ಅನಂತಪುರ: ಯುವ ಬ್ಯಾಟರ್ ಅಭಿಷೇಕ್ ಪೊರೆಲ್ (82 ರನ್, 113 ಎಸೆತ, 9 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ಸಿ ತಂಡ ಆರ್‌ಡಿಟಿಎಸ್ ಎ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ಭಾರತ ಎ ಎದುರು ಇನಿಂಗ್ಸ್ ಮುನ್ನಡೆಗಾಗಿ ಹೋರಾಟ ನಡೆಸಿದೆ. 7 ವಿಕೆಟ್‌ಗೆ 224 ರನ್‌ಗಳಿಂದ ಎರಡನೇ ದಿನದ ಆಟ ಆರಂಭಿಸಿದ ಮಯಾಂಕ್ ಅಗರ್ವಾಲ್ ನೇತೃತ್ವದ ಭಾರತ ಎ ತಂಡ, ಬಾಲಗೋಂಚಿ ಆವೇಶ್ ಖಾನ್ (51*) ಅರ್ಧಶತಕದ ನಡುವೆ 90.5 ಓವರ್‌ಗಳಲ್ಲಿ 297 ರನ್‌ಗಳಿಗೆ ಆಲೌಟ್ ಆಯಿತು. ಕನ್ನಡಿಗ ವೇಗಿ ವೈಶಾಖ್ ವಿಜಯ್ ಕುಮಾರ್ 4 ವಿಕೆಟ್ ಪಡೆದು ಗಮನ ಸೆಳೆದರು.
ಪ್ರತಿಯಾಗಿ ಭಾರತ ಸಿ ತಂಡ ದಿನದಂತ್ಯಕ್ಕೆ 64 ಓವರ್‌ಗಳಲ್ಲಿ 7 ವಿಕೆಟ್‌ಗೆ 216 ರನ್‌ಗಳಿಸಿದ್ದು, ಇನ್ನೂ 81 ರನ್ ಹಿನ್ನಡೆಯಲ್ಲಿದೆ. ಭಾರತ ಸಿ ತಂಡ ಪರ ನಾಯಕ ಋತುರಾಜ್ ಗಾಯಕ್ವಾಡ್ (17), ಸಾಯಿ ಸುದರ್ಶನ್ (17), ರಜತ್ ಪಾಟೀದಾರ್ (0), ಇಶಾನ್ ಕಿಶನ್ (5) ಬ್ಯಾಟಿಂಗ್ ವೈಲ್ಯ ಅನುಭವಿಸಿದರು. ಜತೆಗೆ ಬಾಬಾ ಇಂದ್ರಜಿತ್ (34) ಗಾಯಗೊಂಡು ನಿವೃತ್ತಿಯೊಂದಿಗೆ ದೊಡ್ಡ ಆಘಾತ ಎದುರಿಸಿತು. ಆಗ ಕೆಳ ಕ್ರಮಾಂಕ ಬ್ಯಾಟರ್‌ಗಳಾದ ಪುಲ್ಕೀತ್ ನಾರಂಗ್ (35*) ಹಾಗೂ ವೈಶಾಕ್ ವಿಜಯ್ ಕುಮಾರ್ (14*) ಜೋಡಿ ದಿಟ್ಟ ಜತೆಯಾಟದ ನೆರವಿನಿಂದ ದಿನದಂತ್ಯಕ್ಕೆ 64 ಓವರ್‌ಗಳಲ್ಲಿ 7 ವಿಕೆಟ್‌ಗೆ 216 ರನ್‌ಗಳಿಸಿದ್ದು, ಇನ್ನು 81 ರನ್ ಹಿನ್ನಡೆಯಲ್ಲಿದೆ.
ಒಂದು ವೇಳೆ ಭಾರತ ಸಿ ಇನಿಂಗ್ಸ್ ಮುನ್ನಡೆ ಸಾಧಿಸಿ ಭಾರತ ಬಿ ತಂಡ ಡಿ ಎದುರು ಡ್ರಾ ಅಥವಾ ಸೋಲುಂಡರೆ, ಆಗ ಸಿ ತಂಡ ದುಲೀಪ್ ಟ್ರೋಫಿ ಚಾಂಪಿಯನ್ ಎನಿಸುವ ಉತ್ತಮ ಅವಕಾಶ ಹೊಂದಿದೆ.
ಭಾರತ ಎ: 90.5 ಓವರ್‌ಗಳಲ್ಲಿ 297 ( ಆವೇಶ್ 51*, ಪ್ರಸಿದ್ಧ 34, ವೈಶಾಕ್ 51ಕ್ಕೆ 4, ಅಂಶುಲ್ 49ಕ್ಕೆ 3). ಭಾರತ ಸಿ: 64 ಓವರ್‌ಗಳಲ್ಲಿ 7 ವಿಕೆಟ್‌ಗೆ 216 (ಋತುರಾಜ್ 17, ಸುದರ್ಶನ್ 17, ಇಶಾನ್ ಕಿಶನ್ 5, ಬಿ.ಇಂದ್ರಜಿತ್ 34, ಅಭಿಷೇಕ್ 82, ಮಾನವ್ 2, ಪುಲ್ಕೀತ್ 35*, ವೈಶಾಕ್ 14*, ಅಕೀಬ್ ಖಾನ್ 43ಕ್ಕೆ 3).