More

  ಮದುವಣಗಿತ್ತಿಯಂತೆ ಶೃಂಗಾರಗೊಂಡ ರಾಮನಗರಿ: ರಾಮನಾಗಮನಕ್ಕೆ ಸಜ್ಜುಗೊಂಡ ಅಯೋಧ್ಯೆ, ಸಾಕ್ಷಿಯಾಗಲಿದ್ದಾರೆ ದೇಶ-ವಿದೇಶಗಳ ಗಣ್ಯರು

  ಅಯೋಧ್ಯೆ: ದೇಶದ ಕೋಟ್ಯಂತರ ಹಿಂದು ಶ್ರದ್ಧಾಳುಗಳ ಶತಮಾನಗಳ ನಂಬಿಕೆ, ಭರವಸೆ ಈಡೇರುವ ಕ್ಷಣ ಹತ್ತಿರವಾಗಿದೆ. ಭಗವಾನ್ ಶ್ರೀರಾಮ ಅಯೋಧ್ಯಾ ನಗರಕ್ಕೆ ಮರಳುವ ಕನಸು ನಿಜವಾಗಿದೆ. ಮಂಗಳವಾರದಿಂದ ರಾಮಜನ್ಮಭೂಮಿಯಲ್ಲಿ ಭವ್ಯ-ದಿವ್ಯ ಮಂದಿರವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ಲಕ್ಷ ಸಂಖ್ಯೆಯಲ್ಲಿ ನಗರದಲ್ಲಿ ವಾಸ್ತವ್ಯ ಹೂಡಿರುವ ಭಕ್ತರು ರಾಮದರ್ಶನದ ಕ್ಷಣಕ್ಕಾಗಿ ಕಾದು ಕುಳಿತಿದ್ದಾರೆ. ಅಯೋಧ್ಯಾ ನಗರ ವರ್ಣರಂಜಿತ ಹೂವುಗಳು, ದೀಪಗಳಿಂದ ಅಲಂಕರಿಸಲ್ಪಟ್ಟಿದೆ. ಎಲ್ಲೆಡೆ ರಾಮನ ಧ್ವಜಗಳು ಹಾರಾಡುತ್ತಿವೆ. ರಾಮಸ್ತೋತ್ರ, ಗಾಯನ, ನೃತ್ಯ, ಸಂಗೀತಗಳೊಂದಿಗೆ ಇಡೀ ನಗರ ‘ರಾಮಮಯ’ವಾಗಿ ಮಾರ್ಪಟ್ಟಿದೆ. ಮಂದಿರದ ಪ್ರವೇಶದ್ವಾರ, ಅತಿಥಿಗಳನ್ನು ಸ್ವಾಗತಿಸುವ ಅಯೋಧ್ಯಾಧಾಮ್ ರಸ್ತೆ, ಗೋಡೆಗಳೆಲ್ಲವೂ ಹೂವುಗಳ ಸುಂದರ ವಿನ್ಯಾಸದಿಂದ ಭಕ್ತರನ್ನು ಆಕರ್ಷಿಸುತ್ತಿವೆ.

  Sri Rama ART work (1)
  ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ವಿಲಾಸ್ ನಾಯಕ್ ಕುಂಚದಲ್ಲಿ ಅರಳಿದ ಶ್ರೀರಾಮಮಂದಿರ ಉದ್ಘಾಟನೆಯ ಸಂಭ್ರಮ ಮತ್ತು ಭಾವಾನಂದ.

  ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ರಾಮನಗರಿ, ಶ್ರೀರಾಮನಾಗಮನದ ಆನಂದದಲ್ಲಿ ತೇಲಾಡುತ್ತಿದ್ದರೆ, ಯಜ್ಞಶಾಲೆಗಳಲ್ಲಿ ವೇದಮಂತ್ರದ ಘೊಷಣೆ ಮುಗಿಲುಮಟ್ಟಿದೆ. ‘ರಾಮ್ ಆಯೇಂಗೆ ರಾಮ್ ಆಯೇಂಗೆ’ ಎಂಬೆಲ್ಲ ರಾಮನನ್ನು ಕೇಂದ್ರೀಕರಿಸಿದ ಹಾಡುಗಳಂತೂ ಬೀದಿಬೀದಿಗಳಲ್ಲಿ ಅನುರಣಿಸುತ್ತಿವೆ. ಕಿಕ್ಕಿರಿದು ತುಂಬಿರುವ ಅಯೋಧ್ಯೆಯಲ್ಲಿ ಕಾಲಿಡಲೂ ಜಾಗವಿಲ್ಲದ ಪರಿಸ್ಥಿತಿ ನಿರ್ವಣವಾಗಿದ್ದರೂ, ಕೊರೆಯುವ ಚಳಿಯ ಮಧ್ಯೆಯೂ ಕಳೆದ ಮೂರ್ನಾಲ್ಕು ದಿನಗಳಿಂದ ಭಕ್ತರು ಭಾರೀ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ‘ಶುಭ್ ಘಡಿ ಆಯಿ, ತೈಯಾರ್ ಹೈ ಅಯೋಧ್ಯಾಧಾಮ್ ಶ್ರೀರಾಮ್ ಬಾಸೋ ಮೇರೆ ಮನ್ ಮೇ, ರಾಮ್ ಆಯೇಂಗೆ, ಅವಧ್ ಮೇ ರಾಮ್ ಆಗಯಾ, ರಾಮರಾಜ್ಯ’ ಎಂದು ಬರೆದಿರುವ ಪೋಸ್ಟರ್, ಹೋರ್ಡಿಂಗ್​ಗಳಿಂದ ಆವೃತವಾಗಿರುವ ಅಯೋಧ್ಯಾ ರಾಮೋತ್ಸವ ಸಂಭ್ರಮೋಲ್ಲಾಸದಲ್ಲಿದೆ.

  ಅಯೋಧ್ಯೆಯ ವಿವಿಧ ಪುರಾತನ ಮಂದಿರಗಳು, ಬೀದಿಗಳು, ರಾಮಪಥ, ಧರ್ಮಪಥ, ಸರಯೂ ನದಿದಂಡೆ, ನಯಾ ಘಾಟ್ ಮುಂತಾದ ಪ್ರಮುಖ ಸ್ಥಳಗಳ ರಸ್ತೆ, ಗಲ್ಲಿಗಳಲ್ಲಿ ರಾಮಾಯಣದ ವಿವಿಧ ಶ್ಲೋಕಗಳ ಪೋಸ್ಟರ್​ಗಳೇ ರಾರಾಜಿಸುತ್ತಿವೆ. ಎಲ್ಲೆಡೆ ಉಚಿತ ಅನ್ನದಾನ ನಡೆಯುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಬಂದ ರಾಮಭಕ್ತರು, ದಾನಿಗಳು ಭೋಜನಸೇವೆ ಮೂಲಕ ರಾಮೋತ್ಸವ ಸಂಭ್ರಮಕ್ಕೆ ಮೆರುಗು ತುಂಬಿದ್ದಾರೆ. ಸರಯೂ ನದಿ ದಂಡೆಯಲ್ಲೂ ರಾಮಭಜನೆ, ಗಾಯನ ಪ್ರತಿಧ್ವನಿಸುತ್ತಿವೆ. ರಾತ್ರಿ-ಹಗಲೆನ್ನದೆ, ಬೀದಿಬೀದಿಗಳಲ್ಲಿ ರಾಮಲೀಲಾ, ಭಗವತ್ ಕಥಾ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯುತ್ತಲೇ ಇವೆ.

  ಲೇಸರ್ ಲೈಟ್​ಗಳಿಂದ ಪ್ರಕಾಶಿತಗೊಂಡಿರುವ ಸರಯೂ ನದಿಯ ಸುಂದರ ದಡಗಳು ಜನಾಕರ್ಷಣೆಯ ಕೇಂದ್ರಬಿಂದುಗಳಾಗಿಬಿಟ್ಟಿವೆ. ಸೂರ್ಯಾಸ್ತದ ನಂತರದ ಸರಯೂ ಆರತಿಯಲ್ಲಿ ಭಕ್ತರು ಸಡಗರದಿಂದ ಪಾಲ್ಗೊಳ್ಳುತ್ತಿದ್ದಾರೆ. ಅಯೋಧ್ಯೆಯ ವಿವಿಧೆಡೆ ಸೂರ್ಯಕಂಬಗಳನ್ನು ಅಳವಡಿಸಲಾಗಿದೆ. ರಾಮಮಂದಿರ ಪ್ರದೇಶದಲ್ಲಿ ಜಟಾಯುವಿನ ಬೃಹತ್ ಹಿತ್ತಾಳೆಯ ವಿಗ್ರಹ ಸ್ಥಾಪಿಸಲಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣವೂ ದೀಪಗಳಿಂದ ಬೆಳಗುತ್ತಿದೆ. ಅಯೋಧ್ಯೆ ರೈಲು ನಿಲ್ದಾಣ ಕೂಡ ಗಮನ ಸೆಳೆಯುತ್ತಿದೆ. ಶೀತಗಾಳಿ ಇರುವುದರಿಂದ ನಗರಾಡಳಿತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಯೋಧ್ಯೆ ಏಮ್್ಸ ಮತ್ತು ಸುತ್ತಮುತ್ತಲಿನ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿದೆ.

  ರಾಮನ ಹಾದಿಯಲ್ಲೇ ಮೋದಿ
  ರಾಮೇಶ್ವರ: ಶ್ರೀರಾಮ ಅಯೋಧ್ಯೆಯಿಂದ ಶ್ರೀಲಂಕಾಗೆ ತೆರಳಿದ ಹಾದಿಯಲ್ಲಿನ ದೇವಸ್ಥಾನಗಳ ದರ್ಶನ ಪಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆರಂಭಿಸಿದ್ದ ಅಧ್ಯಾತ್ಮ ಪಯಣ ಭಾನುವಾರ ತಮಿಳುನಾಡಿನಲ್ಲಿ ಸಂಪನ್ನಗೊಂಡಿದೆ. ಇಲ್ಲಿನ ಧನುಷ್ಕೋಡಿ ಮತ್ತು ಅರಿಚಲ್ ಮುನೈ ಮಾರ್ಗದಲ್ಲಿನ ಕೋದಂಡರಾಮಸ್ವಾಮಿ ದೇವಸ್ಥಾನದಿಂದ ಕಲ್ಲೆಸೆತದ ದೂರದಲ್ಲಿ ಶ್ರೀಲಂಕಾ ಇದೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು, ಅರಿಚಲ್ ಮುನೈ ಕಡಲ ತೀರದಲ್ಲಿ ಪ್ರಾರ್ಥಿಸಿ ಪುಷ್ಪಗಳನ್ನು ಅರ್ಪಿಸಿದ್ದಲ್ಲದೆ, ರಾಷ್ಟ್ರಲಾಂಛನ ಇರುವ ಸ್ತಂಭಕ್ಕೂ ಪುಷ್ಪಗಳನ್ನು ಅರ್ಪಿಸಿದರು. ಇದೇ ಸಂದರ್ಭದಲ್ಲಿ ಅವರು ಪ್ರಾಣಾಯಾಮ ಮಾಡಿ, ಕಡಲ ನೀರಿನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅರಿಚಲ್ ಮುನೈ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದ ದಕ್ಷಿಣತುದಿಯಾಗಿದೆ. ಈ ವಾರದ ಆರಂಭದಲ್ಲಿ ಅವರು ಆಂಧ್ರಪ್ರದೇಶ ಹಾಗೂ ಕೇರಳದಲ್ಲಿರುವ ರಾಮಾಯಣಕ್ಕೆ ಸಂಬಂಧಿತ ದೇವಸ್ಥಾನಗಳಿಗೂ ಭೇಟಿ ನೀಡಿ, ದರ್ಶನ ಪಡೆದು, ಪೂಜೆ ಸಲ್ಲಿಸಿದ್ದರು.

  ಕಲಶದಲ್ಲಿ ತೀರ್ಥ ಕೊಂಡೊಯ್ದ ಮೋದಿ
  ರಾಮಸೇತು ನಿರ್ಮಾಣ ಅರಿಚಲ್ ಮುನೈನಿಂದಲೇ ಆರಂಭವಾಗಿದ್ದು, ಶನಿವಾರ ರಾತ್ರಿ ಪ್ರಧಾನಿ ಮೋದಿ ಇದೇ ಪ್ರದೇಶದಲ್ಲಿ ತಂಗಿದ್ದರು. ವಾನರ ಸೇನೆಯನ್ನು ಬಳಸಿಕೊಂಡು ಅರಿಚಲ್ ಮುನೈನಿಂದ ಶ್ರೀಲಂಕಾಕ್ಕೆ ಸಂರ್ಪಸುವ ರಾಮಸೇತುವನ್ನು ನಿರ್ವಿುಸಲಾಗಿತ್ತು. ಅರಿಚಲ್ ಮುನೈ ಬಳಿಕ ಮೋದಿ ಮಧುರೈಗೆ ತೆರಳಿದ್ದು, ಅಲ್ಲಿಂದ ವಿಮಾನದಲ್ಲಿ ನವದೆಹಲಿಗೆ ನಿರ್ಗಮಿಸಿದರು. ಈ ಅಧ್ಯಾತ್ಮ ಪ್ರಯಾಣದಲ್ಲಿದ್ದ ಮೋದಿ, ತಮಿಳುನಾಡಿನ ಪವಿತ್ರ ತೀರ್ಥಗಳನ್ನು ಕಲಶದಲ್ಲಿ ಕೊಂಡೊಯ್ದರು ಎಂಬುದಾಗಿ ದೇವಸ್ಥಾನಗಳ ಅರ್ಚಕರು ತಿಳಿಸಿದ್ದಾರೆ.

  10 ಲಕ್ಷ ದೀಪಗಳ ಬೆಳಕು
  ಪ್ರಾಣಪ್ರತಿಷ್ಠೆ ಸಮಾರಂಭ ಸಂಪನ್ನಗೊಂಡ ಬಳಿಕ ಸಂಜೆ ವೇಳೆ ಅಯೋಧ್ಯೆಯಲ್ಲಿ 10 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಮನೆ, ಅಂಗಡಿ, ಪೌರಾಣಿಕ ಸ್ಥಳ, ಧಾರ್ವಿುಕ ಮಂದಿರಗಳಲ್ಲಿ ‘ರಾಮಜ್ಯೋತಿ’ ಪ್ರಜ್ವಲನಗೊಳ್ಳಲಿದೆ. ಇಲ್ಲಿನ ಸರಯೂ ನದಿ ತಟದಿಂದ ತರಲಾದ ಮಣ್ಣಿನಿಂದಲೇ ದೀಪಗಳನ್ನು ತಯಾರಿಸಲಾಗಿರುವುದು ವಿಶೇಷ.

  ಭದ್ರಕೋಟೆಯಾದ ಅಧ್ಯಾತ್ಮನಗರಿ
  ಫೈಜಾಬಾದ್​ನಿಂದ ಹಿಡಿದು ಅಯೋಧ್ಯೆಯ ಮೂಲೆಮೂಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಇಡೀ ಪ್ರದೇಶ ಭದ್ರತಾ ಶಿಬಿರವಾಗಿ ಮಾರ್ಪಟ್ಟಿದೆ. ಸಾವಿರಾರು ಗಣ್ಯ ವ್ಯಕ್ತಿಗಳು ನಗರಕ್ಕೆ ಬಂದಿರುವು ದರಿಂದ ಭದ್ರತಾಲೋಪ ಎದುರಾಗದಂತೆ ನೋಡಿಕೊಳ್ಳಲು ಬ್ಲಾ್ಯಕ್ ಕಮಾಂ ಡೋಸ್, ಉಗ್ರ ನಿಗ್ರಹ ದಳ, ಅರೆ ಸೇನಾ ಮೀಸಲು ಪಡೆ ಸೇರಿ ಸಾವಿರಾರು ಭದ್ರತಾ ಸಿಬ್ಬಂದಿ ಸಾರ್ವಜನಿಕ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ.

  ಬಾಲರಾಮನಿಗೆ ಸೂರ್ಯತಿಲಕ
  ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿರುವ ಶ್ರೀಬಾಲರಾಮನ ಹಣೆಯ ಮೇಲೆ ವರ್ಷಕ್ಕೊಮ್ಮೆ ಸೂರ್ಯತಿಲಕ ಗೋಚರಿಸಲಿದೆ. ಅರ್ಥಾತ್, ಬಾಲರಾಮನ ಮೂರ್ತಿಯ ಹಣೆಯ ಮೇಲೆ ಪ್ರತಿ ರಾಮನವಮಿಯಂದು ಮಧ್ಯಾಹ್ನ ಸುಮಾರ 9 ನಿಮಿಷಗಳ ಕಾಲ ಸೂರ್ಯಕಿರಣ ರ್ಸ³ಸಲಿದೆ. ಪ್ರತಿ ಚೈತ್ರಮಾಸದ 9ನೇ ದಿನದಂದು ಈ ರೀತಿಯ ಸೂರ್ಯಕಿರಣ ಸ್ಪರ್ಶವಾಗುವಂತೆ ವೈಜ್ಞಾನಿಕವಾಗಿ ಈ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

  ಅಯೋಧ್ಯೆ ದೇಣಿಗೆ ಪ್ರತಿ 2 ಗಂಟೆಗಳಿಗೊಮ್ಮೆ ದ್ವಿಗುಣ
  ನವದೆಹಲಿ: ಅಯೋಧ್ಯೆಯಲ್ಲಿನ ಶ್ರೀಬಾಲರಾಮ ಪ್ರಾಣಪ್ರತಿಷ್ಠಾಪನೆ ಸಲುವಾಗಿ ಸಂದಾಯ ಆಗುತ್ತಿರುವ ದೇಣಿಗೆ ಮೊತ್ತ ಪ್ರತಿ ಎರಡು ಗಂಟೆಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ಲ್ಲಿ ದೇಣಿಗೆಗೆ ಲೈವ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಗೂಗಲ್ ಪೇ, ಭಾರತ್ ಪೇ ಮುಂತಾದ ಆಪ್​ಗಳ ಮೂಲಕವೂ ದೇಣಿಗೆ ಕಳುಹಿಸಬಹುದಾಗಿದೆ. ಜತೆಗೆ ಟ್ರಸ್ಟ್​ನ ವೆಬ್​ಸೈಟ್​ನಲ್ಲೂ ಡೋನೇಷನ್ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ.

  ಜಟಾಯು ಪ್ರತಿಮೆಗೆ ನಮನ
  ಕುಬೇರ್ ಟಿಲಾದಲ್ಲಿ ಕಳೆದ ತಿಂಗಳು ಸ್ಥಾಪಿಸಲಾದ ಜಟಾಯು ಪ್ರತಿಮೆ ಆಕರ್ಷಕವಾಗಿ, ಎಲ್ಲರ ಗಮನಸೆಳೆಯುತ್ತಿದೆ. ರಾಮಾಯಣದಲ್ಲಿ ಜಟಾಯು ಸೀತೆಯನ್ನು ರಾವಣನ ಕಪಿಮುಷ್ಟಿಯಿಂದ ರಕ್ಷಿಸಲು ನಡೆಸಿದ ಹೋರಾಟಗಳ ಬಗ್ಗೆ ಸಾಕಷ್ಟು ವಿವರಣೆಯಿದೆ. ಪ್ರಾಣಪ್ರತಿಷ್ಠೆ ಬಳಿಕ ಜಟಾಯುವಿನ ಕಂಚಿನ ಪ್ರತಿಮೆಗೆ ಮೋದಿ ನಮನ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.

  ಅಯೋಧ್ಯೆ ರಾಮಮಯ
  ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯೆ ಪುಷ್ಪಾಲಂಕೃತ ಗೊಂಡಿದ್ದು, ಎಲ್ಲೆಲ್ಲೂ ರಾಮನಾಮ ಕೇಳಿ ಬರುತ್ತಿದೆ. ಜತೆಗೆ ಅಯೋಧ್ಯೆಯ ಬೀದಿಬೀದಿಗಳಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತ ಪಾತ್ರಧಾರಿಗಳು ಕಂಗೊಳಿಸುತ್ತಿದ್ದಾರೆ. ಪ್ರತಿಷ್ಠಾಪನೆಯ ಸಂಭ್ರಮ ಈಗಾಗಲೇ ಕಳೆಗಟ್ಟಿದ್ದು, ಜೈ ಶ್ರೀರಾಮ್ ಘೋಷಣೆಗಳೂ ಅನುರಣಿಸುತ್ತಿವೆ.

  ಭೂಕಂಪ ನಿರೋಧಕ
  ಶ್ರೀರಾಮಮಂದಿರ ಇರುವ ಅಯೋಧ್ಯೆಯು ಹಿಮಾಲಯ ಪ್ರದೇಶದ ಭೂಕಂಪ ಸಂಭವಿಸುವ ವ್ಯಾಪ್ತಿಯಲ್ಲಿ ಬರುವುದರಿಂದ ಭೂಕಂಪ ನಿರೋಧಕವಾಗಿರುವಂತೆಯೂ ಮಂದಿರವನ್ನು ನಿರ್ವಿುಸಲಾಗಿದೆ. ನೂತನ ಮಂದಿರ ರಿಕ್ಟರ್ ಮಾಪಕದಲ್ಲಿ 8ರಷ್ಟು ತೀವ್ರತೆ ಇರುವ ಭೂಕಂಪ ಸಂಭವಿಸಿದರೂ ದೃಢವಾಗಿ ಇರಬಲ್ಲದು ಎಂದು ಸಿಬಿಆರ್​ಐ ವಿಜ್ಞಾನಿ ದೇವದತ್ತ ಘೋಷ್ ತಿಳಿಸಿದ್ದಾರೆ.

  ಪ್ರಧಾನಿ ಮೋದಿ ಮುಂದಾಳತ್ವ
  ಧಾರ್ವಿುಕ ಆಚರಣೆ ಅಥವಾ ಕೈಂಕರ್ಯವನ್ನು ನಡೆಸುವ ವ್ಯಕ್ತಿಗೆ ಹಿಂದು ಧರ್ಮದಲ್ಲಿ ಯಜಮಾನ ಎಂದು ಕರೆಯಲಾಗುತ್ತದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಯಜಮಾನರು ಎಂದು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಧಾರ್ವಿುಕ ಕೆಲಸವನ್ನು ವಿಶೇಷವಾಗಿ ಯಾಗ, ಯಜ್ಞದ ಆಚರಣೆಯನ್ನು ಅಚ್ಚುಕಟ್ಟಾಗಿ ನಡೆಯುವುದನ್ನು ಯಜಮಾನ ಖಾತ್ರಿಪಡಿಸಬೇಕು. ಅಂದರೆ ಯಜಮಾನರದ್ದು ಪೋಷಕನ ಪಾತ್ರವಾಗಿರುತ್ತದೆ. ಪ್ರಾಣಪ್ರತಿಷ್ಠೆ ಪೂರ್ವದ ಪ್ರಕ್ರಿಯೆಗಳಿಗೆ ಟ್ರಸ್ಟ್​ನ ಹಿರಿಯ ಸದಸ್ಯ ಡಾ. ಅನಿಲ್ ಮಿಶ್ರಾ ಮತ್ತವರ ಪತ್ನಿಯನ್ನು ಯಜಮಾನರನ್ನಾಗಿ ಟ್ರಸ್ಟ್ ನೇಮಕ ಮಾಡಿತ್ತು.

  ಆರನೇ ದಿನ ಏನೇನಾಯ್ತು?
  ಭಾನುವಾರ ಬೆಳಗ್ಗೆ 9ರಿಂದ ಮಂದಿರದಲ್ಲಿ 114 ಕಲಶಗಳಲ್ಲಿ ಪವಿತ್ರ ಜಲ ಮತ್ತು ದೇಶದ ವಿವಿಧ ಯಾತ್ರಾ ಕೇಂದ್ರಗಳಿಂದ ತಂದ ಜಲದಿಂದ ಬಾಲರಾಮ ಮೂರ್ತಿಗೆ ಅಭಿಷೇಕ ಮಾಡಲಾಯಿತು. ನಿತ್ಯ ಪೂಜೆ, ಹವನ, ಪಾರಾಯಣದೊಂದಿಗೆ ಪೂಜೆ ಪ್ರಕ್ರಿಯೆ ಆರಂಭಗೊಂಡು, ಸಂಜೆವರೆಗೆ ಮುಂದುವರಿಯಿತು. ರಾತ್ರಿ ಜಾಗರಣ ಅಧಿವಾಸ ಆರಂಭವಾಗಲಿದೆ. ಯಜ್ಞಶಾಲೆಯಲ್ಲಿ ಬಾಲರಾಮನ ಹಳೆಯ ಮೂರ್ತಿಯ ಪೂಜೆಯೂ ನಡೆದಿದೆ. ಚೆನ್ನೈ, ಪುಣೆ ಸೇರಿ ಹಲವೆಡೆಗಳಿಂದ ತರಿಸಿಕೊಂಡ ವಿವಿಧ ಹೂವುಗಳಿಂದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.

  ಸಂತಸ ಪಡುವ ಸಮಯೋಚಿತ ಕಾಲ
  ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾ ಮಹೋತ್ಸವದಂಥ ಸಂತಸದ ಸಂಗತಿ ಜೀವನದಲ್ಲಿ ಬೇರೇನೂ ಇರಲಾರದು. ಶ್ರೀರಾಮ ಭಾರತದ ಪ್ರಾಣ. ಹೀಗಾಗಿ ರಾಮ ದೇವರ ಪ್ರಾಣಪ್ರತಿಷ್ಠೆ ರಾಷ್ಟ್ರದ ಪ್ರಾಣಪ್ರತಿಷ್ಠೆ ಎಂದೇ ಅರ್ಥ. ಈ ಕಾರ್ಯ ಭಾರತದ ಅಭ್ಯುದಯದ ಮೂಲಸಂಕೇತ. ಭಾರತ ವಿಶ್ವಗುರು ಆಗುವತ್ತ ದಾಪುಗಾಲು ಇಡುತ್ತಿದೆ ಎನ್ನುವುದಕ್ಕೂ ಸಾಕ್ಷ ್ಯ ಉಡುಪಿ ಅಷ್ಟ ಮಠಗಳಿಂದ ಶ್ರೀರಾಮ ಜನ್ಮಭೂಮಿಯ ಆಂದೋಲನಕ್ಕೆ ಮೂಲಸ್ಪೂರ್ತಿ ಲಭಿಸಿತ್ತು. ಉಡುಪಿಯ ಎಲ್ಲ ಶ್ರೀಗಳು ರಾಮ ಜನ್ಮಭೂಮಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಇಂದು ಈ ಹಂತದ ಬೆಳವಣಿಗೆಗೆ ಕಾರಣರಾಗಿದ್ದಾರೆ. ನಮ್ಮ 2ನೇ ಪರ್ಯಾಯ ಕಾಲದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೆ ಭೂಮಿಕೆ ಸಿದ್ಧವಾಗಿತ್ತು. ಇದೀಗ ಚತುರ್ಥ ಪರ್ಯಾಯ ಸಂದರ್ಭ ಅಯೋಧ್ಯೆಯಲ್ಲಿ ರಾಮನಿಗೆ ಪ್ರಾಣಪ್ರತಿಷ್ಠೆ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ಪರ್ಯಾಯಕ್ಕೂ, ಅಯೋಧ್ಯೆಯ ರಾಮಮಂದಿರ ನಿರ್ವಣಕ್ಕೂ, ಉಡುಪಿಯ ಎಲ್ಲ ಮಠಗಳಿಗೂ ವಿಶೇಷ ಸಂಬಂಧವಿದೆ.

  ನೇರಪ್ರಸಾರಕ್ಕೆ ತಮಿಳುನಾಡಿನಲ್ಲಿ ನಿಷೇಧ
  ಚೆನ್ನೈ: ಅಯೋಧ್ಯೆಯ ನೂತನ ರಾಮಮಂದಿರದಲ್ಲಿನ ಶ್ರೀಬಾಲರಾಮನ ಪ್ರಾಣಪ್ರತಿಷ್ಠಾಪನೆಯ ನೇರಪ್ರಸಾರವನ್ನು ತಮಿಳುನಾಡಿನಲ್ಲಿ ನಿಷೇಧಿಸಿರುವ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ, ಯಾವುದೇ ವಿಶೇಷ ಪೂಜೆಗಳನ್ನು ಕೈಗೊಳ್ಳಲು ನಿಷೇಧ ಹೇರಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಜಪ, ಅನ್ನದಾನ, ದೇವಾಲಯ ಉದ್ಘಾಟನೆ ಸೇರಿದಂತೆ ಪ್ರಾಣಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು ಎಂಬ ಸರ್ಕಾರದ ಸೂಚನೆ ವಿವಾದಾತ್ಮಕವಾಗಿ ಪರಿಣಮಿಸಿದೆ. ಪರೋಕ್ಷವಾಗಿ ಹಾಗೂ ಮೌಖಿಕವಾಗಿ ಈ ನಿಷೇಧದ ಕುರಿತು ಸಂದೇಶ ರವಾನಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಇನ್ನೊಂದೆಡೆ ಸರ್ಕಾರ ಹೇರಿದ ನಿಷೇಧಕ್ಕೆ ಹಿಂದುಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಡಿಎಂಕೆ ಸರ್ಕಾರದ ಸನಾತನ ಧರ್ಮ ತೊಲಗಿಸುವ ಅಭಿಯಾನದ ಭಾಗವಾಗಿದೆ. ಸರ್ಕಾರ ದೇವಸ್ಥಾನದ ಸಂಪ್ರದಾಯಗಳಲ್ಲಿ ಅಡ್ಡಗಾಲು ಹಾಕಿದೆ. ದೇವಸ್ಥಾನಗಳಿಗೆ ತೊಂದರೆ ಮಾಡುವ ನಿಟ್ಟಿನಲ್ಲಿ ಪ್ರವೇಶಶುಲ್ಕ ಹೆಚ್ಚಳ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ನಿರ್ಮಲಾ ಅಸಮಾಧಾನ
  ತಮಿಳುನಾಡಿನಲ್ಲಿ 200ಕ್ಕೂ ಅಧಿಕ ರಾಮ ದೇವಸ್ಥಾನಗಳಿದ್ದು, ಅಲ್ಲಿನ ಸರ್ಕಾರ ಅಯೋಧ್ಯೆಯ ನೇರಪ್ರಸಾರಕ್ಕೆ ನಿಷೇಧ ಹೇರಿದೆ, ಖಾಸಗಿ ನಿರ್ವ ಹಣೆಯ ದೇವಸ್ಥಾನಗಳಿಗೂ ಪೊಲೀಸರ ಮೂಲಕ ನಿರ್ಬಂಧ ವಿಧಿಸಲಾಗುತ್ತಿದೆ. ಪೆಂಡಾಲ್​ಗಳನ್ನು ಧ್ವಂಸಗೊಳಿಸುವುದಾಗಿಯೂ ಆಯೋಜಕರಿಗೆ ಎಚ್ಚರಿಕೆ ವಿಧಿಸಿದ್ದಾರೆ. ಈ ಹಿಂದುವಿರೋಧಿ ನಿಲುವು ಮತ್ತು ದ್ವೇಷದ ನಡೆಯನ್ನು ಖಂಡಿಸುತ್ತೇನೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

  ಸಾನಿಯಾ-ಶೋಯಿಬ್​ ಡಿವೋರ್ಸ್​ಗೆ ಅಸಲಿ ಕಾರಣ ಇಲ್ಲಿದೆ! ಮಲಿಕ್​ ವಿರುದ್ಧವೇ ತಿರುಗಿಬಿದ್ದ ಪಾಕ್​ ಮಾಧ್ಯಮಗಳು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts