Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಭಾರತಕ್ಕಿಂದು ಆಯುಷ್ಮಾನ್ ಅರ್ಪಣೆ

Sunday, 23.09.2018, 3:04 AM       No Comments

ನವದೆಹಲಿ: ಭಾರತಕ್ಕೆ ಆರೋಗ್ಯ ಭಾಗ್ಯ ಕಲ್ಪಿಸಲಿ ರುವ ಕೇಂದ್ರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ಭಾನುವಾರ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್​ನಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

# 11 ಕೋಟಿ ಬಡ ಕುಟುಂಬ ಅರ್ಹ
# ವರ್ಷಕ್ಕೆ 5 ಲಕ್ಷ ರೂ.ವರೆಗೆ ಚಿಕಿತ್ಸೆ ಪಡೆಯಲು ಅವಕಾಶ
# ಕುಟುಂಬದ ಗಾತ್ರ, ಸದಸ್ಯರಿಗೆ ಮಿತಿ ಇಲ್ಲ


ಸರ್ವೆ ಜನಾಃ ಸುಖಿನೋ ಭವಂತು

ನವದೆಹಲಿ: ಆಯುಷ್ಮಾನ್ ಭಾರತ ಯೋಜನೆಯ ಪ್ರಮುಖ ಭಾಗವಾಗಿರುವ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. 25 ರಾಜ್ಯ, 6 ಕೇಂದ್ರಾಡಳಿತ ಪ್ರದೇಶದಲ್ಲಿ ಇದು ಜಾರಿಗೆ ಬರಲಿದೆ.

ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಇದಾಗಿದೆ. ದೇಶದ 10.74 ಕೋಟಿ ಕುಟುಂಬದ 50 ಕೋಟಿ ಜನರಿಗೆ ಆರೋಗ್ಯ ವಿಮೆ ದೊರೆಯಲಿದೆ. ಮೋದಿ ಕೇರ್ ಎಂದೇ ಪ್ರಚಲಿತದಲ್ಲಿರುವ ಈ ಯೋಜನೆಯನ್ನು ಜಾರ್ಖಂಡ್​ನಲ್ಲಿ ಪ್ರಧಾನಿ ಉದ್ಘಾಟಿಸಲಿದ್ದಾರೆ. ಜನಸಂಘ ಮುಖಂಡ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಸೆ. 25ರಿಂದ ಈ ಯೋಜನೆ ಜಾರಿಗೆ ಬರಲಿದೆ. ಭಾರತದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಕಾರಣಕ್ಕೆ ಹಿಂದಿನ ಬಜೆಟ್​ನಲ್ಲಿ ಮೋದಿ ಸರ್ಕಾರ ಈ ಯೋಜನೆ ಪ್ರಕಟಿಸಿತ್ತು. ಪಂಜಾಬ್, ದೆಹಲಿ, ಕೇರಳ, ತೆಲಂಗಾಣ ಹಾಗೂ ಒಡಿಶಾ ಹೊರತುಪಡಿಸಿ ಇನ್ನುಳಿದ ರಾಜ್ಯಗಳು ಕೇಂದ್ರದ ಯೋಜನೆಗೆ ಒಪ್ಪಿಗೆ ಸೂಚಿಸಿವೆ.

ಮನೆಬಾಗಿಲಿಗೆ ಯೋಜನೆ ಚೀಟಿ

10.66 ಕೋಟಿ ಕೌಟುಂಬಿಕ ಚೀಟಿಗಳನ್ನು ಮುದ್ರಿಸಿ ಸದಸ್ಯರ ಮನೆಬಾಗಿಲಿಗೆ ತಲುಪಿಸಲು ಸಿದ್ಧತೆ ನಡೆದಿದೆ. ‘ಆಯುಷ್ಮಾನ್ ಪಖ್ವಾರಾಸ್ ’ ಹೆಸರಿನಲ್ಲಿ ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಕಾರ್ಡ್​ಗಳನ್ನು ನೋಂದಾಯಿತರ ಕೈಗಿಡುವ ವಿನೂತನ ಮಾದರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಚೀಟಿಯಲ್ಲಿ ಯೋಜನೆಗೆ ಅರ್ಹರಾದ ಕುಟುಂಬದ ಸದಸ್ಯರ ಹೆಸರು ಮತ್ತು ಸೇವೆಗಳಿಗೆ ಅವರು ತೆರಳಬೇಕಾದ ಸ್ಥಳದ ಬಗ್ಗೆ ಚೀಟಿಯಲ್ಲಿ ಮಾಹಿತಿ ಇರುತ್ತದೆ.

ಪ್ರಧಾನಿ ಮೋದಿ ಪತ್ರ

ಜನ ಆರೋಗ್ಯ ಯೋಜನೆಗೆ ಸಂಬಂಧಿಸಿ ಫಲಾನುಭವಿಗಳಿಗೆ ಪತ್ರ ಬರೆಯಲು ಪ್ರಧಾನಿ ನಿರ್ಧರಿಸಿದ್ದಾರೆ. ಮೋದಿ ಹಸ್ತಾಕ್ಷರ, ಭಾವಚಿತ್ರ, ಯೋಜನೆ ವಿವರ ಇರುವ ಪತ್ರ ಕಳುಹಿಸಲಾಗುತ್ತದೆ. ಜಾರ್ಖಂಡ್​ನ 57 ಲಕ್ಷ ಫಲಾನುಭವಿಗಳಿಗೆ ಈಗಾಗಲೇ ಪತ್ರ ಕಳುಹಿಸಲಾಗಿದ್ದು, ಹಂತ- ಹಂತವಾಗಿ ಎಲ್ಲ ಫಲಾನುಭವಿಗಳಿಗೂ ಪತ್ರ ಸಿಗಲಿದೆ.

ಯಾವ್ಯಾವ ಚಿಕಿತ್ಸೆಗೆ?

# ಸುಮಾರು 1354 ಚಿಕಿತ್ಸೆಗಳು ಯೋಜನೆ ವ್ಯಾಪ್ತಿಗೆ

# ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ, 50 ರೀತಿಯ ಕ್ಯಾನ್ಸರ್​ನ ಕಿಮೋಥೆರಪಿ, ಸ್ಟೆಂಟ್ ಅಳವಡಿಕೆ, ಮಂಡಿಗೆ ಕೃತಕ ಚಿಪ್ಪು ಜೋಡಣೆ, ವಾರ್ಡ್​ಗಳಲ್ಲಿ ದಾಖಲಾಗಿ ಪಡೆಯುವ ಎಲ್ಲ ರೀತಿಯ ಶಸ್ತ್ರ ಚಿಕಿತ್ಸೆ

ಫಲಾನುಭವಿಗಳು ಯಾರು?

# ಚಿಂದಿ ಆಯುವವರು, ಭಿಕ್ಷುಕರು, ಮನೆ ಕೆಲಸದವರು, ರಿಕ್ಷಾ ಚಾಲಕರು, ಎಲ್ಲ ರೀತಿಯ ಕಾರ್ವಿುಕರು, ಕೂಲಿಗಳು ಸೇರಿ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಿದ ಬಡವರು
# ಹಾಲಿ ಪ್ರಧಾನಮಂತ್ರಿ ಸ್ವಾಸ್ಥ್ಯ ವಿಮಾ ಯೋಜನೆ ಫಲಾನುಭವಿಗಳು


2ನೇ ಹಂತದಲ್ಲಿ ರಾಜ್ಯ ಪರಿಗಣನೆ?

ಬೆಂಗಳೂರು: ರಾಜ್ಯದ ರೋಗಿಗಳ ಹಿತದೃಷ್ಟಿಯಿಂದ ಆರೋಗ್ಯ ಕರ್ನಾಟಕ ಯೋಜನೆಯನ್ನು ಆಯುಷ್ಮಾನ್ ಭಾರತ್​ದಲ್ಲಿ ವಿಲೀನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆಯುಷ್ಮಾನ್ ಭಾರತ ಹೆಸರಲ್ಲಿ ಯೋಜನೆ ಮುಂದುವರಿಸಲು ಬಹುತೇಕ ರಾಜ್ಯಗಳು ತಿರ್ವನಿಸಿವೆ. ಆದರೆ, ಕರ್ನಾಟಕದಲ್ಲಿ ಈ ಯೋಜನೆಯನ್ನು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಹೆಸರಿನಲ್ಲಿ ಮುಂದುವರಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ. ಸದ್ಯ ಈ ವಿಚಾರ ಸಚಿವ ಸಂಪುಟದ ಮುಂದಿದ್ದು, ಅನುಮೋದನೆ ಸಿಕ್ಕ ಬಳಿಕ ರಾಜ್ಯ ಸರ್ಕಾರ ಕೇಂದ್ರದ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಎರಡನೇ ಹಂತದಲ್ಲಿ ರಾಜ್ಯದಲ್ಲಿ ಆಯುಷ್ಮಾನ್ ಭಾರತ ಯೋಜನೆ ಜಾರಿಯಾಗುವ ನಿರೀಕ್ಷೆಯಿದೆ. ಸದ್ಯ ರಾಜ್ಯದ ಬಿಪಿಎಲ್ ಕುಟುಂಬದವರಿಗೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ 2 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಸಿಗುತ್ತಿದ್ದು, ಆಯುಷ್ಮಾನ್ ಭಾರತ ಯೋಜನೆ ಜಾರಿಯಾದಲ್ಲಿ 5 ಲಕ್ಷ ರೂ.ವರೆಗೆ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರದ ಸಾಮಾಜಿಕ ಆರ್ಥಿಕ ಜನಗಣತಿ ಪ್ರಕಾರ

ರಾಜ್ಯದ 62 ಲಕ್ಷ ಕುಟುಂಬಗಳು ರಾಷ್ಟ್ರಿಯ ಸ್ವಾಸ್ಥ್ಯ ವಿಮಾ ಯೋಜನೆ (ಆರ್​ಎಸ್​ಬಿವೈ)ಗೆ ಒಳಪಡಲಿದ್ದು, ಆ ಕುಟುಂಬಕ್ಕೆ ಮಾತ್ರವೇ ಆಯುಷ್ಮಾನ್ ಭಾರತ ಯೋಜನೆ ಪ್ರಕಾರ ಶೇ. 60 ಅನುದಾನ ಲಭ್ಯವಾಗಲಿದೆ. ಇನ್ನುಳಿದ ಶೇ. 40 ಅನುದಾನ ರಾಜ್ಯ ಸರ್ಕಾರವೇ ಭರಿಸಲಿದೆ. ಆದರೆ, ಕೇಂದ್ರದ ಮಾನದಂಡಗಳಿಗೆ ಒಳಪಡದ 59 ಲಕ್ಷ ಕುಟುಂಬ ಆಯುಷ್ಮಾನ್ ಭಾರತ ಯೊಜನೆಯಿಂದ ವಂಚಿತವಾಗಲಿದ್ದು, ಈ ಕುಟುಂಬಗಳು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕದ ಯೋಜನೆಗೆ ಒಳಪಡಲಿವೆ. ಈ ಕುಟುಂಬಗಳ ವೈದ್ಯಕೀಯ ವೆಚ್ಚ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತಿಸಿದೆ. ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ಅಗತ್ಯ ಸಿದ್ಧತೆಯನ್ನು ಈಗಾಗಲೇ ಮಾಡಿ ಕೊಂಡಿರುವುದಾಗಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ವಿಜಯವಾಣಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top