More

    ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಉತ್ಸವ

    ಕೊಳ್ಳೇಗಾಲ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೋಮವಾರ ರಾತ್ರಿ ಕೇರಳದ ಚಂಡಮೇಳ ವಾದ್ಯಗೋಷ್ಠಿಯೊಂದಿಗೆ ಶ್ರೀಅಯ್ಯಪ್ಪಸ್ವಾಮಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.

    ಪಟ್ಟಣದ ಶ್ರೀರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಜ.5 ರಿಂದ 7ರವರೆಗೆ ಶ್ರೀಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ 33ನೇ ವರ್ಷದ ಶ್ರೀಅಯ್ಯಪ್ಪಸ್ವಾಮಿ ಪಾಲ್‌ಕೊಂಬು ಉತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಅನ್ನದಾನ ಹಮ್ಮಿಕೊಂಡಿತ್ತು.

    5 ರಂದು ಬೆಳಗ್ಗೆ 9 ಗಂಟೆಗೆ ಶ್ರೀಸ್ವಾಮಿಗೆ ಪಂಚಾಮೃತ ಅಭಿಷೇಕ, ಪ್ರಸಾದ ವಿನಿಯೋಗ, ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಪಟ್ಟಣದ ಶ್ರೀಮರಳೇಶ್ವರಸ್ವಾಮಿ ದೇಗುಲದಿಂದ ರಾಜರಾಜೇಶ್ವರಿ ಕಲ್ಯಾಣ ಮಂಟಪದವರೆಗೆ ಪಾಲ್‌ಕೊಂಬು ಉತ್ಸವ ಪೂಜಾ ಕೈಂಕರ್ಯಗಳನ್ನು ಪ್ರತಿ ವರ್ಷದಂತೆ ಆಯೋಜಿಸಿತ್ತು.

    ಸೋಮವಾರ ಬೆಳಗ್ಗೆ 10 ರಿಂದ 12 ಗಂಟೆವರೆಗೆ ತಾಲೂಕಿನ ಇಕ್ಕಡಹಳ್ಳಿ ಮಹದೇವು ಅವರಿಂದ ಶ್ರೀಅಯ್ಯಪ್ಪಸ್ವಾಮಿ ಭಜನೆ ಕಾರ್ಯ ಕ್ರಮ ನಡೆಯಿತು. ರಾತ್ರಿ ಕೇರಳ ಚಂಡಮೇಳ ವಾದ್ಯಗೋಷ್ಠಿಯೊಂದಿಗೆ ಶ್ರೀಸ್ವಾಮಿ ಪಲ್ಲಕ್ಕಿ ಉತ್ಸವ ನಡೆಯಿತು. ಮಂಗಳವಾರ ಮಧ್ಯಾಹ್ನ 12 ಗಂಟೆಯಲ್ಲಿ ಮಹಾಮಂಗಳಾರತಿ ಹಾಗೂ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಸುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts