ಭಾರತೀಯ ಜನತಾ ಪಕ್ಷಕ್ಕೆ ಸಿಗ್ತಿದೆ ಬೆಂಬಲ

ಹುಮನಾಬಾದ್: ಜನರ ಒಲವು ಬಿಜೆಪಿ ಕಡೆಯಿದೆ. ದೇಶದ ಜನ ಮತ್ತೆ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಲು ನಿರ್ಧರಿಸಿದ್ದಾರೆ. ಬಿಜೆಪಿ ಗೆಲುವಿನ ಓಟಕ್ಕೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮಂಠಾಳಕರ್ ಹೇಳಿದರು.

ಹಳ್ಳಿಖೇಡ(ಬಿ)ದಲ್ಲಿ ಶನಿವಾರ ಭಗವಂತ ಖೂಬಾ ಪರ ಪಾದಯಾತ್ರೆ ನಡೆಸಿ ಮಾತನಾಡಿ, ತತ್ವ, ಸಿದ್ಧಾಂತ ಒಳಗೊಂಡ ಬಿಜೆಪಿ ಕೇಂದ್ರದಲ್ಲಿ 5 ವರ್ಷ ಉತ್ತಮ ಆಡಳಿತ ನೀಡಿದೆ. ಮೋದಿ ಕಾರ್ಯವೈಖರಿ ಗಮನಿಸಿದ ದೇಶ ಜನತೆ ಸ್ವಇಚ್ಛೆಯಿಂದ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ ಎಂದರು.

ಭಗವಂತ ಖೂಬಾ ಸಂಸದರಾಗಿ ಮಾಡಿದ ಕೆಲಸಗಳು ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು. ಪ್ರಮುಖರಾದ ಸೂರ್ಯಕಾಂತ ಮಠಪತಿ, ಸುಶೀಲ್, ಘಾಳೆಪ್ಪ ಜಾನಪ್ಪ, ನರಸಿಂಗ, ಲೋಕೇಶ ತಿಪ್ಪಶೆಟ್ಟಿ, ಬಾಬುರಾವ ವಕೀಲ, ಪ್ರವೀಣ ಶೇರಿ, ಮಲ್ಲಿಕಾಜರ್ುನ ಪ್ರಭಾ, ನರಸಿಂಗ, ಸಂಗಪ್ಪ ಚಿಟ್ಟಾ, ತುಳಜಾರಾಮ ಇತರರಿದ್ದರು.

Leave a Reply

Your email address will not be published. Required fields are marked *