More

  ರಾಜ್ಯಕ್ಕೆ ‘ಆಯುಷ್ಮಾನ್ ಉತ್ಕೃಷ್ಟತಾ ಪ್ರಶಸ್ತಿ’

  ಬೆಂಗಳೂರು: ರಾಜ್ಯಕ್ಕೆ 2023 ರ ‘ಆಯುಷ್ಮಾನ್ ಉತ್ಕೃಷ್ಟತಾ ಪ್ರಶಸ್ತಿ’ ಲಭಿಸಿದ್ದು, ಹೊಸದೆಹಲಿಯಲ್ಲಿ ನಡೆದ ಆರೋಗ್ಯ ಮಂಥನ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ. ರಂದೀಪ್ ಸೋಮವಾರ ಪ್ರಶಸ್ತಿ ಸ್ವೀಕರಿಸಿದರು.

  ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಅ.2022 ರಿಂದ ಸೆ. 2023 ರ ವರೆಗಿನ ಸೇವಾ ಕ್ಷೇತ್ರದ ಲಿಂಗ ಸಮಾನತೆಯಲ್ಲಿ ಕರ್ನಾಟಕವು ಗುರುತಿಸಲ್ಪಟ್ಟಿದೆ.

  ಧಾರವಾಡ ಜಿಲ್ಲಾಸ್ಪತ್ರೆಯು ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023ರ ವರೆಗೆ ಅತಿ ಹೆಚ್ಚಿನ ಸಂಖ್ಯೆಯ ಡಿಜಿಟಲ್ ದಾಖಲಾತಿಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಸೇವೆಗೆ ( ಆ.ಭಾ) ಸಂಪರ್ಕಿಸುವ ಮೂಲಕ ಸರಕಾರಿ ಸೌಲಭ್ಯ ಒದಗಿಸುವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.

  ಈ ಮಹತ್ಕಾರ್ಯದಲ್ಲಿ ಭಾಗಿಯಾದ ಎಲ್ಲಾ ವೈದ್ಯರು, ಸಿಬ್ಬಂದಿಗಳು ಹಾಗು ಕಾರ್ಯಕರ್ತರಿಗೆ ಆರೋಗ್ಯ ಇಲಾಖೆ ಅಭಿನಂದನೆ ಸಲ್ಲಿಸಿದೆ.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts