ಶ್ರೀರಂಗಪಟ್ಟಣ: ಶ್ರೀರಾಮು ಬ್ರಿಗೇಡ್ ವತಿಯಿಂದ ಭಾನುವಾರ ಸಂಜೆ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಜೆ.ಪಿ.ನಗರದ ಚಂದ್ರಮತಿ ಪ್ರಕಾಶ್ ಅವರ ಹಸು 2 ಹೊತ್ತಿಗೆ 49.810 ಕೆ.ಜಿ. ಹಾಲು ಕರೆದು ಪ್ರಥಮ ಸ್ಥಾನ ಗಳಿಸಿ 1 ಲಕ್ಷ ರೂ. ನಗದು ಮತ್ತು ಟ್ರೋಫಿಯನ್ನು ಪಡೆಯಿತು. ಮಾಲೀಕರಿಗೆ ಉತ್ತಮ ಆದಾಯ ತಂದುಕೊಡುವ ಹಸು ಈಗ ರಾಜ್ಯದ ಗಮನಸೆಳೆದಿದೆ.
ಬೆಂಗಳೂರು ಪಾದರಾಯನಪಾಳ್ಯದ ಪೈ.ಸುರೇಶ್ ಅವರ ಹಸು 44.400 ಕೆ.ಜಿ. ಹಾಲು ಕರೆದು ದ್ವಿತೀಯ (75 ಸಾವಿರ ರೂ.) ಬಹುಮಾನ ಗಳಿಸಿದರೆ, ಬೆಂಗಳೂರಿನ ಗೀತಾ ಯತೀಶ್ ಅವರ ಹಸು 36.200 ಕೆ.ಜಿ. ಹಾಲು ಕರೆದು ತೃತೀಯ(50,000 ರೂ.) ಹಾಗೂ ಮೈಸೂರಿನ ಲೋಕೇಶ್ ಅವರ ಹಸು 35.270 ಕೆ.ಜಿ. ಹಾಲು ಕರೆದು 4ನೇ(25,000 ರೂ.) ಬಹುಮಾನ ಗಳಿಸಿತು.