ಬೆಂಗಳೂರು: ಗ್ರಾಹಕರು ಹಣ ಉಳಿಸುವ ಸಲುವಾಗಿ ಪ್ರಮಾಣಿತ ವಸ್ತುಗಳನ್ನು ಖರೀದಿಸದೆ ಅಪ್ರಮಾಣಿತ ವಸ್ತುಗಳನ್ನು ಖರೀದಿಸುವ ಮೂಲಕ ಮೋಸಕ್ಕೆ ಒಳಾಗಾಗುತ್ತಾರೆ. ಕೆಲ ಸಂದರ್ಭಗಳಲ್ಲಿ ಜೀವ ಸಹ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗ್ರಾಹಕರು ಜಾಗೃತರಾಗಬೇಕೆಂದು ಗ್ರಾಹಕ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಸಂಸ್ಥೆ ಸಂಸ್ಥಾಪಕ ಟ್ರಸ್ಟಿ ವೈ.ಜಿ.ಮುರಳೀಧರನ್ ಸಲಹೆ ನೀಡಿದ್ದಾರೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಬೆಂಗಳೂರು ಶಾಖೆಯು ಪೀಣ್ಯದ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಠಿಣವಾದ ಗ್ರಾಹಕ ಕಾಯ್ದೆ ಜಾರಿಯಲ್ಲಿದೆ. ಆದರೆ ಗ್ರಾಹಕರು ಅದನ್ನು ಬಳಸಿಕೊಳ್ಳುತ್ತಿಲ್ಲ.ಇದಕ್ಕೆ ಜಾಗೃತಿ ಕೊರತೆ ಹಾಗೂ ಉದಾಸೀನತೆ ಕಾರಣ. ಗ್ರಾಹಕರು ತಮ್ಮಅಧಿಕಾರ ಚಲಾಯಿಸುವ ಮೂಲಕ ಪ್ರಮಾಣಿತವನ್ನು ದೃಢೀಕರಿಸಿಕೊಳ್ಳಬೇಕು. ಬಹುತೇಕ ಜನ ಅಲ್ಪ ಆಸೆಗಾಗಿ ಐಎಸ್‌ಐ ಪ್ರಮಾಣಿತವಲ್ಲದ ಹೆಲ್ಮೆಟ್‌ಗಳನ್ನು ಧರಿಸಿ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಗ್ಯಾಸ್, ಅಡುಗೆ ಉಪಕರಣ, ವಿದ್ಯುತ್ ಉಪಕರಣ, ಮೊಬೈಲ್ ಚಾರ್ಜರ್ ಇತ್ಯಾದಿ ವಸ್ತುಗಳನ್ನು ಖರೀದಿಸುವಾಗ ಐಎಸ್‌ಐ ಮಾರ್ಕ್ ಗಮನಿಸಿ ಖರೀದಿಸಬೇಕು ಎಂದು ಮುರಳೀಧರನ್ ಕಿವಿಮಾತು ಹೇಳಿದರು.
ಗ್ರಾಹಕ ವ್ಯಾಜ್ಯಗಳ ಪರಿಣಿತ ನ್ಯಾಯವಾದಿ ಎಂ.ಆರ್.ಅಭಿಷೇಕ್ ಗ್ರಾಹಕ ಸಂರಕ್ಷಣಾ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಬೆಂಗಳೂರು ವಿಭಾಗದ ನಿರ್ದೇಶಕ ನರೇಂದ್ರ ರೆಡ್ಡಿ, ಮತ್ತಿತರರು ಇದ್ದರು.
ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಅನಿರ್ಧಿಷ್ಟಾವದಿ ಪ್ರತಿಭಟನೆ