18 C
Bangalore
Friday, December 6, 2019

ಮೂರೂವರೆ ತಿಂಗಳಲ್ಲಿ ಅಯೋಧ್ಯೆ ತೀರ್ಪ?: ರಾಮ ಜನ್ಮಭೂಮಿ – ಬಾಬ್ರಿ ಕಟ್ಟಡ ವಿವಾದ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಅರ್ಜಿ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ನವದೆಹಲಿ: ದಶಕಗಳ ಕಾನೂನು ಹೋರಾಟದ ಬಳಿಕ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ಆದೇಶ ನೀಡಿತ್ತು. ಆ ಪ್ರಕಾರ ಅಯೋಧ್ಯೆಯ 1.12 ಹೆಕ್ಟೇರ್ ಭೂಮಿಯನ್ನು 3 ಸಮಾನ ಭಾಗವನ್ನಾಗಿ ಹಂಚಲು ನ್ಯಾಯಪೀಠ ಆದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ 9 ವರ್ಷಗಳು ಕಳೆದವು. ಮುಂದಿನ ಮೂರೂವರೆ ತಿಂಗಳಲ್ಲಿ ಅಯೋಧ್ಯೆ ಪ್ರಕರಣಕ್ಕೆ ನ್ಯಾಯಾಂಗದಲ್ಲಿ ರ್ತಾಕ ಅಂತ್ಯ ಕಾಣುವ ಸಾಧ್ಯತೆಯಿದೆ. ಅರ್ಜಿ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠದ ಮುಖ್ಯಸ್ಥ ಸಿಜೆಐ ರಂಜನ್ ಗೊಗೊಯ್ . ನ.18ಕ್ಕೆ ನಿವೃತ್ತಿಯಾಗಲಿದ್ದಾರೆ. ಅಷ್ಟರೊಳಗೆ ವಿಚಾರಣೆ ಅಂತ್ಯಗೊಂಡು ತೀರ್ಪು ಹೊರಬರಲಿದೆ ಎನ್ನಲಾಗುತ್ತಿದೆ.

ವಿಚಾರಣೆ ಹೇಗಿರಬೇಕು ಎನ್ನುವುದು ಗೊತ್ತಿದೆ!: ‘ವಿಚಾರಣೆ ಆರಂಭದಲ್ಲಿ ಮುಸ್ಲಿಂ ಅರ್ಜಿದಾರರ ವಾದ ಆಲಿಸಬೇಕು. ನನಗೆ ವಾದ ಮಂಡನೆಗೆ ಕನಿಷ್ಠ 20 ದಿನಗಳ ಅವಕಾಶ ನೀಡಬೇಕು. ಇದಕ್ಕೆ ಯಾವುದೇ ಅಡಚಣೆ ಆಗಕೂಡದು’ ಎಂದು ಈ ನ್ಯಾಯಪೀಠಕ್ಕೆ ವಕೀಲ ರಾಜೀವ್ ಧವನ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನ್ಯಾಯ ಕಲಾಪ ಹೇಗೆ ನಡೆಸಬೇಕು ಎನ್ನುವುದನ್ನು ಕೋರ್ಟ್ ನಿರ್ಧರಿಸಲಿದೆ. ಈ ಬಗ್ಗೆ ನೀವು ನಮಗೆ ನೆನಪಿಸಬೇಕಿಲ್ಲ’ ಎಂದು ಖಡಕ್ಕಾಗಿ ಹೇಳಿದೆ.

ಹಿಂದು ಸಂಘಟನೆಗಳ ಸ್ವಾಗತ

ಸುಪ್ರೀಂ ಕೋರ್ಟ್​ನ ನಿತ್ಯ ವಿಚಾರಣೆ ಯನ್ನು ಆರ್​ಎಸ್​ಎಸ್ ಸೇರಿ ಇತರ ಹಿಂದು ಸಂಘಟನೆಗಳು ಸ್ವಾಗತಿಸಿವೆ. ತ್ವರಿತ ವಿಚಾರಣೆ ಮೂಲಕ ವಿವಾದ ಅಂತ್ಯಕಾಣುವ ಭರವಸೆಯಿದ್ದು, ರಾಮಜನ್ಮಭೂಮಿಯಲ್ಲಿ ಆದಷ್ಟು ಬೇಗ ಮಂದಿರ ನಿರ್ವಣವಾಗಲಿದೆ ಎಂದು ಆರ್​ಎಸ್​ಎಸ್ ವಿಶ್ವಾಸವ್ಯಕ್ತಪಡಿಸಿದೆ.

ಮುಂದಿನ ನ್ಯಾಯ ಕಲಾಪಗಳೇನು?

  • ಅಲಹಾಬಾದ್ ಕೋರ್ಟ್ ಆದೇಶ, ಐತಿಹಾಸಿಕ ಹಾಗೂ ಪೌರಾಣಿಕ ದಾಖಲೆಗಳ ಪರಿಶೀಲನೆ
  • ಕೇಂದ್ರ ಸರ್ಕಾರ, ಉತ್ತರ ಪ್ರದೇಶ ರಾಜ್ಯ ಸರ್ಕಾರ ಹಾಗೂ ಎಲ್ಲ ಅರ್ಜಿದಾರರ ವಾದ ಆಲಿಕೆ
  • ವಿವಾದ ರಹಿತ ಭೂಮಿ ಯನ್ನು ಕೇಂದ್ರಕ್ಕೆ ನೀಡುವ ಕುರಿತು ಮಧ್ಯಂತರ ತೀರ್ಮಾನ ಸಾಧ್ಯತೆ
  • ಎಲ್ಲರ ವಾದ ಆಲಿಸಿದ ಬಳಿಕ ತೀರ್ಪು ಕಾಯ್ದಿರಿಸುವ ಸಾಧ್ಯತೆ

ಈ ಹಿಂದೆಯೂ ವಿಫಲ ಪ್ರಯತ್ನ

  • 1990: ಉಭಯ ಪಕ್ಷಗಳ ನಡುವೆ ಸಂಧಾನಕ್ಕೆ ಅಂದಿನ ಪ್ರಧಾನಿ ಚಂದ್ರಶೇಖರ್ ಪ್ರಯತ್ನ
  • 1992: ಪ್ರಧಾನಿ ನರಸಿಂಹ ರಾವ್ ಅವರಿಂದ ಆಯೋಗ ಸ್ಥಾಪನೆ, ಸಂಧಾನಕ್ಕೆ ವಿಫಲ ಯತ್ನ
  • 2001: ಪ್ರಧಾನಿ ಕಾರ್ಯಾಲಯದಲ್ಲಿ ಅಯೋಧ್ಯೆ ಘಟಕ ಆರಂಭ, ಸಂಧಾನ ಸಾಧ್ಯತೆ ಬಗ್ಗೆ ಚರ್ಚೆ
  • 2002: ಕಂಚಿ ಶ್ರೀಗಳಿಂದ ಸಂಧಾನಕ್ಕೆ ಯತ್ನ
  • 2003: ಕಂಚಿ ಶ್ರೀಗಳ ಸಂಧಾನಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ವಿರೋಧ
  • 2004: ಸಂಧಾನಕ್ಕೆ ಪ್ರಯತ್ನ ನಡೆಸಿದ ಭೌದ್ಧಧರ್ಮ ಗುರು ದಲೈ ಲಾಮಾ
  • 2015: ಸಂಧಾನ ಪ್ರಕ್ರಿಯೆಗೆ ಮುಂದಾದ ಮೂಲ ಅರ್ಜಿದಾರ ಮೊಹಮದ್ ಅನ್ಸಾರಿ. ಆದರೆ ನಿರೀಕ್ಷಿತ ಪರಿಹಾರ ಸೂತ್ರ ಬರುವ ಮುನ್ನವೇ ಅನ್ಸಾರಿ ನಿಧನ
  • 2017: ತ್ರಿಸೂತ್ರ ಪರಿಹಾರದ ಮೂಲಕ ಸಂಧಾನಕ್ಕೆ ಮುಂದಾದ ಶ್ರೀ ಶ್ರೀ ರವಿಶಂಕರ್. ಆದರೆ ಉಭಯ ಪಕ್ಷಗಳಿಂದ ತಿರಸ್ಕಾರ.
  • 2018: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿನಿಧಿ ಮೌಲಾನಾ ಸಲ್ಮಾನ್ ಅವರಿಂದಲೂ ಸಂಧಾನ ಪ್ರಯತ್ನ, ಶ್ರೀ ಶ್ರೀ ರವಿಶಂಕರ್ ಭೇಟಿ.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...