ಬೈಕ್ ಚಾಲಕನನ್ನು ಪೊಲೀಸರಿಗೊಪ್ಪಿಸಿದ ಆಟೋ ಚಾಲಕರು

ಚಿಕ್ಕಮಗಳೂರು: ಅನಧಿಕೃತವಾಗಿ ವೈಟ್ ಬೋರ್ಡ್ ರ‍್ಯಾಪಿಡೋ ಬೈಕ್‌ನಲ್ಲಿ ಪ್ರಯಾಣಿಕರನ್ನು ಬಾಡಿಗೆ ರೂಪದಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ನಗರದ ಆಟೋ ಚಾಲಕರುಗಳು ಹಿಡಿದು ನಗರಠಾಣೆಗೆ ಒಪ್ಪಿಸಿದರು. ಬಳಿಕ ಈ ರೀತಿ ಅಕ್ರಮವಾಗಿ ಪ್ರಯಾಣಿಕರನ್ನು ಕರೆದೊಯ್ಯುವ ರ‍್ಯಾಪಿಡೋ ಚಾಲಕರ ಮೇಲೆ ಕ್ರಮ ಜರುಗಿಸಬೇಕು ಎಂದು ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಮುಂಜಾನೆ ಸಮಯದಲ್ಲಿ ರ‍್ಯಾಪಿಡೋ ಬೈಕ್ ಚಾಲಕ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ವೇಳೆ ಸೂಕ್ಷö್ಮವಾಗಿ ಗಮನಿಸಿದ ಆಟೋಚಾಲಕರು ಆ ವ್ಯಕ್ತಿಯನ್ನು ಹಿಡಿದು ಠಾಣೆಗೆ ಒಪ್ಪಿಸಿದರು. ಬಳಿಕ ಆರ್‌ಟಿಓ ಅಧಿಕಾರಿಗಳು ಆಗಮಿಸುವವರೆಗೂ ತೆರಳುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದರಿಂದಾಗಿ ಪೊಲೀಸ್ ಠಾಣೆ ಎದುರು ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ನಗರ ಆಟೋ ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ಪ್ರತಿನಿತ್ಯವು ಅನಧಿಕೃತವಾಗಿ ರ‍್ಯಾಪಿಡೋ ಬೈಕ್ ಚಾಲಕರು, ಪ್ರವಾಸಿಗರು ಹಾಗೂ ಪ್ರಯಾಣಿಕರನ್ನು ಪಿಕಪ್ ಮಾಡುವುದು ಹೆಚ್ಚಾಗುತ್ತಿದೆ. ಇದರಿಂದ ಬಡಆಟೋ ಚಾಲಕರು ಹಾಗೂ ಮಾಲೀಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಅನಧಿಕೃತವಾಗಿ ಎರಡು ಮೂರು ಫುಡ್ ಡೆಲಿವರಿ ಕಂಪನಿಗಳು ಎಲ್ಲೆಂದರಲ್ಲಿ ಹಾಗೂ ಗೋಡೆಗಳ ಮೇಲೆ ಸ್ಟಿಕ್ಕರ್ ಅಂಟಿಸಿ ಫುಡ್ ಡೆಲಿವರಿ ಮಾಡುತ್ತೇವೆಂದು ಪ್ರಚಾರಪಡಿಸುತ್ತಿದೆ. ಆದರೆ ಫುಡ್ ಡೆಲಿವರಿ ಜೊತೆಗೆ ಪ್ರಯಾಣಿಕರನ್ನು ಇಂತಿಷ್ಟು ಹಣವೆಂದು ನಿಗಧಿಗೊಳಿಸಿ ರ‍್ಯಾಪಿಡೋ ಬೈಕಿನಲ್ಲಿ ಪಿಕಪ್ ಮಾಡಲಾಗುತ್ತಿದೆ ಎಂದು ದೂರಿದರು.
ಈ ಬಗ್ಗೆ ಅನೇಕ ಬಾರಿ ಆರ್‌ಟಿಓ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ಕ್ರಮಕೈ ಗೊಳ್ಳುತ್ತಿಲ್ಲ. ಈಗಾಗಲೇ ನಗರದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಆಟೋಗಳಿವೆ. ಅಲ್ಲದೇ ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರಿಗೆ ಬಹಳಷ್ಟು ಹೊಡೆತ ಬಿದ್ದಿದೆ. ಈ ನಡುವೆ ರ‍್ಯಾಪಿಡೋ ಬೈಕ್‌ಗಳ ಹಾವಳಿ ಹೆಚ್ಚಳದಿಂದ ಚಾಲಕರ ಬಾಡಿಗೆ ಹಾಗೂ ತಿನ್ನುವ ಅನ್ನಕ್ಕೂ ಕಲ್ಲು ಬೀಳುತ್ತಿದೆ ಎಂದು ದೂರಿದರು.
ಬಡ ಹಾಗೂ ಮಧ್ಯಮ ವರ್ಗದವರೇ ಹೆಚ್ಚಿರುವ ಆಟೋಚಾಲಕರು ದಿನನಿತ್ಯ ಬಾಡಿಗೆಗೆ ಬಹಳಷ್ಟು ಕಷ್ಟಪಡಬೇಕಿದೆ. ಒಂದೊAದು ದಿನವು ಬಾಡಿಗೆಯಿಲ್ಲದೇ ಪರಿತಪಿಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸ, ಜೀವನ ಸುಧಾರಣೆ, ಆಟೋ ಇಎಂಐ ನಡುವೆ ರ‍್ಯಾಪಿಡೋ ಬೈಕ್ ಹಾವಳಿ ಹೆಚ್ಚಳಗೊಂಡು ಆಟೋ ಚಾಲಕರು ಮತ್ತು ಮಾಲೀಕರಿಗೆ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಧಾವಿಸಿದ ಎಎಸ್‌ಪಿ ಕೃಷ್ಣಮೂರ್ತಿ ಅವರಿಗೆ ಸಜಿಲ್ಲಾ ಹಾಗೂ ನಗರ ಆಟೋ ಸಂಘದಿAದ ಮನವಿ ಸಲ್ಲಿಸಿ ಕೂಡಲೇ ರ‍್ಯಾಪಿಡೋ ಬೈಕಿನಲ್ಲಿ ಬಾಡಿಗೆ ಹೋಗುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಯಿಸಿದ ಎಎಸ್‌ಪಿ ಕೃಷ್ಣಮೂರ್ತಿ ಆಟೋ ಚಾಲಕರ ಸಂಕಷ್ಟಗಳಿಗೆ ಇಲಾಖೆ ಸ್ಪಂದಿಸಲಿದೆ. ಈ ರೀತಿಯ ಅನಧಿಕೃತವಾಗಿ ಬಾಡಿಗೆ ಹೋಗುವವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದ ಬಳಿಕ ಆಟೋ ಚಾಲಕರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಆಟೋ ಸಂಘದ ಅಧ್ಯಕ್ಷ ಉದಯ್ ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಚಾಲಕರಾದ ಅಶ್ವತ್, ವೆಂಕಟೇಶ್, ಅಬ್ಬಾಸ್, ಮಂಜುನಾಥ್, ರಿಯಾಜ್ ಮತ್ತಿತರರಿದ್ದರು.

Share This Article

ನಿಮ್ಮ ಅಂಗೈನಲ್ಲಿ H ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Success Secrets: ನಿಮ್ಮ ಜೀವನದಲ್ಲಿ ಈ 4 ಸ್ಥಳಗಳಲ್ಲಿ ಎಂದಿಗೂ ಹಿಂಜರಿಯಬೇಡಿ! ಈ ಕೆಲಸ ಮಾಡಿದ್ರೆ ಸಕ್ಸಸ್‌ ಗ್ಯಾರೆಂಟಿ

ಬೆಂಗಳೂರು: ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ…

Salt Benefits | ಒಂದು ತಿಂಗಳು ಉಪ್ಪು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ರೆ ತೂಕ ನಷ್ಟ ಪಕ್ಕಾ! ಅಪಾಯವೂ ಖಂಡಿತ

ಬೆಂಗಳೂರು:  ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಗಮನ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ