ಅಯೋಧ್ಯೆಯಲ್ಲಿ ರಾಮೋತ್ಸಾಹದ ರಂಗು!

Latest News

ಸದುದ್ದೇಶದ ಪಕ್ಷಾಂತರ ತಪ್ಪಲ್ಲ; ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ

ವಿಜಯವಾಣಿ ಸುದ್ದಿಜಾಲ ಯಲ್ಲಾಪುರ: ಸದುದ್ದೇಶದಿಂದ ಪಕ್ಷಾಂತರ ಮಾಡಿದರೆ ತಪ್ಪಲ್ಲ. ಹೊಸದಾಗಿ ಪಕ್ಷಕ್ಕೆ ಬಂದವರು ಹಾಲಿನಲ್ಲಿ ಸಕ್ಕರೆಯಂತೆ ಬೆರೆಯಬೇಕು ಎಂದು ಮುಜರಾಯಿ ಹಾಗೂ ಬಂದರು...

ಇಂದಿನಿಂದ ಬಾಬಾ ರಾಮ್‌ದೇವ್ ಯೋಗೋತ್ಸವ

ಉಡುಪಿ: ಐದು ದಿನಗಳ ಯೋಗೋತ್ಸವಕ್ಕೆ ಕೃಷ್ಣನೂರು ಉಡುಪಿ ಸಜ್ಜುಗೊಂಡಿದ್ದು, ನಗರ ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿದೆ. ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನ.16ರಿಂದ 20ರ ವರೆಗೆ ಬೃಹತ್ ಯೋಗ...

ಉದ್ಯಮಿಯಿಂದ 5 ಹುಲಿಮರಿ ದತ್ತು

ಗುರುಪುರ: ಕೊಲ್ಲಿ ರಾಷ್ಟ್ರ ಅಬುಧಾಬಿಯ ಪ್ರಸಿದ್ಧ ಉದ್ಯಮಿ, ಮೂಲತಃ ಮಂಗಳೂರಿನ ರಾಮದಾಸ ಕಾಮತ್ ಮತ್ತು ಅವರ ಪತ್ನಿ ಜಯಶ್ರೀ ಕಾಮತ್ ಪಿಲಿಕುಳ ಉದ್ಯಾನದ ಅಭಿವೃದ್ಧಿ ಕಾರ್ಯಗಳಿಗೆ...

ರೈತರ ಬಂದೂಕು ಪೊಲೀಸರ ವಶಕ್ಕೆ; ಬೆಳೆ ಉಳಿಸಿಕೊಳ್ಳಲು ಪರದಾಟ

ರಾಜೇಂದ್ರ ಶಿಂಗನಮನೆ ಶಿರಸಿ: ವಿಧಾನಸಭೆ ಉಪಚುನಾವಣೆ ಹಿನ್ನೆಲೆ ಯಲ್ಲಿ ಬಂದೂಕುಗಳನ್ನು ಪೊಲೀಸ್ ಠಾಣೆಯವರು ವಶಕ್ಕೆ ಪಡೆದಿರುವುದರಿಂದ ರೈತರಿಗೆ ತೊಂದರೆ ಆಗುತ್ತಿದೆ. ಇದರಿಂದ ವಿನಾಯಿತಿ...

‘ಪವಿತ್ರ ಆರ್ಥಿಕತೆ’ಗಾಗಿ ಅಸಹಕಾರ ಚಳವಳಿ: ರಂಗಕರ್ಮಿ ಪ್ರಸನ್ನ ಹೆಗ್ಗೋಡು

ಮಂಗಳೂರು: ಸಣ್ಣ ಕೈಗಾರಿಕೆಗಳಿಗೆ ಚೈತನ್ಯ ತುಂಬುವ ಉದ್ದೇಶದಿಂದ ‘ಪವಿತ್ರ ಆರ್ಥಿಕತೆ’ ಹೆಸರಿನಲ್ಲಿ ಡಿ.1ರಿಂದ ಕೇಂದ್ರ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿರುವುದಾಗಿ ರಂಗಕರ್ಮಿ ಪ್ರಸನ್ನ...

ಯೋಧ್ಯೆ ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಅಕ್ಟೋಬರ್ 29ರಿಂದ ಪ್ರತಿದಿನ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಘೋಷಿಸಿರುವುದರಿಂದ ಬಹುವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಪ್ರಕರಣ ಶೀಘ್ರ ಅಂತ್ಯಕಾಣುವ ಸಾಧ್ಯತೆಗಳು ಗೋಚರಿಸಿವೆ. ಅಲ್ಲದೆ, ಸಾಮೂಹಿಕ ಪ್ರಾರ್ಥನೆಗೆ ಮಸೀದಿ ಅಗತ್ಯವಿಲ್ಲ ಎಂಬ 1994ರ ತೀರ್ಪಿನ ಪ್ರಕರಣವನ್ನು ಸಂವಿಧಾನಪೀಠಕ್ಕೆ ವರ್ಗಾಯಿಸಲು ನಿರಾಕರಿಸಿರುವುದು ಗಮನಾರ್ಹ. ಈ ಮಹತ್ವದ ಬೆಳವಣಿಗೆಗಳ ಬೆನ್ನಲ್ಲೇ ಅಯೋಧ್ಯೆಯಲ್ಲಿ ಉತ್ಸಾಹದ ವಾತಾವರಣ ನೆಲೆಸಿದೆ.

ಅಯೋಧ್ಯೆಯಲ್ಲೀಗ ಮತ್ತೆ ರಾಮನ ಮಂತ್ರ ಅನುರಣನಗೊಳ್ಳುತ್ತಿದೆ. ಸ್ಥಳೀಯರು ಮಂದಿರ ಶೀಘ್ರದಲ್ಲೇ ನಿರ್ವಣವಾಗುವ ನಿರೀಕ್ಷೆ ಹೊಂದಿದ್ದಾರೆ. ರಾಮಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ ಹೋರಾಟಗಾರರು ಕೂಡ ಉತ್ಸಾಹದಲ್ಲಿದ್ದಾರೆ. ಈ ನಡುವೆ ಸಂತಸಮಾಜ ಮಂದಿರ ನಿರ್ವಣಕ್ಕಾಗಿ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ತಡಮಾಡದೆ ಮಂದಿರ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ಈ ಸಂತಸಮಾಜದ್ದು. ಹಾಗಾಗಿ, ಮುಂಚೆಯೇ ರೂಪಿಸಿರುವ ನೀಲಿನಕ್ಷೆಯಂತೆ ಕೆತ್ತನೆ ಕಾರ್ಯ ಹಾಗೂ ಇತರೆ ಕಾಮಗಾರಿಗಳು ವೇಗ ಪಡೆದಿವೆ. ಕಂಬಗಳ ಕೆತ್ತನೆ ಕಾರ್ಯ ಮುಗಿದುಬಿಟ್ಟರೆ ಮಂದಿರ ನಿರ್ವಣಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂಬುದು ಇವರ ಅನಿಸಿಕೆ.

ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮದ ರೂಪದಲ್ಲಿಯೂ ಅಯೋಧ್ಯೆ ಬೆಳವಣಿಗೆ ಕಾಣುತ್ತಿದ್ದು, ಮಂದಿರ ನಿರ್ಮಾಣ ಸಾಧ್ಯವಾದರೆ ದೇಶ ಮಾತ್ರವಲ್ಲ ವಿಶ್ವದಲ್ಲೇ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡಲಿದೆ ಎಂಬ ವಿಶ್ವಾಸ ಸ್ಥಳೀಯರದ್ದು. ‘1992ರಲ್ಲಿ ವಿವಾದಿತ ಕಟ್ಟಡ ಧ್ವಂಸಗೊಂಡ ಬಳಿಕ ಮಂದಿರ ನಿರ್ವಣವಾಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ಸುಪ್ರೀಂ ಕೋರ್ಟ್ ಅಕ್ಟೋಬರ್ 29ರಿಂದ ಪ್ರಕರಣದ ವಿಚಾರಣೆ ಪ್ರತಿನಿತ್ಯ ನಡೆಸಲು ನಿರ್ಧರಿಸಿರುವುದರಿಂದ ತೀರ್ಪು ಬೇಗನೆ ಬರಬಹುದು’ ಎನ್ನುತ್ತಾರೆ ಸ್ಥಳೀಯರು. ‘ರಾಮಮಂದಿರದ ನಿರ್ವಣವಾಗುತ್ತದೆ ಎಂಬ ಪೂರ್ಣ ವಿಶ್ವಾಸವಿದೆ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಮಗೆ ಸಂಪೂರ್ಣ ನಂಬಿಕೆಯಿದ್ದು, ಸಕಲ ಸಾಕ್ಷ್ಯಾಧಾರಗಳನ್ನು ಅದು ಪರಿಗಣಿಸಲಿದೆ’ ಎನ್ನುತ್ತಾರೆ ಸಂತರು. ಮಾತ್ರವಲ್ಲ, ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ದೃಷ್ಟಿಯಿಂದ ಸಂತಸಮಾಜವನ್ನು ಮತ್ತಷ್ಟು ಒಗ್ಗೂಡಿಸುವ ಕೆಲಸವೂ ನಡೆಯುತ್ತಿದೆ. ಒಟ್ಟಾರೆ, ಈಗ ಅಯೋಧ್ಯೆಯಲ್ಲಿ ಉತ್ಸಾಹದ ವಾತಾವರಣ ಕಂಡುಬರುತ್ತಿದ್ದು, ಅಸಂಖ್ಯ ಜನರ ಚಿತ್ತ ನ್ಯಾಯಾಲಯದ ವಿಚಾರಣೆ ಮತ್ತು ತೀರ್ಪಿನತ್ತ ನೆಟ್ಟಿದೆ.

ರಾಜಕೀಯ ಲೆಕ್ಕಾಚಾರ

2019ರ ಲೋಕಸಭೆ ಚುನಾವಣೆ ಸಮೀಪಿಸಿರುವಂತೆ ಅಯೋಧ್ಯೆ ಪ್ರಕರಣ ಸಂಬಂಧ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 2014ರ ಚುನಾವಣೆಯಲ್ಲಿ 71 ಸ್ಥಾನ ತನ್ನದಾಗಿಸಿಕೊಂಡಿದ್ದ ಬಿಜೆಪಿ, ಭಾರಿ ಗೆಲುವನ್ನು ದಾಖಲಿಸಿತ್ತು. 2019ರ ಚುನಾವಣೆಗೆ ಅಭಿವೃದ್ಧಿ ಮಂತ್ರದೊಂದಿಗೆ ರಾಮಮಂತ್ರವನ್ನು ಜಪಿಸಿ ಹೆಚ್ಚು ಸೀಟುಗಳನ್ನು ತನ್ನದಾಗಿಸಿಕೊಳ್ಳುವ ತಂತ್ರಗಾರಿಕೆ ಬಿಜೆಪಿಯದ್ದು. ಆದರೆ, ಈ ಸಂಬಂಧ ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸುಲಭವೇನಲ್ಲ. ‘ಚುನಾವಣೆ ಬಂದಾಗಲಷ್ಟೇ ಬಿಜೆಪಿಗೆ ಭಗವಾನ್ ರಾಮಚಂದ್ರನ ನೆನಪಾಗುತ್ತದೆ’ ಎಂಬ ಆರೋಪ ಜನಜನಿತವಾಗಿದೆ. ಹೀಗಾಗಿ, ಈ ಅಪವಾದವನ್ನು ಹೋಗಲಾಡಿಸಲು ಬಿಜೆಪಿ ಈಗಾಗಲೇ ಅಯೋಧ್ಯೆಯಲ್ಲಿ ರಾಮನ ಥೀಮ್ ಪಾರ್ಕ್​ನಂಥ ಯೋಜನೆಗಳಿಗೆ ಒತ್ತು ನೀಡಿದೆ. ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿಕೊಂಡಿದ್ದು, ನ್ಯಾಯಾಲಯದ ತೀರ್ಪು ಮಂದಿರನಿರ್ವಣದ ಪರವಾಗಿ ಬಂದರೆ ದೊಡ್ಡ ಪೇಚು ಅನುಭವಿಸಲಿದೆ. ಅದೇನಿದ್ದರೂ, 2019ರ ಚುನಾವಣೆಯನ್ನು ರಾಮ ಮತ್ತು ಅಯೋಧ್ಯೆ ವಿಷಯ ಆವರಿಸಿಕೊಳ್ಳುವುದಂತೂ ಖಚಿತ.

ಉತ್ಖನನದ ಸಾಕ್ಷ್ಯ

ಅಲಾಹಾಬಾದ್ ಹೈಕೋರ್ಟ್ ಆದೇಶದಂತೆ ಪುರಾತತ್ತ್ವ ಇಲಾಖೆ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಉತ್ಖನನ ಕೈಗೊಂಡಿತು. 2003ರ ಮಾರ್ಚ್ 12ರಿಂದ 2003ರ ಆಗಸ್ಟ್ 7ರವರೆಗೆ ನಡೆಸಲಾದ ಈ ಉತ್ಖನನದ ಮೂಲಕ ವಿವಾದಿತ ಸ್ಥಳದಲ್ಲಿ ಮಂದಿರವಿದ್ದ ಸ್ಪಷ್ಟ ಸಾಕ್ಷ್ಯಳು ದೊರೆತವು. ಮಂದಿರದ ಅವಶೇಷಗಳು ಇತಿಹಾಸದ ಮೇಲೆ ಬೆಳಕು ಚೆಲ್ಲಿದವು.

ಇಂದಿನ ಚಿತ್ರಣ

1992ರ ಡಿಸೆಂಬರ್ 6ರಂದು ಬಾಬ್ರಿ ಕಟ್ಟಡ ಧ್ವಂಸಗೊಂಡ ಬಳಿಕ ಆ ಜಾಗದಲ್ಲಿ ಸಾಧುಸಂತರು ಸೇರಿ ರಾಮಲಲ್ಲಾನ ಮೂರ್ತಿ ಇಟ್ಟು ಪೂಜೆ ನೆರವೇರಿಸಿದ್ದರು. ಇಂದಿಗೂ, ಇದೇ ಸಣ್ಣ ಟೆಂಟ್​ನಲ್ಲಿ ಪ್ರತಿನಿತ್ಯ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಭಕ್ತಾದಿಗಳು 100 ಮೀಟರ್ ದೂರದಿಂದಲೇ ದರ್ಶನ ಪಡೆಯಬೇಕಾಗಿದ್ದು, ಇಡೀ ಪರಿಸರವನ್ನು ಭದ್ರತೆಯ ಅಭೇದ್ಯ ಕೋಟೆಯನ್ನಾಗಿಸಲಾಗಿದೆ. ಮೂರು ಬಾರಿ ತಪಾಸಣೆ ನಡೆಸಿದ ಬಳಿಕವೇ ದರ್ಶನಕ್ಕೆ ಅವಕಾಶ. ಭವ್ಯಮಂದಿರದ ನಿರ್ಮಾಣ ಇನ್ನೂ ಸಾಕಾರಗೊಳ್ಳದಿದ್ದರೂ ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಅಪರಿಮಿತ. ಈ ನಡುವೆ ವಿಶ್ವ ಹಿಂದು ಪರಿಷತ್ ಮಂದಿರ ನಿರ್ವಣಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಶಿಲೆಗಳ ಕೆತ್ತನೆ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದೆ.

ಪ್ರವಾಸಿಗರ ಸಂಖ್ಯೆ ಏರಿಕೆ

ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳಕ್ಕೆ ಭೇಟಿ ನೀಡುವ ಭಾರತೀಯರು ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2014-16 ರವರೆಗೆ 50.47 ಲಕ್ಷ ಮಂದಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. 2014ರಲ್ಲಿ 15.80 ಲಕ್ಷ, 2015ರಲ್ಲಿ 16.50 ಲಕ್ಷ ಮತ್ತು 2016ರಲ್ಲಿ 18.09 ಲಕ್ಷ, 2017ರಲ್ಲಿ 17.88 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

ನಿರಂತರ ಸಾಗಿದೆ ಕೆತ್ತನೆ ಕಾರ್ಯ

1990ರಲ್ಲಿ ರಾಮಘಾಟ್​ನಲ್ಲಿ 150 ಶಿಲ್ಪಿಗಳು ಕೆತ್ತನೆ ಕಾರ್ಯದಲ್ಲಿ ತೊಡಗಿದ್ದರು. 1992ರಲ್ಲಿ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣ ಬಳಿಕವೂ ಕೆತ್ತನೆ ಕಾರ್ಯ ಮುಂದುವರಿಯಿತು. ಆದರೆ ರಾಮಮಂದಿರ ನಿರ್ಮಾಣ ಶೀಘ್ರದಲ್ಲಿ ಸಾಧ್ಯವಿಲ್ಲ ಎಂಬ ಚಿತ್ರಣ ಸಿಗುತ್ತಿದ್ದಂತೆ ಕೆತ್ತನೆ ಕಾರ್ಯಗಳ ವೇಗವೂ ಕಡಿಮೆಯಾಯಿತು. ಪ್ರಸಕ್ತ ರಾಮಘಾಟ್​ನ ರಾಮಮಂದಿರ ಕಾರ್ಯಶಾಲೆಯಲ್ಲಿ ಉತ್ತರಪ್ರದೇಶ, ರಾಜಸ್ಥಾನ, ಗುಜರಾತ್​ನ 15 ಶಿಲ್ಪಿಗಳು ದಿನಕ್ಕೆ 12 ಗಂಟೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಮಂದಿರ ನಿರ್ವಣಕ್ಕೆ ಅವಕಾಶ ಸಿಕ್ಕಿದರೆ ಕೇವಲ 48 ಗಂಟೆಗಳ ಅವಧಿಯಲ್ಲಿ ಬುನಾದಿ ನಿರ್ವಿುಸಲು ನೆಲ ಅಗೆಯುವ ಕೆಲಸ ಪೂರ್ಣಗೊಳ್ಳಲಿದೆ. ಮಂದಿರಕ್ಕೆ ಬೇಕಾದ ಶೇಕಡ 85ರಷ್ಟು ಕಲ್ಲಿನ ಕೆತ್ತನೆ ಕಾರ್ಯಗಳು ಪೂರ್ಣಗೊಂಡಿವೆ. ಮಂದಿರದ ಈಗಿನ ನಕ್ಷೆ ಪ್ರಕಾರ ಇಲ್ಲಿ ಒಟ್ಟು 212 ಕಲ್ಲಿನ ಕಂಬಗಳನ್ನು ನಿರ್ಮಾಣ ಮಾಡಲಾಗುತ್ತದೆ. ಎದುರು ಭಾಗದಲ್ಲಿ 16 ಅಡಿ ಎತ್ತರ, 6 ಇಂಚು ಅಗಲದ 106 ಕಂಬಗಳ ಪ್ರತಿಷ್ಠಾಪನೆ, ಎರಡನೇ ಹಂತದಲ್ಲಿ 14 ಅಡಿ ಉದ್ದದ 6 ಇಂಚು ಅಗಲದ 116 ಕಂಬಗಳ ಸ್ಥಾಪನೆ ಮತ್ತು ಪ್ರತ್ಯೇಕ ಕಂಬಗಳಲ್ಲಿ ರಾಮನ ಮೂರ್ತಿ ಕೆತ್ತಲಾಗುತ್ತದೆ. ಕಲ್ಲಿನ ಕಂಬಗಳನ್ನು ರಾಜಸ್ಥಾನದ ‘ದೇವ್​ಪುರಿ ಕಲ್ಲು’ಗಳಿಂದ ತಯಾರು ಮಾಡಲಾಗುತ್ತಿದ್ದು, ದೆಹಲಿಯ ಅಕ್ಷರಧಾಮ ದೇವಾಲಯ ನಿರ್ವಣಕ್ಕೂ ಇದೇ ಕಲ್ಲುಗಳನ್ನು ಬಳಲಾಗಿದೆ.

ಹೀಗಿದೆ ಈಗಿನ ಸ್ಥಿತಿಗತಿ

ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ. ಇದರ ಪ್ರಕಾರ ವಿವಾದಿತ 2.77 ಎಕರೆ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಸದ್ಯದ ಸ್ಥಿತಿಗತಿ ಹೀಗಿದೆ.

 • ಹಿಂದೂ ಮಹಾಸಭಾದವರಿಗೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸಿರುವ ಮಧ್ಯದ ಗರ್ಭಗುಡಿ ಪ್ರದೇಶ.
 • ರಾಮಚಬೂತ್ರ, ಸೀತಾ ಕಿ ರಸೋಯಿ, ಭಾಂದರ್ ಪ್ರದೇಶಗಳು ನಿಮೋಹಿ ಅಖಾಡದ ವಶಕ್ಕೆ.
 • ಉಳಿದಿರುವ ಜಾಗ ಸುನ್ನಿ ವಕ್ಪ್ ಮಂಡಳಿಗೆ.

ಹೋರಾಟದ ಹಾದಿ

ರಾಮ ಜನ್ಮಭೂಮಿಯ ಮುಕ್ತಿಗಾಗಿ ಬಾಬರನ ಕಾಲದಿಂದ ಹಿಡಿದು ಬ್ರಿಟಿಷರ ಕಾಲದವರೆಗೆ 76 ಹೋರಾಟಗಳು ನಡೆದಿವೆ. ಆ ಯುದ್ಧಗಳ ವಿವರ ಇಲ್ಲಿದೆ:

 • ಬಾಬರನ ಆಳ್ವಿಕೆಯ ಕಾಲದಲ್ಲಿ 4
 • ಹುಮಾಯೂನನ ಕಾಲದಲ್ಲಿ 10
 • ಅಕ್ಬರನ ಕಾಲದಲ್ಲಿ 20
 • ಔರಂಗಜೇಬನ ಕಾಲದಲ್ಲಿ 30
 • ನವಾಬ್ ಷಹದತ್ ಅಲಿ ಅವಧಿಯಲ್ಲಿ 5
 • ನಾಸೀರುದ್ದೀನ್ ಹೈದನ್ ಕಾಲದಲ್ಲಿ 3
 • ವಾಜಿದ್ ಅಲಿಯ ಕಾಲದಲ್ಲಿ 2
 • ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ 2.

ರಥಯಾತ್ರೆ

ರಾಮ ಮಂದಿರ ನಿರ್ಮಾಣ ಯೋಜನೆ ಚಳವಳಿ ರೂಪ ಪಡೆದಿದ್ದು 1990ರಲ್ಲಿ. ಎಲ್.ಕೆ.ಆಡ್ವಾಣಿ ನೇತೃತ್ವದಲ್ಲಿ 1990ರ ಸೆ.25ರಿಂದ ಅಕ್ಟೋಬರ್ 30ರತನಕ ಸೋಮನಾಥದಿಂದ ಅಯೋಧ್ಯೆವರೆಗೆ ಬಿಜೆಪಿ 10 ಸಾವಿರ ಕಿ.ಮೀ.ನಷ್ಟು ರಾಮ ರಥಯಾತ್ರೆ ಹಮ್ಮಿಕೊಂಡಿತ್ತು.

ಸ್ಥಳೀಯರು ಏನಂತಾರೆ?

ಅಯೋಧ್ಯೆ ಅಶಾಂತಿಯ, ಕೋಮುಗಲಭೆಯ ತಾಣವಾಗಿ ಅಲ್ಲ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಅದು ದೇಶದ ಮುಂದೆ ಬಿಂಬಿತವಾಗಬೇಕು. ಐತಿಹಾಸಿಕ ನಗರಿಯು ಪ್ರವಾಸಿಗರ ಭೇಟಿ, ಉತ್ತಮ ಕ್ಷಣಗಳಿಗೆ ಸಾಕ್ಷಿಯಾಗಬೇಕು. ಹಾಗಾಗಿ, ಅಯೋಧ್ಯೆಯನ್ನು ‘ವಿವಾದಿತ’ ಎಂದು ಬಿಂಬಿಸದೆ ಪ್ರವಾಸಿ ತಾಣವಾಗಿ ಬಿಂಬಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಮಾತ್ರವಲ್ಲ, ಸಾಕಷ್ಟು ಯುವಕರು ಪ್ರವಾಸಿಗರಿಗೆ ಗೈಡ್ ಆಗಿ ಕಾರ್ಯನಿರ್ವಹಿಸುತ್ತ, ಪ್ರವಾಸೋದ್ಯಮದಿಂದ ಆದಾಯ ಪಡೆದುಕೊಳ್ಳುತ್ತಿದ್ದಾರೆ.

- Advertisement -

Stay connected

278,478FansLike
565FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...