ಡಿಕೆಶಿ ದೊಡ್ಡ ಶ್ರೀಮಂತರಂತೆ, ಆದರೆ ಬಳ್ಳಾರಿ ಮಣ್ಣಿನಲ್ಲೇ ಚಿನ್ನ ಇದೆ: ಶ್ರೀರಾಮುಲು

ಬಳ್ಳಾರಿ: ಸಿದ್ದರಾಮಯ್ಯ ಅವರು ತಮ್ಮ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕಿದೆ ಎಂದು ಶಾಸಕ ಶ್ರೀರಾಮುಲು ಹೇಳಿದರು.

ಸಂಡೂರು ಪಟ್ಟಣದಲ್ಲಿ ಮಾತನಾಡಿದ ಅವರು, ನೀವು ಹೇಳಿದಂತೆ ಯಾವುದೇ ಸೆಕ್ಷನ್ ಗಳು ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಕೇವಲ ಅಂಬೇಡ್ಕರ್ ನೀಡಿದ ಸಂವಿಧಾನ. ಯಾವುದೇ ವ್ಯಕ್ತಿ ಅಸಾಂವಿಧಾನಿಕ ಪದ ಬಳಕೆ ಮಾಡಬಾರದು ಎಂದರು.

ಕಾಂಗ್ರೆಸ್ ಶಾಸಕರು ಇರುವುದು 78 ಮಂದಿ ಮಾತ್ರ. ಈ ಪೈಕಿ 50 ಶಾಸಕರು ಬಳ್ಳಾರಿಗೆ ಬಂದು ಕುಳಿತಿದ್ದಾರೆ. ಕಾಂಗ್ರೆಸ್‌ನವರಿಗೆ ಸೋಲಿನ ಭಯ ಆರಂಭವಾಗಿದೆ. ಅದಕ್ಕಾಗಿ ಕಾಂಗ್ರೆಸ್‌ನವರು ಜನರಿಗೆ ಹಣದ ಆಮಿಷ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಡಿಕೆಶಿ ದೊಡ್ಡ ಶ್ರೀಮಂತರಂತೆ. ರೀ, ಡಿ.ಕೆ.ಶಿವಕುಮಾರ್‌ ನಿಮ್ಮಲ್ಲಿದ್ದ ಹಣವನ್ನು ಬಳ್ಳಾರಿ ಜನ ತುಂಬಾ ನೋಡಿದ್ದಾರೆ. ನಿಮ್ಮಲ್ಲಿ ಅಷ್ಟೇ ರೊಕ್ಕ ಇಲ್ಲ ರೀ ಶಿವಕುಮಾರ್. ಬಳ್ಳಾರಿ ಮಣ್ಣಿನಲ್ಲೇ ಚಿನ್ನ ಇದೆ. ಉಪಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗಲಿದೆ. ಬಳ್ಳಾರಿ ಉಪಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದಿಂದ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.