ಟಾಸ್​ಗೆದ್ದು ಬ್ಯಾಟಿಂಗ್​ ಮಾಡುತ್ತಿರುವ ಆಸ್ಟ್ರೇಲಿಯಾ: 8 ಓವರ್​ಗಳಲ್ಲಿ 19 ರನ್​, ಮೂರು ವಿಕೆಟ್​

ಬರ್ಮಿಂಗ್​ಹ್ಯಾಂ: ವಿಶ್ವಕಪ್ 2019ರ ಎರಡನೇ ಸೆಮಿಫೈನಲ್​ ಪಂದ್ಯ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ಎಜ್​ಬಾಸ್ಟನ್​ ಮೈದಾನದಲ್ಲಿ ಆರಂಭವಾಗಿದ್ದು, ಆಸ್ಟ್ರೇಲಿಯಾ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಆರಂಭದಲ್ಲೇ ಮೂರು ವಿಕೆಟ್​ ಕಳೆದುಕೊಂಡು ಆಟ ಮುಂದುವರಿಸಿದೆ.

ಸದ್ಯ 8 ಓವರ್​ಗಳು ಮುಕ್ತಾಯವಾಗಿದ್ದು ಆಸ್ಟ್ರೇಲಿಯಾ ತನ್ನ ಮೂರು ವಿಕೆಟ್​ಗಳನ್ನು ಕಳೆದುಕೊಂಡು 18 ರನ್​ ಗಳಿಸಿದೆ. ಸ್ಟೀವನ್​ ಸ್ಮಿತ್​ ಮತ್ತು ಅಲೆಕ್ಸ್​ ಕ್ಯಾರಿ ಆಟವಾಡುತ್ತಿದ್ದಾರೆ. ಸ್ಮಿತ್​ 19 ಬೌಲ್​ ಗಳಿಗೆ 2 ರನ್​ ಪೇರಿಸಿದ್ದರೆ, ಅಲೆಕ್ಸ್​ ಕ್ಯಾರಿ 5 ಬಾಲ್​ಗಳಿಗೆ 4 ರನ್ ತೆಗೆದಿದ್ದಾರೆ.

ಇಂಗ್ಲೆಂಡ್​ ಬೌಲರ್​ಗಳ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿದೆ. ಡೆವಿಡ್​ ವಾರ್ನರ್​ ಹಾಗೂ ಪೀಟರ್​ಹ್ಯಾಂಡ್ಸ್​ಕೋಂಬ್​ ವಿಕೆಟ್​ನ್ನು ಇಂಗ್ಲೆಂಡ್​ನ ಕ್ರಿಸ್​ ವೋಕ್ಸ್​ ಕಬಳಿಸಿದ್ದಾರೆ. ಆ್ಯರೋನ್​ ಫಿಂಚ್​ ಅವರು ಜೋಫ್ರಾ ಬೌಲ್​ಗೆ ಔಟಾಗಿದ್ದಾರೆ.

ಸದ್ಯ ಇಂಗ್ಲೆಂಡ್​ ಬೌಲರ್​ಗಳು ಆಸ್ಟ್ರೇಲಿಯಾ ಬ್ಯಾಟ್ಸ್​ಮೆನ್​ಗಳನ್ನು ಕಟ್ಟಿಹಾಕಿದ್ದಾರೆ.
ನಿನ್ನೆ ನಡೆದ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ನ್ಯೂಜಿಲೆಂಡ್​ ಈಗಾಗಲೇ ಫೈನಲ್​ ಪ್ರವೇಶಿಸಿದೆ.

Leave a Reply

Your email address will not be published. Required fields are marked *