ರಾಮನಗರ: ಮಾಗಡಿ ತಾಲೂಕಿನ ನಾರಾಯಣಿಪಾಳ್ಯ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಲಗೇಜ್ ಆಟೋ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ದರ್ಮರಣಕ್ಕಿಡಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರು ಗ್ರಾಮದ ರತ್ನಮ್ಮ(53), ಲಕ್ಕಮ್ಮ(40) ಮತ್ತು ಮಂಜುನಾಥ್(32) ಮೃತ ದುರ್ದೈವಿಗಳು. ತರಕಾರಿ ತರಲೆಂದು 6 ಮಂದಿ ಲಗೇಜ್ ಆಟೋದಲ್ಲಿ ಭಾನುವಾರ ರಾತ್ರಿ ಬೆಳ್ಳೂರು ಕ್ರಾಸ್ನಿಂದ ನೆಲಮಂಗಲಕ್ಕೆ ಹೋಗುವಾಗ ಮಾರ್ಗಮಧ್ಯೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಪಲ್ಟಿಯಾಗಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ರಂಗಣ್ಣ, ದರ್ಶನ್ ಹಾಗೂ ಚಾಲಕ ಸತೀಶ್ ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ.
ಮೂವರ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ಭೀಕರತೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ಕಮಿಷನರ್ ಮತ್ತು ಪತ್ನಿ ವಿರುದ್ಧ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ದೂರು, ಎಫ್ಐಆರ್ ದಾಖಲು