ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್‌ ಆಗಿದ್ದನ್ನು ಸ್ವಾಗತಿಸುತ್ತೇನೆ: ಬಿಎಸ್‌ವೈ

ಬೆಂಗಳೂರು: ಆಡಳಿತ ಪಕ್ಷದವರಾಗಿ ತಮ್ಮ ಶಾಸಕರು ಕೈ ಬಿಟ್ಟು ಹೋಗುತ್ತಾರೆ ಎಂದು ಈಗ ರೆಸಾರ್ಟ್‌ಗೆ ಹೋಗುತ್ತಿದ್ದಾರೆ. ಅದಕ್ಕೆ ನನ್ನ ಅಭ್ಯಂತರ ಇಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಬಗ್ಗೆ ಟೀಕೆ ಟಿಪ್ಪಣಿ ಮಾಡಿದರು. ನಮಗೆ ಟೀಕಿಸಿದವರು ಈಗ ಏನು ಹೇಳುತ್ತಾರೆ? ಶಾಸಕರು ಕೈತಪ್ಪುವ ಆತಂಕದಿಂದಾಗಿ ರೆಸಾರ್ಟ್​ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಮಗೇನು ತೊಂದರೆ ಇಲ್ಲ. ಅವರ ಶಾಸಕರ ರಕ್ಷಣೆಗೆ ಅವರು ರೆಸಾರ್ಟ್‌ಗೆ ಹೋಗುತ್ತಿದ್ದಾರೆ ಎಂದರು.

ನಮ್ಮ ಶಾಸಕರಿಗೆಲ್ಲಾ ನಾನು ಬರಲು ಹೇಳುತ್ತೀನಿ. ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲು ಹೇಳುತ್ತೇನೆ. ಬಿಜೆಪಿ ರೆಸಾರ್ಟ್ ಟೀಕಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ರೆಸಾರ್ಟ್ ರಾಜಕಾರಣದ ಬಗ್ಗೆ ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. (ದಿಗ್ವಿಜಯ ನ್ಯೂಸ್)