ಎಚ್​ಡಿಡಿ, ಎಚ್​ಡಿಕೆ ಬಯಸಿದ ಕೂಡಲೇ ಕಣ್ಣೀರು ಹಾಕುತ್ತಾರೆ: ಆಯನೂರು ಮಂಜುನಾಥ್

ಶಿವಮೊಗ್ಗ: ಅಪ್ಪ ಮಕ್ಕಳು ಕಣ್ಣೀರು ಹಾಕಿ ಜನರ ಮನಸ್ಸಿನಲ್ಲಿ ಕಾಂಗ್ರೆಸ್​ನವರನ್ನು ಕೆಟ್ಟವರನ್ನಾಗಿ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬಯಸಿದ ಕೂಡಲೇ ಕಣ್ಣೀರು ಹಾಕುವವರು ಎಚ್​ಡಿಡಿ, ಎಚ್​ಡಿಕೆ ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿ, ಕುಮಾರಸ್ವಾಮಿ ತಮ್ಮ ಪಕ್ಷದ ಸಭೆಯಲ್ಲಿ ಕಣ್ಣೀರು ಹಾಕುತ್ತಾರೆ. ಪಾಲುದಾರ ಪಕ್ಷದ ವಿರುದ್ಧ ದೇವೇಗೌಡರು ಮಾತನಾಡುತ್ತಾರೆ. ಸೋದರನ ಖಾತೆಗೆ ಕೋಟಿಗಟ್ಟಲೆ ಹಣ ಮಂಜೂರು ಮಾಡಿದ್ದಾರೆ. ಇದು ನಿಜವಾಗಿಯೂ ಅಣ್ಣ-ತಮ್ಮಂದಿರ ಬಜೆಟ್​ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಠಿಯಾಗಿದೆ, ಆದರೆ ಅದಕ್ಕೆ ಯಾವುದೇ ಯೋಜನೆ ಕೈಗೊಂಡಿಲ್ಲ. ಮೊದಲನೇ ಅಧಿವೇಶನ ಸಂಪೂರ್ಣ ವ್ಯರ್ಥವಾಗಿದೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಕುಮಾರಸ್ವಾಮಿ ತಾವು ಕೊಟ್ಟ ಭರವಸೆ ಯನ್ನು ಈಡೇರಿಸಿಲ್ಲ. ಸ್ರ್ತೀ ಶಕ್ತಿ ಸಂಘ, ನೇಕಾರರು, ಮೀನುಗಾರರು ಹಾಗೂ ರೈತರ ಸಂಪೂರ್ಣ ಸಾಲ ಮನ್ನ ಮಾಡಿಲ್ಲ ಎಂದರು. (ದಿಗ್ವಿಜಯ ನ್ಯೂಸ್​)