ಮಾಗಡಿ: ಆಟೋ, ಬೈಕ್ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೊಂಗಸಂದ್ರ ಬೇಗೂರಿನ ಚೇತನ್ ಗೌಡ (24), ತಿಪ್ಪಸಂದ್ರ ಹೋಬಳಿಯ ಮಾಚೋಹಳ್ಳಿ ಕಾಲನಿ ನಿವಾಸಿ ವೆಂಕಟೇಶ್ (28) ಬಂಧಿತರು. ಮತ್ತೋರ್ವ ಸಹಚರ ಬಿ.ಕೆ.ಭವನ್ ತಲೆಮರೆಸಿಕೊಂಡಿದ್ದಾನೆ.
ಬೆಂಗಳೂರಿನ ಕಾಮಾಕ್ಷಿ ಪಾಳ್ಯ, ಬೊಮ್ಮನಹಳ್ಳಿ, ಮಂಡ್ಯ ಈಸ್ಟ್ ಪೊಲೀಸ್ ಠಾಣೆಯಲ್ಲಿ ಕಳವು ಮಾಡಿದ್ದ 1 ಆಟೋ, 4 ದ್ವಿಚಕ್ರ ವಾಹನ, 1 ಕಲರ್ ಪ್ರಿಂಟರ್, 1 ಟ್ಯಾಬ್, 2 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು, 4 ಕಳವು ಪ್ರಕರಣಗಳು ಪತ್ತೆಯಾಗಿವೆ.
ವೆಂಕಟೇಶ್ 2017ರಲ್ಲಿ ಕುಣಿಗಲ್ ಠಾಣೆಯಲ್ಲಿ ಬೈಕ್ ಕಳ್ಳತನ ಹಾಗೂ ಭವನ್ ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿ ಹಾಗೂ ಶ್ರೀರಂಗಪಟ್ಟಣ ಠಾಣೆಯಲ್ಲಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದಿದೆ.
ಪಿಐ ಜಿ.ವೈ.ಗಿರಿರಾಜು, ಪಿಎಸ್ಐ ಬಸವರಾಜು, ದೇವರಾಜು, ಸಿಬ್ಬಂದಿಗಳಾದ ಬೀರಪ್ಪ,ಮುತ್ತರಾಜು, ವೀರಭದ್ರಪ್ಪ, ಪ್ರಮೋದ, ಮುನೀಂದ್ರ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ