳ್ಳೆಯದಲ್ಲ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಮಾಡಲಾಗಿದೆ.
ಇದೊಂದು ಗ್ರಾಮೀಣ ಪ್ರೇಮಕಥೆಯಾಗಿದ್ದು, ಅರ್ಜುನ್ ಮತ್ತು ಶೋಭಾ ನಾಯಕ-ನಾಯಕಿಯರಾಗಿ ನಟಿಸಿದ್ದರೆ. ಮಿಕ್ಕಂತೆ ಮೀಸೆ ಆಂಜನಪ್ಪ, ನಾಗೇಶ್ ಮಯ್ಯಾ, ಮೈಸೂರು ಮಂಜುಳಾ, ಗೋವಿಂದಪ್ಪ ಮುಂತಾದವರು ಅಭಿನಯಸಿದ್ದಾರೆ. ಚಾಮರಾಜನಗರದ ಸುತ್ತಮುತ್ತ 38 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಇದನ್ನೂ ಓದಿ: ‘ಬ್ರಹ್ಮಾಸ್ತ್ರ’ 2 ಮತ್ತು 3 ಬಿಡುಗಡೆ ಯಾವಾಗ? ಕೊನೆಗೂ ಸಿಕ್ಕಿತು ಉತ್ತರ …
‘ಬಾ ನಲ್ಲೆ ಮದುವೆಗೆ’ ಚಿತ್ರಕ್ಕೆ ದಿನೇಶ್ ಕುಮಾರ್ ಅವರ ಸಂಗೀತ ಮತ್ತು ಪ್ರಸನ್ನ ಕುಮಾರ್ ಅವರ ಛಾಯಾಗ್ರಹಣವಿದೆ.
ಆಂಟಿ ಎಂದು ಕರೆದರೆ ನಿಮಗೇಕೆ ಕೋಪ ಬರುತ್ತೆ? ಅಭಿಮಾನಿ ಪ್ರಶ್ನೆಗೆ ಅನಸೂಯ ಕೊಟ್ಟ ಉತ್ತರ ವೈರಲ್