ಸೆರೇನಾ ಮುನ್ನಡೆ, ಹಲೆಪ್ ಬಚಾವ್

ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಫೇವರಿಟ್ ತಾರೆಯರ ಗೆಲುವಿನ ಓಟ ಮುಂದುವರಿದಿದೆ. 23 ಗ್ರಾಂಡ್ ಸ್ಲಾಂ ವಿಜೇತೆ ಸೆರೇನಾ, ವೀನಸ್ ವಿಲಿಯಮ್್ಸ ಸಹೋದರಿಯರ ಜತೆಗೆ ವಿಶ್ವ ನಂ.1 ಸಿಮೊನಾ ಹಲೆಪ್, ಯುಎಸ್ ಓಪನ್ ಹಾಲಿ ಚಾಂಪಿಯನ್ ನವೊಮಿ ಒಸಾಕ, ಅಮೆರಿಕದ ಮ್ಯಾಡಿಸನ್ ಕೀಯ್್ಸ ಜೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೊವಾ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಪುರುಷರ ಸಿಂಗಲ್ಸ್​ನಲ್ಲಿ ಸೆರ್ಬಿಯಾ ಸ್ಟಾರ್ ನೊವಾಕ್ ಜೋಕೊವಿಕ್, ಜರ್ಮನಿ ಸೆನ್ಶೇಶನ್ ಅಲೆಕ್ಸಾಂಡರ್ ಜ್ವೆರೆವ್ ಜಪಾನ್​ನ ಕೀ ನಿಶಿಕೋರಿ, ಇಟಲಿ ಅನುಭವಿ ಫ್ಯಾಬಿಯೊ ಫೊಗ್ನಿನಿ ಮುನ್ನಡೆದರು. ಆದರೆ ಮಾಜಿ ಚಾಂಪಿಯನ್ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಆಘಾತ ಕಂಡರೆ, ಹಾಲಿ ಫ್ರೆಂಚ್ ಓಪನ್ ರನ್ನರ್ ಅಪ್ ಡೊಮಿನಿಕ್ ಥೀಮ್ ವೈಲ್ಡ್ ಕಾರ್ಡ್ ಎಂಟ್ರಿ ಆಟಗಾರನ ಎದುರು ಗಾಯದ ಹಿನ್ನಡೆಯಿಂದ ಶಾಕ್ ಎದುರಿಸಿದ್ದಾರೆ.

ಗೆದ್ದ ಸೆರೇನಾ, ಹಲೆಪ್ ಬಚಾವ್: ಮಾರ್ಗರೇಟ್ ಕೋರ್ಟ್ ಅವರ 24 ಗ್ರಾಂಡ್ ಸ್ಲಾಂ ದಾಖಲೆಯನ್ನು ಈ ಬಾರಿ ಸರಿಗಟ್ಟುವ ಹಠದಲ್ಲಿರುವ ಸೆರೇನಾ 2ನೇ ಸುತ್ತಿನ ಪಂದ್ಯವನ್ನು ಕೇವಲ 1 ಗಂಟೆಯಲ್ಲಿ ಪ್ರಯಾಸವಿಲ್ಲದೆ ಗೆದ್ದರು. ಸೆರೇನಾ 6-2, 6-2ರಿಂದ ಕೆನಡ ತಾರೆ ಎಗುನಿ ಬೌಚಾರ್ಡ್​ರನ್ನು ಬೆಂಡೆತ್ತಿದರು. ವೀನಸ್ ವಿಲಿಯಮ್್ಸ ಹಾಗೂ ಹಲೆಪ್ ಸೋಲಿನಂಚಿನಿಂದ ಪಾರಾಗುವ ಮೂಲಕ 3ನೇ ಸುತ್ತಿಗೇರಿದರು. ವೀನಸ್ 6-3, 4-6, 6-0ಯಿಂದ ವಿಶ್ವ ನಂ.47 ಫ್ರಾನ್ಸ್ ಆಟಗಾರ್ತಿ ಅಲೈಜ್ ಕಾರ್ನೆಟ್​ರನ್ನು ಸೋಲಿಸಿದರೆ, ಹಲೆಪ್ ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತಿ ಸೋಫಿಯಾ ಕೆನಿನ್​ರನ್ನು 6-3, 6-7, 6-4ರಿಂದ ಮಣಿಸಿ ಪ್ರಯಾಸಕರವಾಗಿ ಮುನ್ನಡೆದರು. ವೀನಸ್-ಹಲೆಪ್ ಮುಂದಿನ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ. ಕಳೆದ ಬಾರಿ ಯುಎಸ್ ಓಪನ್ ಫೈನಲ್​ನಲ್ಲಿ ಸೆರೇನಾಗೆ ಆಘಾತ ನೀಡಿದ ನವೊಮಿ ಒಸಾಕ 6-2, 6-4ರಿಂದ ಸ್ಲೊವೇನಿಯಾದ ತಮರ ಜಿದನ್ಸೆಕ್​ರನ್ನು ಸೋಲಿಸಿದರು. -ಪಿಟಿಐ/ಏಜೆನ್ಸೀಸ್

ವಾವ್ರಿಂಕಾ, ಥೀಮ್ ನಿರ್ಗಮನ

ಕಳೆದ 3 ವರ್ಷಗಳಿಂದ ಲಯ ಕಾಣಲು ಪದರಾಡುತ್ತಿರುವ ವಾವ್ರಿಂಕಾ ಇಲ್ಲೂ ವೈಫಲ್ಯ ಮುಂದುವರಿಸಿದರು. ವಾವ್ರಿಂಕಾ ಭರ್ತಿ 4 ಗಂಟೆಯ ಹೋರಾಟದಲ್ಲಿ 7-6, 6-7, 6-7, 6-7ರಿಂದ ಮಿಲೋಸ್ ರಾವೊನಿಕ್​ಗೆ ಶರಣಾದರು. ಡೊಮಿನಿಕ್ ಆಸ್ಟ್ರೇಲಿಯಾದ ವಿಶ್ವ ನಂ.149 ಅಲೆಕ್ಸಿ ಪೊಪಿರಿನ್ ಎದುರು 5-7, 4-6, 0-2 ಹಿನ್ನಡೆಯಲ್ಲಿದ್ದಾಗ ಗಾಯದಿಂದ ಹಿಂದೆ ಸರಿದರು.

ಜೋಕೋ, ಜ್ವೆರೆವ್​ಗೆ ಜಯ

ಕೊನೇ 2 ಗ್ರಾಂಡ್ ಸ್ಲಾಂ ಗೆಲುವಿನೊಂದಿಗೆ ಉತ್ತಮ ಫಾಮರ್್​ನಲ್ಲಿರುವ ಜೋಕೊವಿಕ್ 2ನೇ ಸುತ್ತಿನಲ್ಲಿ ಸುಲಭವಾಗಿ ಗೆದ್ದರು. ಜೋಕೋ 6-3, 7-5, 6-4ರಿಂದ ಫ್ರಾನ್ಸ್​ನ ಜೋ ವಿಲ್ಪೆ ್ರ್ ಸೊಂಗಾರನ್ನು ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಜೋಕೊ ಕೆನಡದ ಡೆನಿಸ್ ಶಫವಲೊವ್​ರನ್ನು ಎದುರಿಸಲಿದ್ದಾರೆ. ಜ್ವೆರೆವ್ 7-6, 6-4, 5-7, 6-7, 6-1ರಿಂದ ಫ್ರಾನ್ಸ್​ನ ಜೆರಿಮಿ ಚಾರ್ಡಿಯನ್ನು ಸೋಲಿಸಿದರು.