More

    ನಾರಾಯಣನಿಗೆ ಸುಣ್ಣ ತಾನಾಜಿಗೆ ಬೆಣ್ಣೆ!: ಬೆಂಗಳೂರಲ್ಲಿ ತಾನಾಜಿ; ದಿ ಅನ್​ಸಂಗ್​ವಾರಿಯರ್ ಅಬ್ಬರ

    ಬೆಂಗಳೂರು: ಸಚಿನ್ ನಿರ್ದೇಶನದ ರಕ್ಷಿತ್ ಶೆಟ್ಟಿ ನಾಯಕತ್ವದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆ ಆದಲ್ಲೆಲ್ಲ ಸದ್ದು ಮಾಡುತ್ತಿದೆ. ಆಂಧ್ರ, ತಮಿಳುನಾಡು, ಕೇರಳದಲ್ಲಿಯೂ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ. ಈ ಎಲ್ಲ ಖುಷಿಯ ನಡುವೆ ಇತ್ತೀಚೆಗಷ್ಟೇ ಬೇಸರ ಎನಿಸುವ ಸುದ್ದಿಯೂ ಚಿತ್ರತಂಡದ ಕಿವಿಗಪ್ಪಳಿಸಿತ್ತು. ಮಹಾರಾಷ್ಟ್ರ ಕರ್ನಾಟಕ ಗಡಿಭಾಗದಲ್ಲಿ ‘ಶ್ರೀಮನ್ನಾರಾಯಣ’ ಸಿನಿಮಾ ಪ್ರದರ್ಶನಕ್ಕೆ ಶಿವಸೇನಾ ಬೆಂಬಲಿಗರು ಅಡ್ಡಿಪಡಿಸಿದ್ದರು. ಅಷ್ಟೇ ಅಲ್ಲ ಪೋಸ್ಟರ್ ಕಿತ್ತು, ದರ್ಪ ಮೆರೆದಿದ್ದರು. ಕೊನೆಗೆ ಆ ಚಿತ್ರಮಂದಿರದಿಂದ ಚಿತ್ರವನ್ನೇ ಎತ್ತಂಗಡಿ ಮಾಡಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅಜಯ್ ದೇವಗನ್ ಮುಖ್ಯಭೂಮಿಕೆಯ ‘ತಾನಾಜಿ; ದಿ ಅನ್​ಸಂಗ್ ವಾರಿಯರ್’ ಸಿನಿಮಾ ಬೆಂಗಳೂರಿನಲ್ಲಿ 220ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಬಿಡುಗಡೆ ಆಗುತ್ತಿರುವುದು ಕಣ್ಣು ಕೆಂಪಗಾಗಿಸಿದೆ.

    ಸದ್ಯ ಹಲವು ಕನ್ನಡ ಪರ ಸಂಘಟನೆಗಳು ‘ತಾನಾಜಿ’ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿವೆ. ಮರಾಠಾ ಸೇನೆಯ ಸೇನಾಧಿಪತಿ ತಾನಾಜಿ ಮಲುಸಾರೆ ಕಥೆಯನ್ನೇ ನಿರ್ದೇಶಕ ಓಂ ರೌತ್ ‘ತಾನಾಜಿ; ದಿ ಅನ್​ಸಂಗ್ ವಾರಿಯರ್’ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ದಾರೆ. ಜ. 10ಕ್ಕೆ ಈ ಸಿನಿಮಾ ಎಲ್ಲೆಡೆ ಬಿಡುಗಡೆ ಆಗುತ್ತಿದೆ. ಬೆಂಗಳೂರು ಒಂದರಲ್ಲಿಯೇ 220ಕ್ಕೂ ಅಧಿಕ ಸ್ಕ್ರೀನ್ ಮೇಲೆ ‘ತಾನಾಜಿ..’ ಚಿತ್ರ ಬಿಡುಗಡೆ ಆಗುತ್ತಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದ ಕಾಗವಾಡದಲ್ಲಿ ‘ಶ್ರೀಮನ್ನಾರಾಯಣ..’ ಸಿನಿಮಾ ಬಿಡುಗಡೆಗೆ ತಡೆಯೊಡ್ಡಿದ್ದರಿಂದ, ಕರ್ನಾಟಕದಲ್ಲೂ ಮರಾಠಿ ಇತಿಹಾಸವುಳ್ಳ ಸಿನಿಮಾ ಬೇಡ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಅಂದಹಾಗೆ, ಜನವರಿ 16ಕ್ಕೆ ಹಿಂದಿ ಡಬ್ ಅವತರಣಿಕೆ ‘ಅಡ್ವೆಂಚರಸ್ ಆಫ್ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆ ಆಗಲಿದೆ.

    ಶಿವಸೇನೆಯವರು ಚಿತ್ರಮಂದಿರಕ್ಕೆ ಆಗಮಿಸಿ ಯಾವಾಗ ಗಲಾಟೆ ಶುರುಮಾಡಿದರೋ, ಗಡಿಭಾಗದಲ್ಲಿ ಶ್ರೀಮನ್ನಾರಾಯಣ ಸಿನಿಮಾ ಪ್ರದರ್ಶನವೇ ರದ್ದಾಯ್ತು. ಆದರೆ, ಕರ್ನಾಟಕದಲ್ಲಿ ಮಾತ್ರ ‘ತಾನಾಜಿ’ ಸಿನಿಮಾ 220ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ರಾಜಾರೋಷವಾಗಿ ಬಿಡುಗಡೆ ಆಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

    | ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts