More

  ತಂಬಾಕು ಸೇವನೆ ಪರಿಣಾಮ ಕುರಿತು ಜಾಗೃತಿ ಅಗತ್ಯ

  ಶೃಂಗೇರಿ: ತಂಬಾಕು ಸೇವನೆಯಿಂದ ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕೂ ಹೆಚ್ಚು ಜನ, ಹಾಗೂ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ ಎಂದು ಸರ್ಕಾರಿ ಅಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ವಿಷದಿಸಿದರು.
  ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಸರ್ಕಾರಿ ಅಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ತಂಬಾಕು ಸೇವನೆ-ಆರೋಗ್ಯಕ್ಕೆ ಹಾನಿಕಾರ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.
  ಭಾರತದಲ್ಲಿ ಪ್ರತಿ 100 ಕ್ಯಾನ್ಸರ್ ರೋಗಿಗಳಲ್ಲಿ 40 ಜನ ಮರಣ ಹೊಂದುತ್ತಾರೆ. ತಂಬಾಕು ಸೇವನೆಯಿಂದ ಹೃದಯಾಘಾತ, ಶ್ವಾಸಕೋಶ ಕಾಯಿಲೆ, ಕುರುಡುತನ ಮುಂತಾದ ಪ್ರಕರಣಗಳು ಹೆಚ್ಚಾಗುತ್ತಿದೆ. ಯುವ ಜನತೆ ಧೂಮಪಾನ ಮುಂತಾದ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು. ತಂಬಾಕು ಸೇವನೆ ತ್ಯಜಿಸಿದಾಗ ವ್ಯಕ್ತಿಗೆ ಆಹಾರ ರುಚಿಸುತ್ತದೆ ಹಾಗೂ ಆತನ ಆರೋಗ್ಯ ಸುಧಾರಿಸುತ್ತದೆ. ತಂಬಾಕು ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಲು ಸಂಘ, ಸಂಸ್ಥೆಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು.
  ಪಪಂ ನಾಮ ನಿರ್ದೇಶಿತ ಸದಸ್ಯೆ ಸೌಮ್ಯ ವಿಜಯ್ ಕುಮಾರ್ ಮಾತನಾಡಿ, ಇಂದು ಮಹಿಳೆಯರು ಕೂಡಾ ತಂಬಾಕು ವ್ಯಸನಿಗಳಾಗಿದ್ದು , ಗರ್ಭಕೋಶ ಕಾಯಿಲೆ, ಕಡಿಮೆ ತೂಕದ ಶಿಶುವಿನ ಜನನ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಖ ಹಾಗೂ ಕೂದಲ ಕಾಂತಿ ಕಳೆದುಕೊಳ್ಳಲು ಪೂರಕವಾಗಿರುವ ತಂಬಾಕು ಸೇವನೆಯಿಂದ ಎಲ್ಲರೂ ದೂರವಿರಬೇಕು ಎಂದು ತಿಳಿಸಿದರು.
  ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಅಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ರಾಘವೇಂದ್ರ ಐತಾಳ್,ಸಿಬ್ಬಂದಿ ನಿಂಗೇಶ್.ಆರ್.ಲೋಕೇಶ್,ನಾಗವೇಣಿ, ನಾಗಾಭರಣ್ ಇದ್ದರು.

  See also  Web Exclusive | ಇಳಿವಯಸ್ಸಿನವರಲ್ಲೀಗ ನವೋಲ್ಲಾಸ: ಮತ್ತೆ ಹರಟಲು ಹೊರಟ ಹಿರಿಯರು, ಕರೊನಾ ಆತಂಕದ ಕಂಡೀಷನ್ ಮುಕ್ತರು..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts