ಅಂಬೇಡ್ಕರ್ ಪ್ರತಿಪಾದಿಸಿದ ಮತಾಸ್ತ್ರದ ಮಹತ್ವ

Latest News

ಶಾಸಕ ತನ್ವೀರ್​ ಸೇಠ್​ಗೆ ಭದ್ರತೆ ಹೆಚ್ಚಳ ಮಾಡಿದ ಸರ್ಕಾರ: 24 ತಾಸು 3 ಪಾಳಿಗಳಲ್ಲಿ ಗನ್​ಮ್ಯಾನ್​ ಭದ್ರತೆ

ಮೈಸೂರು: ತೀವ್ರ ಹಲ್ಲೆ ಹಿನ್ನೆಲೆಯಲ್ಲಿ ಶಾಸಕ ತನ್ವೀರ್​ ಸೇಠ್​ಗೆ ಒದಗಿಸಿದ್ದ ಭದ್ರತೆಯನ್ನು ಮೂರುಪಟ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಿನದ 24 ತಾಸು...

ಸಿನಿಮಾದಂತೆ ರಾಜಕೀಯದಲ್ಲೂ ಮೋಡಿ ಮಾಡಲು ರಜಿನಿ-ಕಮಲ್​ ಸಜ್ಜು: ತ.ನಾಡು ಪಾಲಿಟಿಕ್ಸ್​ ಬಗ್ಗೆ ಮಹತ್ತರ ಸುಳಿವು ನೀಡಿದ ನಟದ್ವಯರು!

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆ ಕಾಣುತ್ತಿದೆ. ಅದಕ್ಕೆ ಕಾರಣ ನಟನೆಯಿಂದ ರಾಜಕೀಯಕ್ಕೂ ಹೊರಳಿರುವ ರಜನಿಕಾಂತ್​ ಮತ್ತು ಕಮಲ್​ ಹಾಸನ್​ ಎಂಬುದೇ...

ಕೆಪಿಎಲ್​ ಮ್ಯಾಚ್​ ಫಿಕ್ಸಿಂಗ್ ಹಗರಣ: ಇಂದು 7 ತಂಡಗಳ ಮಾಲೀಕರ ವಿಚಾರಣೆ ನಡೆಸಲಿರುವ ಸಿಸಿಬಿ

ಬೆಂಗಳೂರು: ಕರ್ನಾಟಕ ಪ್ರಿಮೀಯರ್​ ಲೀಗ್​ ಕ್ರಿಕೆಟ್​ ಮ್ಯಾಚ್​ ಫಿಕ್ಸಿಂಗ್​ ಹಗರಣದ ವಿಚಾರಣೆಗೆ 7 ತಂಡಗಳ ಮಾಲೀಕರು ಇಂದು ಹಾಜರಾಗಲಿದ್ದಾರೆ. ಕೆಪಿಎಲ್​ನ 7 ತಂಡಗಳ ಮಾಲೀಕರು...

ವಿವಸ್ತ್ರಗೊಳಿಸಿ ಕ್ರಿಶ್ಚಿಯನ್​ ದಂಪತಿ ಮೇಲೆ ದೌರ್ಜನ್ಯ: ವೈರಲ್​ ಫೋಟೋ ಹಿಂದಿನ ಅಸಲಿಯತ್ತು ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗ!

ನವದೆಹಲಿ: ಸಾರ್ವಜನಿಕ ಸ್ಥಳವೊಂದರಲ್ಲಿ ದಂಪತಿಯು ಮಗುವನ್ನು ಹಿಡಿದುಕೊಂಡು ಬೆತ್ತಲೆಯಾಗಿ ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ವೈರಲ್​ ಆಗಿದೆ. ಇದರ ಬಗ್ಗೆ...

ಉಪ ಚುನಾವಣೆ ರಣತಂತ್ರ ರೂಪಿಸಲು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿಂದು ಬಿಜೆಪಿ ಮಹತ್ವದ ಸಭೆ

ಬೆಂಗಳೂರು: ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ...

‘‘ಮತ ಎಂಬುದು ಪ್ರಜೆಗಳ ಕೈಯಲ್ಲಿರುವ ಬಹುದೊಡ್ಡ ಅಸ್ತ್ರ. ಅದನ್ನು ಪ್ರಜ್ಞಾವಂತಿಕೆ ಮತ್ತು ಜಾಗೃತಿಯಿಂದ ಬಳಸುವುದನ್ನು ಕಲಿಯಿರಿ’’ ಎಂಬ ಮಾತನ್ನು ಅಂಬೇಡ್ಕರ್ ಬಹು ಹಿಂದೆಯೇ ಹೇಳಿದ್ದರು. ಆದರೆ, ಆ ಮಾತನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದರ ಪರಿಣಾಮವನ್ನು ನಾವು ಇಂದಿಗೂ ಕಾಣುತ್ತಿದ್ದೇವೆ. ದೇಶದಲ್ಲಿನ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದವರಂತೆ ಕಾಳಧನವನ್ನೆಲ್ಲಾ ಸುರಿದು ಜನರ ಮತಗಳನ್ನು ಕೊಂಡುಕೊಳ್ಳುತ್ತಿವೆ. ಮತದ ಮೌಲ್ಯ ಅರಿಯದ ಕೆಲವು ಜನ ತಮ್ಮ ಮತಗಳನ್ನು ಬಿಕರಿಗಿಟ್ಟಿದ್ದಾರೆ!

| ಡಾ. ಕೃಷ್ಣಮೂರ್ತಿ ಚಮರಂ

ಕಳೆದ ಆರು ದಶಕಗಳಲ್ಲಿ ಭಾರತದ ರಾಜಕಾರಣದಲ್ಲಿ ಸಾಕಷ್ಟು ಪಲ್ಲಟಗಳು ನಡೆದಿವೆ. ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡುಹೊಡೆವ ನೂರಾರು ಪ್ರಾದೇಶಿಕ ಪಕ್ಷಗಳು ದೇಶದಾದ್ಯಂತ ಬೆಳೆದು ನಿಂತಿವೆ. ಒಂದೇ ಪಕ್ಷದ ಕೈಯಲ್ಲಿಂದು ಇಡೀ ದೇಶದ ಅಧಿಕಾರ ಕೇಂದ್ರೀಕರಿಸುವ ಯುಗ ಮುಗಿದಿದೆ. ಹತ್ತು ಹಲವು ಪಕ್ಷಗಳು ಸೇರಿ ಒಕ್ಕೂಟ ರಚಿಸಿಕೊಂಡು ಆಳ್ವಿಕೆ ಮಾಡುವ ಹಂತಕ್ಕೆ ಬಂದು ನಿಂತಿದೆ. ಚುನಾವಣೆಯ ರೀತಿ ರಿವಾಜುಗಳೂ ಕಾಲಕಾಲಕ್ಕೆ ಸಾಕಷ್ಟು ಬದಲಾವಣೆಗೊಂಡು ಇಂದು ಬೇರೆಯದೇ ಸ್ವರೂಪ ಪಡೆದುಕೊಂಡಿವೆ.

ರಾಜಕೀಯ ಪಕ್ಷಗಳೂ ಹಿಂದಿನಂತೆ ಯಾವುದೇ ತತ್ವಸಿದ್ಧಾಂತಗಳನ್ನು ಮುಂದಿಟ್ಟು ಮತಯಾಚಿಸುವ ಮಾರ್ಗಗಳನ್ನು ತೊರೆದು ಜನರನ್ನು ಭಾವುಕವಾಗಿ ಮರುಳುಮಾಡುವ, ಹಣ ಮತ್ತು ಜಾತಿ ಧರ್ಮದ ಆಧಾರದಲ್ಲಿ ಧ್ರುವೀಕರಿಸುವ ಕಾರ್ಯಕ್ಕೆ ಕೈಹಾಕಿವೆ. ಆದರೆ, ಪ್ರಜಾಪ್ರಭುತ್ವ ಎಂದರೆ ಈ ರೀತಿಯೇ? ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳ ಹಿನ್ನೆಲೆಯಲ್ಲಿ ಇಂದಿನ ರಾಜಕಾರಣದ ಸನ್ನಿವೇಶವನ್ನು ಗಮನಿಸಿದರೆೆ ದಿಗ್ಭ›ಮೆಯಾಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯನ್ನು ರೂಪಿಸಿದ ಧೀಮಂತರ ಆಲೋಚನೆಗಳಿಗೆ ತದ್ವಿರುದ್ಧವಾಗಿ ಇಂದು ನಮ್ಮ ರಾಜಕಾರಣಿಗಳು ನಡೆದುಕೊಳ್ಳುತ್ತಾ ಪ್ರಜಾತಂತ್ರ ವ್ಯವಸ್ಥೆಯನ್ನೇ ನಗೆಪಾಟಲಿಗೀಡು ಮಾಡಿರುವುದನ್ನು ನಮಗೆ ಇತಿಹಾಸದ ಪುಟಗಳು ತೋರುತ್ತವೆ.

ಭಾರತದ ರಾಜಕೀಯರಂಗದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಬಹುಮುಖ್ಯವಾದುದು. ‘‘ಬ್ರಿಟಿಷರು ಭಾರತ ಬಿಡುವ ಮುನ್ನ ಇಲ್ಲಿನ ರಾಜಕೀಯ ಅಧಿಕಾರವನ್ನು ಸರಿಯಾದ ಕ್ರಮದಲ್ಲಿ ಜಾತಿ ಜನಸಂಖ್ಯಾವಾರು ಪ್ರಾತಿನಿಧ್ಯದ ಆಧಾರದಲ್ಲಿ ಹಂಚಿಕೆ ಮಾಡದೇ ಹೋದರೆ, ಇಲ್ಲಿನ ಒಂದು ವರ್ಗವೇ ಅಧಿಕಾರದ ಸಾರ್ವಭೌಮತ್ವವನ್ನು ವಹಿಸಿಕೊಂಡು ಇತರರನ್ನು ಶೋಷಣೆಯಲ್ಲಿಡುತ್ತದೆ. ಅದರಿಂದ ಬ್ರಿಟಿಷರು ಹೋದ ನಂತರ ದೇಶವು ಸ್ವದೇಶಿ ದೊರೆಗಳ ಕೈಗೆ ಸಿಲುಕುತ್ತದೆ. ಅದನ್ನು ಸ್ವಾತಂತ್ರ್ಯ ಎಂದು ಕರೆಯಲಾಗದು ಬದಲಿಗೆ ಮಾಲೀಕರ ಬದಲಾವಣೆಯಾದಂತಾಗುತ್ತದೆ’’ ಎಂದು ಧೃಢವಾದ ಧ್ವನಿಯಲ್ಲಿ ಪ್ರತಿಪಾದಿಸಿದ ಡಾ. ಅಂಬೇಡ್ಕರ್, ಭಾರತೀಯರಿಗೆ ವೋಟು ಹಾಕುವ ಹಕ್ಕು ತಂದವರು, ಸ್ವತಂತ್ರ ರಾಜಕೀಯ ಪಕ್ಷ ಸ್ಥಾಪಿಸಿದವರು, ದೇಶದ ಮೊದಲ ಕಾನೂನು ಸಚಿವರಾಗಿದ್ದವರು ಹಾಗೂ ಸಂವಿಧಾನದ ಮಹಾಶಿಲ್ಪಿ.

ಲಂಡನ್​ನಲ್ಲಿ 1930-32 ಅವಧಿಯಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾರತದ ಎಲ್ಲಾ ಜಾತಿ ಧರ್ವಿುಯರಿಗೂ ವಯಸ್ಕ ಮತದಾನ ಪದ್ಧತಿ ಬೇಕೆಂದು ವಾದಿಸಿದಾಗ, ಅಂದಿನ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ವಹಿಸಿದ್ದ ಬಹುತೇಕ ನಾಯಕರು ಅದನ್ನು ವಿರೋಧಿಸಿದ್ದರು. ಆದರೆ ಜನರೇ ಭಾಗವಹಿಸದ ಚುನಾವಣಾ ವ್ಯವಸ್ಥೆಯನ್ನು ಪ್ರಜಾತಂತ್ರ ವ್ಯವಸ್ಥೆ ಎಂದು ಹೇಗೆ ಕರೆಯುತ್ತೀರಿ ಎಂದ ಅಂಬೇಡ್ಕರ್ ಅವರ ವಾದವನ್ನು ಪುರಸ್ಕರಿಸಿದ ಬ್ರಿಟಿಷ್ ಸರ್ಕಾರ ಭಾರತೀಯರೆಲ್ಲರಿಗೂ ಮತ ಚಲಾಯಿಸುವ ವಯಸ್ಕ ಮತದಾನ ಪದ್ದತಿಯನ್ನು ಒಪ್ಪಿಕೊಂಡಿತು. ಇದಕ್ಕೂ ಮುನ್ನ ಚುನಾವಣಾ ವ್ಯವಸ್ಥೆ ಹೇಗಿತ್ತೆಂದರೆ; ಕೇವಲ ತೆರಿಗೆದಾರರು ಮತ್ತು ಪದವೀಧರರು ಮಾತ್ರವೇ ಮತ ಚಲಾಯಿಸುವ ಹಕ್ಕುಳ್ಳವರಾಗಿದ್ದರು.

1949ರ ನವೆಂಬರ್ 26ರಂದು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದ ವೇಳೆ, ಸಂಸತ್ತಿನ ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಹಲವು ಕಿವಿಮಾತುಗಳನ್ನು ಹೇಳಿದ್ದರು. ‘‘ಇಂದಿನಿಂದ ನಾವು ಒಂದು ವೈರುಧ್ಯದ ವ್ಯವಸ್ಥೆಗೆ ಪ್ರವೇಶಿಸುತ್ತಿದ್ದೇವೆ. ಒಬ್ಬ ವ್ಯಕ್ತಿಗೆ ಒಂದು ವೋಟು, ಒಂದು ವೋಟಿಗೆ ಒಂದೇ ಮೌಲ್ಯ ಎಂಬ ರಾಜಕೀಯ ಸಮಾನತೆಯನ್ನು ಗಳಿಸಿಕೊಂಡಿದ್ದೇವೆ. ಆದರೆ ಅದೇ ಸಮಯಕ್ಕೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಸಮಾನರಾಗಿಯೇ ಮುಂದುವರೆದಿದ್ದೇವೆ. ಜಾತಿಯ ಭೇದಭಾವಗಳನ್ನು ಹಾಗೆಯೇ ಉಳಿಸಿಕೊಂಡಿದ್ದೇವೆ. ನಮಗೀಗ ದೊರೆತಿರುವ ರಾಜಕೀಯ ಅವಕಾಶವನ್ನು ಬಳಸಿ ತಾರತಮ್ಯಗಳನ್ನು ಕೊನೆಗೊಳಿಸದೆ ಹೋದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ’’ ಎಂದಿದ್ದರು. ಆ ಮಾತುಗಳು ಇಂದಿಗೂ ಪ್ರಸ್ತುತ. ತಾಂತ್ರಿಕವಾಗಿ ನಾವು ಎಷ್ಟೇ ಪ್ರಗತಿ ಸಾಧಿಸಿದ್ದರೂ ನಮ್ಮ ಆಲೋಚನಾ ಕ್ರಮ 60 ವರ್ಷಗಳ ಹಿಂದೆ ಹೇಗಿತ್ತೋ ಬಹುತೇಕ ಹಾಗೇ ಇದೆ.

ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸಾಕಾರಗೊಳ್ಳದೆ ರಾಜಕೀಯ ಪ್ರಜಾಪ್ರಭುತ್ವ ಎಂದಿಗೂ ರೂಪುಗೊಳ್ಳುವುದಿಲ್ಲ. ಸಂವಿಧಾನವು ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಹೇಗಿರಬೇಕೆಂದು ನಮಗೆ ಬೋಧಿಸುತ್ತದೆ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕೊಡಮಾಡಿದೆ. ಸಮಾಜವಾದಿ ಜೀವನಕ್ರಮವನ್ನು ಎತ್ತಿ ಹಿಡಿದಿದೆ. ಆದರೂ ನಾವು ಸಾಮಾಜಿಕವಾಗಿ ಎಲ್ಲರೂ ಸಮಾನರು ಎಂಬ ಮನೋಧೋರಣೆ ಹೊಂದಿದ್ದೇವೇಯೇ? ದೇಶದ ಆಸ್ತಿ ಮತ್ತು ಸಂಪತ್ತು ನ್ಯಾಯಬದ್ಧವಾಗಿ ಹಂಚಿಕೆಯಾಗಿದೆಯೇ? ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲರೂ ಸಮಾನವಾಗಿ ಭಾಗವಹಿಸುತ್ತಿದ್ದಾರೆಯೇ? ಎಂದರೆ ಇಲ್ಲ ಎಂದೇ ಹೇಳಬೇಕಾಗಿದೆ.

ಈ ಎಲ್ಲಾ ವೈರುಧ್ಯಗಳನ್ನು ಮೀರಲು ಈಗಲೂ ಕಾಲ ಮಿಂಚಿಲ್ಲ. ಅಂಬೇಡ್ಕರ್​ವಾದವನ್ನು ನಾವು ದೇಶದ ಅಖಂಡತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಅಳವಡಿಸಿಕೊಳ್ಳಬೇಕಿದೆ. ಪ್ರತಿಯೊಬ್ಬರ ಆತ್ಮಗೌರವ ಮತ್ತು ಘನತೆಯನ್ನು ಪರಸ್ಪರ ಗೌರವಿಸುವ ಮೂಲಕ ಸಮಸಮಾಜವನ್ನು ಕಟ್ಟಬೇಕಿದೆ.

ಯಥಾ ಪ್ರಜಾ, ತಥಾ ರಾಜ!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳುತ್ತೇವೆ. ಆದರೆ ನಡವಳಿಕೆಯಲ್ಲಿ ಪ್ರಭುಗಳಂತಿರದೆ ರಾಜಕೀಯ ನಾಯಕರ ಗುಲಾಮರಂತೆ ವರ್ತಿಸುತ್ತೇವೆ. ಸರಿಯಾದ ಪ್ರತಿನಿಧಿಯನ್ನು ಆರಿಸುವ ಹಕ್ಕು ನಮಗೇ ಇರುವಾಗ, ಅದನ್ನು ಸಮರ್ಪಕವಾಗಿ ಬಳಸಬೇಕು. ಇದು ‘ಯಥಾ ರಾಜ ತಥಾ ಪ್ರಜಾ’ ಎಂಬ ಕಾಲವಲ್ಲ. ‘ಯಥಾ ಪ್ರಜಾ ತಥಾ ರಾಜ’ ಎಂಬ ಕಾಲ. ನಮ್ಮ ಮತವನ್ನು ಮಾರಿಕೊಳ್ಳದೆ, ದೇಶವನ್ನು ಅಭಿವೃದ್ದಿಯೆಡೆಗೆ ನಡೆಸಲು, ಸಮಸಮಾಜವನ್ನು ನಿರ್ವಿುಸಲು ನಮಗೆ ಅಂಬೇಡ್ಕರ್​ವಾದ ಖಂಡಿತ ದಿಕ್ಸೂಚಿಯಾಗಬಲ್ಲದು.

(ಲೇಖಕರು: ಚಿಂತಕರು, ಸಾಮಾಜಿಕ ಹೋರಾಟಗಾರರು)

ಪ್ರತಿಕ್ರಿಯಿಸಿ: [email protected]

- Advertisement -

Stay connected

278,614FansLike
572FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ಹೆಬ್ಬಾವು-ಚಿರತೆ ನಡುವಿನ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...