More

  ಶೋಷಿತ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿದ ವಿಜಯಾ ದಬ್ಬೆ

  ಮೈಸೂರು: ಸಮಾಜದಲ್ಲಿ ಶೋಷಿತ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಸಾಹಿತಿ ವಿಜಯಾ ದಬ್ಬೆ ಯಶಸ್ವಿಯಾಗಿ ನಿರ್ವಹಿಸಿದ್ದರು ಎಂದು ಲೇಖಕಿ ಡಾ.ಟಿ.ಎನ್. ನಾಗರತ್ನ ಹೇಳಿದರು.

  ಸಮತಾ ಅಧ್ಯಯನ ಕೇಂದ್ರದ ವತಿಯಿಂದ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಗುರುವಾರ ಹಮ್ಮಿಕೊ ಂಡಿದ್ದ ಡಾ.ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಕಾವ್ಯ ಮತ್ತು ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

  ವಿಜಯಾದಬ್ಬೆ ಅವರು ಎಂದೂ ನಾನು ನನ್ನದು ಎಂದು ಹೇಳಿದವರಲ್ಲ. ಅವರು ಸ್ತ್ರಿವಾದಿಯಾದರೂ ಹೆಣ್ಣು ಮಕ್ಕಳ ಹಕ್ಕುಗಳ ಜತೆಗೆ ಕರ್ತವ್ಯವನ್ನು ಸಹ ತಿಳಿಸಿಕೊಡುತ್ತಿದ್ದರು. ಹಾಗಾಗಿ ವಿಜಯಾದಬ್ಬೆ ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅವರು ಜಾತಿ, ಧರ್ಮವನ್ನು ಮೀರಿದ ವ್ಯಕ್ತಿ. ಜಾತ್ಯತೀತ ನಿಲುವು ಹೊಂದಿದ್ದರು ಹಾಗೂ ಅದೇ ರೀತಿಯ ಬದುಕನ್ನು ನಡೆಸಿದರು. ಅಲ್ಲದೆ, ಮತ್ತೊಬ್ಬರಿಗೆ ಜಾತ್ಯತೀತವಾಗಿ ಬದುಕು ಸಾಗಿಸುವಂತೆ ಪ್ರೇರೇಪಿಸುತ್ತಿದ್ದರು ಎಂದರು.

  ಸಮತಾ ಅಧ್ಯಯನ ಕೇಂದ್ರದ ಮಾಜಿ ಅಧ್ಯಕ್ಷೆ ಎಂ.ಎನ್. ಸುಮನಾ ಮಾತನಾಡಿ, ಸಮತಾ ವೇದಿಕೆಯ ಮೂಲಕ ವಿಜಯಾ ದಬ್ಬೆ ಲಿಂಗ ಸಮಾನತೆಗಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದರು. ವಿಜಯಾದಬ್ಬೆ ಸಾಕಷ್ಟು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವರು ಅತ್ಯುತ್ತಮ ಸಾಹಿತಿ ಮಾತ್ರವಲ್ಲ ಅತ್ಯುತ್ತಮ ಚಳವಳಿಗಾರರು ಹಾಗೂ ಚಿಂತಕರಾಗಿದ್ದರು ಎಂದು ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts