ಆಶ್ರಮದ ಶೆಲ್ಟರ್‌ನಲ್ಲಿದ್ದ ಏಳು ಹಸುಗಳ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಿಚ್ಚಿಟ್ಟ ಕಥೆಯಿದು…

ಅಯೋಧ್ಯೆ: ಹಸುಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ರಾಜ್‌ಕುಮಾರ್‌ ಎಂದು ಗುರುತಿಸಲಾಗಿದ್ದು, ಕರ್ತಾಲಿಯ ಬಾಬಾ ಆಶ್ರಮದಿಂದ ನಡೆಸಲಾಗುತ್ತಿದ್ದ ಶೆಲ್ಟರ್‌ನಲ್ಲಿ ಕೃತ್ಯ ಎಸಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಕೃತ್ಯವನ್ನು ಕಂಡ ಸ್ವಯಂಸೇವಕರು ಕೂಡಲೇ ಇತರರಿಗೆ ಮಾಹಿತಿ ನೀಡಿದ್ದಾರೆ. ಶೆಲ್ಟರ್‌ನಿಂದ ವಾಪಸ್ಸಾಗುತ್ತಿದ್ದ ವ್ಯಕ್ತಿ ಮತ್ತೊಮ್ಮೆ ಹಸುಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಚೆನ್ನಾಗಿ ಥಳಿಸಲಾಗಿದೆ.

ಸದ್ಯ ರಾಜ್‌ಕುಮಾರ್‌ನನ್ನು ಬಂಧಿಸಿ ಐಪಿಸಿ ಸೆಕ್ಷನ್‌ 376 ಮತ್ತು 511ರ ಪ್ರಾಣಿಗಳ ವಿರುದ್ಧ ಕ್ರೌರ್ಯ ನಡೆಸುವ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಯೋಧ್ಯದ ಎಸ್ಎಸ್‌ಪಿ ಜೋಗೇಂದ್ರ ಕುಮಾರ್‌ ತಿಳಿಸಿದ್ದಾರೆ.

ಏಳು ಹಸುಗಳಿಗೆ ಒಂದಾದ ನಂತರ ಒಂದರಂತೆ ಆರೋಪಿ ಹೇಳಲು ಸಾಧ್ಯವಾಗದಂತ ಕೃತ್ಯ ಎಸಗಿದ್ದು, ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಕೃತ್ಯ ನಮ್ಮನ್ನು ತಲ್ಲಣಗೊಳಿಸಿದ್ದು, ಅರ್ಥ ಮಾಡಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ದುಃಖಬರಿತರಾಗಿ ಆಶ್ರಮದ ಸ್ವಾಮೀಜಿ ತಿಳಿಸಿದ್ದಾರೆ.

ಆಲ್ಕೋಹಾಲ್‌ನಿಂದ ಪ್ರೇರಿತನಾಗಿ ಕೃತ್ಯ ಎಸಗಿರುವುದಾಗಿ ಹೇಳಿರುವ ಆರೋಪಿ, ನಾನು ಕುಡಿದಿದ್ದೆ, ಆಗ ಏನು ಮಾಡಿದೆ ಎಂಬುದೇ ನನಗೆ ತಿಳಿದಿಲ್ಲ, ಇಬ್ಬರು ನನಗೆ ಹೊಡೆದದ್ದು ಮಾತ್ರ ನನಗೆ ನೆನಪಿದೆ. ನನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾನೆ. (ಏಜೆನ್ಸೀಸ್)

Leave a Reply

Your email address will not be published. Required fields are marked *