ರಾಜ್ಯ ರಾಜಕಾರಣಕ್ಕಾಗಿಯೇ ನಾನು ಲೋಕಸಭಾ ಸ್ಥಾನವನ್ನು ಬಿಟ್ಟು ಬಂದಿದ್ದೇನೆ: ಶ್ರೀರಾಮುಲು

ಚಿತ್ರದುರ್ಗ : ರಾಜ್ಯ ರಾಜಕಾರಣಕ್ಕಾಗಿಯೇ ನಾನು ಲೋಕಸಭಾ ಸ್ಥಾನವನ್ನು ಬಿಟ್ಟು ಬಂದಿದ್ದೇನೆ ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ಅವರು ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಕೊಪ್ಪಳದಿಂದ ಕಣಕ್ಕಿಳಿಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಮೂಲಕವೇ ನನಗೂ ವಿಚಾರ ತಿಳಿದಿದ್ದು, ಈವರೆಗೆ ಪಕ್ಷದ ಹೈಕಮಾಂಡ್ ಏನನ್ನೂ ಸೂಚಿಸಿಲ್ಲ. ರಾಜ್ಯ ರಾಜಕಾರಣಕ್ಕಾಗಿಯೇ ಲೋಕಸಭೆ ಸ್ಥಾನ ಬಿಟ್ಟು ಬಂದಿದ್ದೇವೆ ಎಂದು ತಿಳಿಸಿದರು.

ಬಿ.ಎಸ್.ವೈ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇವೆ. ಬೇಲ್ ಮೇಲೆ ಇರುವ ರಾಹುಲ್ ಗಾಂಧಿ ಕುಟುಂಬ ಚೋರ್ ಕುಟುಂಬ. ಗಾಂಧಿ ಹೆಸರನ್ನು ಮೊದಲು ಬಿಟ್ಟು ಬಿಡಲಿ. ವಿಶ್ವಮಟ್ಟದಲ್ಲಿ ಗಾಂಧಿ ಹೆಸರಿಗೆ ಗೌರವ ಕಳೆಯುವ ಕೆಲಸ ನಡೆಯುತ್ತಿದೆ. ಇನ್ಮುಂದೆ ಡಿ.ಕೆ.ಶಿವಕುಮಾರ್​ಗೆ ಕಾಂಗ್ರೆಸ್ ಪಲ್ಲಕ್ಕಿ ಹೊರುವ ಅಗತ್ಯ ಬರುವುದಿಲ್ಲ. ಯಾಕೆಂದರೆ ಬಿಜೆಪಿ ಪಲ್ಲಕ್ಕಿ ಮೇಲಿರುತ್ತದೆ ಎಂದು ಹೇಳಿದರು.