2019ನೇ ಏಕದಿನ ವಿಶ್ವಕಪ್​​ಗೆ ಆಸ್ಟ್ರೇಲಿಯಾ ತಂಡ ಪ್ರಕಟ : ತಂಡಕ್ಕೆ ಮರಳಿದ ವಾರ್ನರ್​​, ಸ್ಮಿತ್​​

ಸಿಡ್ನಿ: ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್​​ಗೆ ಆಸ್ಟ್ರೇಲಿಯಾ ಕ್ರಿಕೆಟ್​​ ಮಂಡಳಿ ಸೋಮವಾರ 15 ಆಟಗಾರರ ತಂಡವನ್ನು ಪ್ರಕಟ ಮಾಡಿದೆ. ಚೆಂಡು ವಿರೂಪ ಪ್ರಕರಣಕ್ಕೆ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಸ್ಟೀವ್​​ ಸ್ಮಿತ್​​ ಮತ್ತು ಡೇವಿಡ್​​ ವಾರ್ನರ್​​ ತಂಡಕ್ಕೆ ಮರಳಿದ್ದಾರೆ.


ಅಚ್ಚರಿಯ ಸಂಗತಿಯೆಂದರೆ, ವೇದಿ ಜೋಶ್​​ ಹಜೆಲ್​​ ವುಡ್​​ ಮತ್ತು ಅನುಭವಿ ಬ್ಯಾಟ್ಸ್​ಮನ್​​​​ ಪೀಟರ್​​ ಹ್ಯಾಂಡ್ಸ್​​​ ಕೊಂಬ್​​ ಅವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ಇನ್ನೂ ಎಡಗೈ ಬೌಲರ್​​​​​​ ಉಸ್ಮಾನ್​​ ಖವಾಜ ಮತ್ತು ಶಾನ್​​ ಮಾರ್ಷ್​ ಅವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಖವಾಜ ಮತ್ತು ಮಾರ್ಷ್​ ಇತ್ತೀಚಿನ ದಿನಗಳಲ್ಲಿ ಅಮೋಘ ಪ್ರದರ್ಶನ ತೋರಿದ ಕಾರಣ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆಲ್​​ರೌಂಡರ್​​ಗಳಾದ ಮಾರ್ಕಸ್​​ ಸ್ಟೋನಿಸ್​​ ಹಾಗೂ ಗ್ಲೇನ್​​​ ಮ್ಯಾಕ್ಸ್​​ವೇಲ್​​​ ಹೆಸರು ಪ್ರಕಟವಾಗಿದ್ದು, ತಂಡದ ನಾಯಕತ್ವ ಜವಾಬ್ದಾರಿಯನ್ನು ಆ್ಯರೋನ್​​ ಫಿಂಚ್​​​​​​​​​ ಮುಂದುವರಿಸಲಿದ್ದಾರೆ.


ತಂಡ ಇಂತಿದೆ: ಆ್ಯರೋನ್​​ ಫಿಂಚ್​ (ನಾಯಕ), ಉಸ್ಮಾನ್​​ ಖವಾಜ, ಡೇವಿಡ್ ​​ವಾರ್ನರ್​, ಸ್ಟೀವ್​​ ಸ್ಮಿತ್​, ಶಾನ್​​ ಮಾರ್ಷ್​, ಗ್ಲೇನ್​​​ ಮ್ಯಾಕ್ಸ್​ ವೇಲ್, ಮಾರ್ಕಸ್​​ ಸ್ಟೋನಿಸ್​​, ಆಲೆಕ್ಸ್​​​ ಕ್ಯಾರಿ, ಪ್ಯಾಟ್​​​ ಕಮ್ಮಿನ್ಸ್​​, ಮಿಚೆಲ್​​​​ ಸ್ಟಾರ್ಕ್​, ಜಾಯ್​​​​ ರಿಚರ್ಡ್​ಸನ್, ನಾಥನ್​​​​​ ಕೌಂಟರ್​​​-ನೈಲ್​, ಜಾಸನ್​​​​​​​​ ಬೆಹ್ರನ್​​​ಡ್ರಾಫ್​, ನಾಥಲ್​​ ಲಿಯಾನ್​​, ಆ್ಯಡಮ್​​​​​​​ ಜಂಪಾ. (ಏಜನ್ಸೀಸ್​)