ಆಟೋ ಚಾಲಕನಿಂದ ಹಣ ದೋಚಲು ಯತ್ನಿಸಿದ ಐವರು ದುಷ್ಕರ್ಮಿಗಳು

ಬೆಂಗಳೂರು: ಆಟೋ ಚಾಲಕನ ಬಳಿ ಇದ್ದ ಹಣವನ್ನು ದುಷ್ಕರ್ಮಿಗಳು ದೋಚಲು ಯತ್ನಿಸಿದ ಘಟನೆ ಬನ್ನೇರುಘಟ್ಟ ಸಮೀಪ ಬಿಂಗೀಪುರದ ಬಳಿ ನಡೆದಿದೆ.

ಮೂವರು ಕಿಡಿಗೇಡಿಗಳು ಆಟೋ ಬಾಡಿಗೆ ಮಾಡಿಸಿಕೊಂಡು ಬಂದಿದ್ದರು. ಬಿಂಗೀಪುರದ ನೀಲಗಿರಿ ತೋಪಿನ ಬಳಿ ಇನ್ನೂ ಇಬ್ಬರು ಸೇರಿಕೊಂಡು ಆ ಚಾಲಕನ ಬಳಿಯಿದ್ದ ಹಣ ದೋಚಲು ಯತ್ನಿಸಿದ್ದಾರೆ. ಕಂಗಾಲಾದ ಚಾಲಕ ಆಟೋವನ್ನು ಅಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.