More

  ಅಯೋಧ್ಯೆ ಅಕ್ಷತೆಗೆ ಭವ್ಯ ಸ್ವಾಗತ

  ಬೇಲೂರು : ಅಯೋಧ್ಯೆಯ ರಾಮಮಂದಿರದಲ್ಲಿ ಜ. 22ರಂದು ರಾಮನ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು ಆ ಪ್ರಯುಕ್ತ ಅಯೋಧ್ಯೆಯಿಂದ ಬಂದ ರಾಮನ ಭಾವಚಿತ್ರ, ಆಹ್ವಾನ ಪತ್ರಿಕೆ ಹಾಗೂ ಮಂತ್ರಾಕ್ಷತೆಗೆ ಬೇಲೂರಿನಲ್ಲಿ ಶುಕ್ರವಾರ ಬೈಕ್ ಜಾಥಾ ಮತ್ತು ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಲಾಯಿತು.
  ಪಟ್ಟಣದ ನೆಹರೂ ವೃತ್ತದಲ್ಲಿ ಸಮಾವೇಶಗೊಂಡಿದ್ದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು
  ಮುಖ್ಯರಸ್ತೆ ಮೂಲಕ ಸೀತಾ ರಾಮಾಂಜನೇಯ ದೇಗುಲ ಹಾಗೂ ಚನ್ನಕೇಶವ ದೇವಾಲಯದ ವರೆಗೆ ಜಾಥಾ ನಡೆಸಿ ಗಮನ ಸೆಳೆದರು.
  ಬಜರಂಗದಳ ಕಾರ್ಯದರ್ಶಿ ನಾಗೇಶ್ ಮಾತನಾಡಿ, ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಮತ್ತು ರಾಮನ ಭಾವಚಿತ್ರವನ್ನು ತಾಲೂಕಿನ ಪ್ರತಿಯೊಂದು ಮನೆಗೂ ತಲುಪಿಸುತ್ತೇವೆ. ಹನುಮ ಜಯಂತಿ ದಿನದಂದು ಈ ಸೇವೆಗೆ ಚಾಲನೆ ನೀಡಲಾಗುವುದು. ತಾಲೂಕಿನ ಜನರು ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ಸಾಕ್ಷಿಯಾಗಬೇಕು ಎಂದರು.
  ವಿಹಿಂಪ ಮತ್ತು ಬಜರಂಗದಳದ ಕಾರ್ಯಕರ್ತರಾದ ಸಂತೋಷ್, ಮೋಹನ್, ಅಶೋಕ್, ದರ್ಶನ್, ಭರತ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts