ವಾರ್ನರ್​ ಭರ್ಜರಿ ಶತಕ, ಪಾಕಿಸ್ತಾನಕ್ಕೆ 308 ರನ್​ ಗುರಿ ನೀಡಿದ ಆಸ್ಟ್ರೇಲಿಯಾ

ಟೌಂಟನ್​: ವಿಶ್ವಕಪ್​ನ 17ನೇ ಪಂದ್ಯದಲ್ಲಿ ಡೇವಿಡ್​ ವಾರ್ನರ್​ (107) ಭರ್ಜರಿ ಶತಕ ಮತ್ತು ಆರೋನ್​ ಫಿಂಚ್​ (82) ಆಕರ್ಷಕ ಅರ್ಧ ಶತಕದ ನೆರವಿನಿಂದ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡ 307 ರನ್​ ಗಳಿಸಿ ಆಲೌಟಾಗಿದ್ದು, ಪಾಕಿಸ್ತಾನಕ್ಕೆ ಗೆಲ್ಲಲು 308 ರನ್​ ಗುರಿ ನೀಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ವಾರ್ನರ್​ ಮತ್ತು ಫಿಂಚ್​ ಭರ್ಜರಿ ಆರಂಭ ಒದಗಿಸಿದರು. ಇವರ ಜೋಡಿ ಮೊದಲ ವಿಕೆಟ್​ಗೆ 146 ರನ್​ ಕಲೆ ಹಾಕಿತು. ಮೊಹಮ್ಮದ್​ ಆಮಿರ್​ ಎಸೆತದಲ್ಲಿ ಆರೋನ್​ ಫಿಂಚ್​ ಔಟಾದರು. ನಂತರ ಕ್ರೀಸ್​ಗಿಳಿದ ಸ್ಮಿತ್ (10)​, ಮ್ಯಾಕ್ಸ್​ವೆಲ್​ (20), ಶಾನ್​ ಮಾರ್ಷ್​ (23), ಉಸ್ಮಾನ್​ ಖವಾಜಾ (18) ಹೆಚ್ಚು ರನ್​ ಗಳಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಆಕರ್ಷಕ ಆಟವಾಡಿದ ವಾರ್ನರ್​ ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 49 ಓವರ್​ಗಳಲ್ಲಿ 307 ರನ್​ ಗಳಿಸಿ ಆಲೌಟಾಯಿತು.

ಪಾಕಿಸ್ತಾನದ ಪರ ಮೊಹಮದ್​ ಆಮಿರ್​ 30 ಕ್ಕೆ 5 ಹಾಗೂ ಶಾಹಿನ್​ ಅಫ್ರೀದಿ 70 ಕ್ಕೆ 2 ವಿಕೆಟ್​ ಪಡೆದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *