25ರಂದು ಜನಾಗ್ರಹ ರ‍್ಯಾಲಿ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ನ.25 ರಂದು ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿ ದೇಶದ ವಿವಿಧೆಡೆ ಜನಾಗ್ರಹ ಸಭೆಗಳನ್ನು ನಡೆಸಲು ವಿಶ್ವ ಹಿಂದು ಪರಿಷತ್ತು ತೀರ್ವನಿಸಿದೆ. ಸುಗ್ರೀವಾಜ್ಞೆ ಹೊರಡಿಸಿ, ರಾಮಮಂದಿರ ನಿರ್ವಿುಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುತ್ತದೆ ಎಂದು ವಿಹಿಂಪ ಪ್ರಧಾನ ಕಾರ್ಯದರ್ಶಿ ಮಿಲಿಂದ ಪರಾಂಡೆ ಹೇಳಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಂತರ ಸಭೆಯ ತೀರ್ವನದಂತೆ ದೇಶದ 500 ಕಡೆಗಳಲ್ಲಿ ಸಭೆ ನಡೆಸಲಾಗುವುದು. ಡಿಸೆಂಬರ್​ನಲ್ಲಿ ಸಾವಿರಾರು ಹಳ್ಳಿಗಳಲ್ಲಿಯೂ ಸಭೆಗಳನ್ನು ನಡೆಸಲಾಗುವುದು ಎಂದರು.