ಅಯೋಗ್ಯ ಚಿತ್ರದ ಸಹನಟಿ ವಿರುದ್ಧ ಬ್ಲಾಕ್​ಮೇಲ್​​ ಆರೋಪ: ಎಫ್​ಐಆರ್​ ದಾಖಲು

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿ ಯಶಸ್ವಿ ಚಿತ್ರ​ ಎನಿಸಿಕೊಂಡಿದ್ದ ಸ್ಯಾಂಡಲ್​ವುಡ್​ನ ‘ಅಯೋಗ್ಯ’ ಚಿತ್ರದ ಸಹ ನಟಿಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಸಹನಟಿ ದೃಶ್ಯ ವಿರುದ್ಧ ಪ್ರಶಾಂತ್ ಎಂಬ ಯುವಕನಿಂದ ದೂರು ದಾಖಲಾಗಿದೆ. ಇತ್ತೀಚೆಗೆ ಪ್ರಶಾಂತ್​ ಜತೆ ದೃಶ್ಯ ಸಲುಗೆ ಬೆಳೆಸಿಕೊಂಡಿದ್ದರಂತೆ. ಅಲ್ಲದೆ, ಆತನ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​ ಖಾತೆಯನ್ನು ಪರಿಶೀಲಿಸುತ್ತಿದ್ದ ಆಕೆ, ಇನ್​ಸ್ಟಾಗ್ರಾಂ ಬಳಸಿ ಬೇರೆಯವರಿಗೆ ಮೆಸೇಜ್ ಮಾಡಿ, ಪ್ರಶಾಂತ್​ಗೆ ಬ್ಲಾಕ್​ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ದೃಶ್ಯ, ಪ್ರಶಾಂತ್​ನ ಖಾಸಗಿ ಫೋಟೋಗಳನ್ನೆಲ್ಲಾ ಸಂಗ್ರಹಿಸಿದ್ದರು ಎನ್ನಲಾಗಿದೆ. ಈ ಕುರಿತು ಪ್ರಶಾಂತ್​ ಒಮ್ಮೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಬಳಿಕ ಮತ್ತೆ ಪ್ರಶಾಂತ್​ನನ್ನು ಬ್ಲಾಕ್​ಮೇಲ್ ಮಾಡುತ್ತಿದ್ದ ದೃಶ್ಯಳ ವಿರುದ್ಧ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​ ಖಾತೆಯನ್ನು ಹ್ಯಾಕ್​ ಮಾಡಿರುವ ಆರೋಪವನ್ನೂ ಮಾಡಲಾಗಿದೆ.

ಸದ್ಯ ಪ್ರಶಾಂತ್ ಸೈಬರ್ ಕ್ರೈಂ ಮೊರೆ ಹೋಗಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಲ್ಲದೆ, ಈಕೆಯ ಹಿಂದಿರುವ ಕೆಲವು ಮಂದಿಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸದ್ಯ ಸಹನಟಿ ದೃಶ್ಯ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ಸೈಬರ್ ಕ್ರೈಂ ಪೊಲೀಸರು ಅದನ್ನು ಎಫ್ಎಸ್ಎಲ್​ಗೆ ಕಳಿಸಿದ್ದು, ಮಾಹಿತಿ ಪಡೆಯಲಿದ್ದಾರೆ. (ದಿಗ್ವಿಜಯ ನ್ಯೂಸ್​)

One Reply to “ಅಯೋಗ್ಯ ಚಿತ್ರದ ಸಹನಟಿ ವಿರುದ್ಧ ಬ್ಲಾಕ್​ಮೇಲ್​​ ಆರೋಪ: ಎಫ್​ಐಆರ್​ ದಾಖಲು”

  1. ಯಾವುದಕ್ಕೂ ಹೇಸುವ ಸ್ಥಿತಿಯಲ್ಲಿಲ್ಲ ಈ ನಟೀಮಣಿಯರು!

Comments are closed.