ಎಚ್​.ಡಿ.ಕುಮಾರಸ್ವಾಮಿ ಸರ್ಕಾರದಿಂದ ತುಘಲಕ್ ದರ್ಬಾರ್ ಮತ್ತು ವರ್ಗಾವಣೆ ದಂಧೆ: ಬಿಎಸ್​ವೈ ವಾಗ್ದಾಳಿ

ಕಲಬುರಗಿ: ಈ ಚುನಾವಣೆ ಮುಗಿದ ಮೇಲೆ ಬಾಬುರಾವ್ ಚಿಂಚನಸೂರ್ ರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿ.ಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ಚಿತ್ತಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಾಮಾನ್ಯ ವರ್ಗದವರಿಗೂ ಶೇ.10ರಷ್ಟು ಮೀಸಲಾತಿ ಘೋಷಿಸಿದೆ. ಕಾಂಗ್ರೆಸ್‌ನವರು 54 ಲಕ್ಷ ಕೋಟಿ ರೂ. ಸಾಲ ಮಾಡಿ ಬಿಟ್ಟು ಹೋಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬೇರೆ ದೇಶದವರಿಗೆ ಸಾಲ ನೀಡುತ್ತಿದೆ ಎಂದರು.

ಕುಮಾರಸ್ವಾಮಿ ಮತ್ತು ಕಂಪನಿ ದೇವ್ರೇ ಗತಿ ಆ್ಯಂಡ್ ಕಂಪನಿಯಾಗಿದ್ದು, ತುಘಲಕ್ ದರ್ಬಾರ್, ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನವರು ನಮ್ಮ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೊರಟು ಆಲಮಟ್ಟಿ ಜಲಾಶಯ ‌ಮಟ್ಟ ಏರಿಸದೇ ಅನ್ಯಾಯ ‌ಮಾಡಿದರು. ರೈತರ ಆದಾಯ ಎರಡು ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮೋದಿ ಶ್ರಮಿಸುತ್ತಿದ್ದಾರೆ. ನದಿ ಜೋಡಣೆ, ಗುಡಿಸಲು ಮುಕ್ತ ದೇಶ ಸೇರಿದಂತೆ ವಿವಿಧ ಯೋಜನೆ ಮಾಡಲು ಮೋದಿ ಸರ್ಕಾರ ಮುಂದಾಗಿದೆ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *