41 ವರ್ಷಗಳ ಬಳಿಕ ತವರಿನಲ್ಲಿ ಐತಿಹಾಸಿಕ ಸಾಧನೆ ತೋರಲು ಸಿದ್ಧವಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್​ ತಂಡ

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್​​ ತಂಡ ತವರಿನಲ್ಲಿ 41 ವರ್ಷಗಳ ಬಳಿಕ ದೀರ್ಘ ಆವೃತ್ತಿಯನ್ನು ಆಡಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್​​ ಮಂಡಳಿ ತಿಳಿಸಿದೆ.

1970ರ ಬಳಿಕ ಆಸೀಸ್​ ತಂಡದ ತವರಿನಲ್ಲಿ ಪಾಕಿಸ್ತಾನ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ಎದುರು ದೀರ್ಘಾವಧಿಯ ಟೂರ್ನಿಗಳಲ್ಲಿ ಪ್ರದರ್ಶನ ನೀಡಲಿದೆ. 2019ನೇ ಏಕದಿನ ವಿಶ್ವಕಪ್​​ ಮುಗಿದ ಬಳಿಕ ಈ ಮೂರು ತಂಡಗಳೊಂದಿಗೆ ಆಸ್ಟ್ರೇಲಿಯಾ ತವರಿನಲ್ಲಿ ಪ್ರದರ್ಶನ ತೋರಲಿದೆ ಎಂದು ಕ್ರಿಕೆಟ್​​ ಮಂಡಳಿ ಸ್ಪಷ್ಟಪಡಿಸಿದೆ.

ನ್ಯೂಜಿಲೆಂಡ್​​ ಮತ್ತು ಪಾಕಿಸ್ತಾನ ತಂಡಗಳ ಎದುರು ಟೆಸ್ಟ್​​​ ಸರಣಿ ಹಾಗೂ ಶ್ರೀಲಂಕಾ ಎದುರು ಟಿ-20 ಸರಣಿಗಳನ್ನು ಆಡಲಿದೆ.

ಟೆಸ್ಟ್​​​ ಸರಣಿ
ಇದೇ ನವೆಂಬರ್​​​​​ 21-25 ರಂದು ಬ್ರಿಸ್ಬೇನ್​​​​​​​ನಲ್ಲಿ ಪಾಕಿಸ್ತಾನ ಎದುರು ಮೊದಲ ಟೆಸ್ಟ್​​ ನಡೆದರೆ, ಎರಡನೇ ಟೆಸ್ಟ್​​​​​​​ ನವೆಂಬರ್​​​​​ 29 ರಿಂದ ಡಿಸೆಂಬರ್​​​ 3ವರೆಗೆ ಆಡಿಲೆಡ್​​ನಲ್ಲಿ ನಡೆಯಲಿದೆ. ಇನ್ನೂ ನ್ಯೂಜಿಲೆಂಡ್​​​​​​ ಎದುರು ಮುಂದಿನ ವರ್ಷ ಜನವರಿ 3ರವರೆಗೂ ಮೂರು ಟೆಸ್ಟ್​​ ಪಂದ್ಯಗಳನ್ನು ಆಸೀಸ್​​ ಆಡಲಿದೆ.

ಏಕದಿನ ಸರಣಿ
2020 ಮಾರ್ಚ್​ 13 ರಂದು ನ್ಯೂಜಿಲೆಂಡ್​​​ ವಿರುದ್ಧ ಮೊದಲ ಏಕದಿನ, 15 ಎರಡನೇ ಏಕದಿನ ಮತ್ತು 20 ರಂದು ಮೂರನೇ ಏಕದಿನ ಪಂದ್ಯಗಳಲ್ಲಿ ಪ್ರದರ್ಶನ ತೋರಲಿದೆ.

ಟಿ-20 ಸರಣಿ
ಇದೇ ಅಕ್ಟೋಬರ್​​​​​ 27, 30 ಮತ್ತು ನವೆಂಬರ್​​ 1 ರಂದು ಶ್ರೀಲಂಕಾ ಎದುರು ಮೂರು ಟಿ-20 ಪಂದ್ಯಗಳಲ್ಲಿ ಆಡಲಿದೆ. ಇನ್ನು ಪಾಕಿಸ್ತಾನ ತಂಡದ ಎದುರು ನವೆಂಬರ್​​​ 3, 5 ಮತ್ತು 8 ರಂದು ಮೂರು ಚುಟಕು ಪಂದ್ಯಗಳಲ್ಲಿ ಆಸೀಸ್​​ ಉತ್ತಮ ಆಟ ಆಡುವ ವಿಶ್ವಾಸದಲ್ಲಿದೆ. (ಏಜನ್ಸೀಸ್​)