ಆಸ್ಟ್ರೇಲಿಯಾ ವಿರುದ್ಧ ಟಿ-20, ಟೆಸ್ಟ್​ ಸರಣಿಗಳಿಗೆ ಟೀಂ ಇಂಡಿಯಾ ಪ್ರಕಟ: ಟಿ- 20 ಸರಣಿಗಳಲ್ಲಿ ಧೋನಿಗಿಲ್ಲ ಸ್ಥಾನ

ನವದೆಹಲಿ: ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ -20 ಸರಣಿಗೆ ಭಾರತ ತಂಡದ ಆಟಗಾರರ ಪಟ್ಟಿ ಪ್ರಕಟವಾಗಿದ್ದು, ಎಂ.ಎಸ್​.ಧೋನಿ ಹೆಸರು ಇಲ್ಲ. ವಿರಾಟ್​ ಕೊಹ್ಲಿ ನಾಯಕತ್ವ, ರೋಹಿತ್​ ಶರ್ಮಾ ಉಪನಾಯಕತ್ವ ಇರಲಿದೆ.

ತಂಡದಲ್ಲಿ ಸ್ಪಿನ್ನರ್​ ಬೌಲರ್​ಗಳಾದ, ಕುಲದೀಪ್​ ಯಾದವ್​, ಯಜುವೇಂದ್ರ ಚಹಲ್​, ವಾಷಿಂಗ್ಟನ್​ ಸುಂದರ್​, ಕ್ರುನಲ್​ ಪಾಂಡ್ಯಾ, ಮತ್ತು ವೇಗದ ಬೌಲರ್​ಗಳಾದ ಭುವನೇಶ್ವರ್​ ಕುಮಾರ್​, ಜಸ್​ಪ್ರೀತ್​ ಬುಮ್ರಾ, ಉಮೇಶ್​ ಯಾದವ್​, ಖಲೀಲ್​ ಅಹ್ಮದ್​ ಇದ್ದಾರೆ.

ಧೋನಿಯವರು ಈ ಆರನೇ ಟಿ-20 ಸರಣಿಯಲ್ಲಿ ಆಟವಾಡುತ್ತಿಲ್ಲ. ನಾವು ಇನ್ನೊಬ್ಬ ಕೀಪರ್​ಗಾಗಿ ಹುಡುಕುತ್ತಿದ್ದೇವೆ. ಇದರ ಅರ್ಥ ಇನ್ನು ಮುಂದೆ ಧೋನಿ ಟಿ-20 ಪಂದ್ಯಗಳಲ್ಲಿ ಆಡುವುದೇ ಇಲ್ಲ ಎಂದು ಅರ್ಥವಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಕೆ.ಪ್ರಸಾದ್ ಹೇಳಿದ್ದಾರೆ.
ಅದಾದ ಬಳಿಕ ನಡೆಯಲಿರುವ ಟೆಸ್ಟ್​ ಪಂದ್ಯಗಳಿಗಳಲ್ಲಿ ಬಹುಕಾಲದ ನಂತರ ಮುರಳಿ ವಿಜಯ್​, ಪಾರ್ಥಿವ್​ ಪಟೇಲ್​ ಸ್ಥಾನ ಪಡೆದಿದ್ದಾರೆ. ಇನ್ನು ರೋಹಿತ್​ ಶರ್ಮಾ ಕೂಡ ಟೆಸ್ಟ್​ನಲ್ಲಿ ಆಡಲಿದ್ದು, ಅವರ ಏಕದಿನ ಪಂದ್ಯಗಳ ಪಾರ್ಟ್ನರ್​ ಶಿಖರ್​ ಧವನ್​ ಅವರನ್ನು ಕೈಬಿಡಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಟಿ-20 ಸರಣಿಗೆ ಭಾರತ ತಂಡ
ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ.ಎಲ್​.ರಾಹುಲ್​, ಶ್ರೇಯಸ್​ ಅಯ್ಯರ್​, ಮನೀಶ್​ ಪಾಂಡೆ, ದಿನೇಶ್​ ಕಾರ್ತೀಕ್​, ರಿಶಬ್​ ಪಂತ್​(ವಿಕೆಟ್​ ಕೀಪರ್​), ಕುಲದೀಪ್​ ಯಾದವ್​, ಯಜುವೇಂದ್ರ ಚಹಲ್​, ವಾಷಿಂಗ್ಟನ್​ ಸುಂದರ್​, ಕ್ರುನಲ್​ ಪಾಂಡ್ಯಾ, ಭುವನೇಶ್ವರ್​ ಕುಮಾರ್, ಜಸ್​ಪ್ರೀತ್​​ ಬುರ್ಮಾ, ಉಮೇಶ್​ ಯಾದವ್​, ಖಲೀಲ್​ ಅಹಮದ್​.

ನಾಲ್ಕು ಟೆಸ್ಟ್​ ಪಂದ್ಯಗಳಿಗೆ ತಂಡ
ವಿರಾಟ್​ ಕೊಹ್ಲಿ, ಎಂ.ವಿಜಯ್​, ಕೆ.ಎಸ್​.ರಾಹುಲ್, ಪ್ರಥ್ವಿ ಷಾ, ಪುಜಾರಾ, ಅಜಿಂಕ್ಯಾ ರಹಾನೆ, ಹುನುಮಾ ವಿಹಾರಿ, ರೋಹಿತ್​ ಶರ್ಮಾ, ರಿಶಬ್​ ಪಂಟ್​, ಪಾರ್ಥಿವ್​ ಪಟೇಲ್​, ಆರ್​.ಅಶ್ವಿನ್​, ಆರ್.ಜಡೇಜಾ, ಕುಲದೀಪ್​ ಯಾದವ್​, ಮಹಮ್ಮದ್​ ಶಮಿ, ಇಶಾಂತ್​ ಶರ್ಮಾ, ಉಮೇಶ್​ ಯಾದವ್​, ಬುರ್ಮಾ, ಭುವನೇಶ್ವರ್​ ಕುಮಾರ್​.